ಕನಕ: ರೈಟ್ ರೈಟ್...

7

ಕನಕ: ರೈಟ್ ರೈಟ್...

Published:
Updated:
ಕನಕ: ರೈಟ್ ರೈಟ್...

ಝೀ ಕನ್ನಡ ವಾಹಿನಿಯಲ್ಲಿ `ಕನಕ~ ಹೆಸರಿನ ಹೊಸ ಧಾರಾವಾಹಿ ಆರಂಭವಾಗಿದೆ. ಇದನ್ನು `ಮಿಲನ~ ಪ್ರಕಾಶ್ ನಿರ್ದೇಶಿಸಿದ್ದಾರೆ.ಕಂಡಕ್ಟರ್ ಒಬ್ಬಳ ಜೀವನದ ಏಳು ಬೀಳುಗಳ ಕಥಾ ಹಂದರವೇ `ಕನಕ~. ಜೊತೆಗೆ ಇದು ಮಹಿಳಾ ಕಂಡಕ್ಟರ್‌ಗಳ ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಥಮ ಧಾರಾವಾಹಿ ಎಂದು ತಂಡ ಹೇಳಿಕೊಂಡಿದೆ.ಪ್ರಕಾಶ್ ಅವರ ಹಿಂದಿನ `ಲಕುಮಿ~ ಧಾರಾವಾಹಿಯಲ್ಲಿ ನಟಿಸಿದ್ದ ಸುಷ್ಮಾ `ಕನಕ~ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಸುನೀಲ್ ಪುರಾಣಿಕ್, ಋತು, ಗೌತಮ್, ಬಿ.ಎಂ.ವೆಂಕಟೇಶ್, ಖುಷಿ, ವೀಣಾ ವೆಂಕಟೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.ಧಾರಾವಾಹಿಯ ಸಂಚಿಕೆ ನಿರ್ದೇಶಕರು ಭಾರತೀಶ್. ಶಂಕರ್ ಬಿಲ್ಲೆಮನೆ ಚಿತ್ರಕತೆ, ಕೇಶವ ಚಂದ್ರ ಸಂಭಾಷಣೆ ಬರೆದಿದ್ದಾರೆ. ಜು.2ರಿಂದ ರಾತ್ರಿ 9 ಗಂಟೆಗೆ `ಕನಕ~ ಪ್ರಸಾರವಾಗುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry