ರಾಯಭಾಗ: ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿ.ಐ.ಟಿ.ಯು) ತಾಲ್ಲೂಕು ಘಟಕದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಒತ್ತಾಯಿಸಲು ಅಂಗನವಾಡಿ ಕೇಂದ್ರಗಳನ್ನು ಬಂದ್ ಅಂಗನವಾಡಿ ನೌಕರರು ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು.

ಪಟ್ಟಣದ ಸಿದ್ಧೇಶ್ವರ ದೇವಾಲಯದಿಂದ ಮಂಗಳವಾರ ಬೃಹತ್ ಮೆರವಣಿಗೆ ಮುಖಾಂತರ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮ್ಮ ಬೇಡಿಕೆಗಳ ಘೋಷಣೆಯನ್ನು ಕೂಗುತ್ತ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.

ಬೆಲೆ ಏರಿಕೆ ತಡೆಗಟ್ಟುವದು, ಹತ್ತು ಸಾವಿರ ರೂಪಾಯಿ ಕನಿಷ್ಟ ಕೂಲಿ ನೀಡುವುದು, ಗ್ಯಾರಂಟಿ ನಿವೃತ್ತಿ ವೇತನ, ಅಂಗನವಾಡಿ ನೌಕರರನ್ನು ಕಾಯಂ ಗೊಳಿಸುವುದು, ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಸಹಾಯಕಿಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಸಿದರು.

ಇಲ್ಲಿಯವರೆಗೆ ಅತೀ ಕಡಿಮೆ ಗೌರವ ಧನದಲ್ಲಿ ದುಡಿದು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿವೃತ್ತಿ ಹೊಂದಿದ್ದಾರೆ ಅವರ ಕುಟುಂಬದಲ್ಲಿನ ಯಾರಾದರೊಬ್ಬ ರನ್ನು ನೇಮಕ ಮಾಡಿಕೊಳ್ಳಬೇಕು ಸೇರಿದಮತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರವನ್ನು ತಹಶೀಲ್ದಾರ ಬಿ.ಡಿ.ಗುಗರಡ್ಡಿ ಅವರಿಗೆ ನೀಡಲಾಯಿತು.

ಸಂಘದ ಅಧ್ಯಕ್ಷೆ ಚನ್ನಮ್ಮ ಗಡಕರಿ ಉಪಾಧ್ಯಕ್ಷೆ ಆಯೇಷಾ ದೇಸಾಯಿ ಕಾರ್ಯದರ್ಶಿ ಮಹಾದೇವಿ ತರಾಳ, ಎಸ್.ಆರ್. ಚೊಳಚಗುಡ್ಡ, ಎಮ್.ಎಚ್ ನದಾಫ್, ಎಸ್.ಯು.ನದಾಫ್, ಎಸ್.ಎಲ್.ವಾರದ, ಎಸ್.ಡಿ.ಪೋಳ, ಬೇಬಿ ಶೇಡಶಾಳೆ ಸೇರಿದಂತೆ ತಾಲ್ಲೂಕಿನ ಅಂಗನವಾಡಿ ನೌಕರರು ಉಪಸ್ಥಿತರಿದ್ದರು.

ಉದ್ಯೋಗ ಭದ್ರತೆಗೆ ಒತ್ತಾಯ
ಹುಕ್ಕೇರಿ: ಕನಿಷ್ಠ ವೇತನ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ತಾಲೂಕಿನಲ್ಲಿನ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರ ಸಂಘದವರು ತಹಶಿಲ್ದಾರಮೂಲಕ ಸರಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಸ್ಥಳಿಯ ಅಡವಿಸಿದ್ಧೇಶ್ವರ ಮಠದಿಂದ ಸಭೆ ಸೇರಿದ ಕಾರ್ಯಕರ್ತರು ತಮ್ಮ ಸಮಲೋಚನೆ ನಡೆಸಿದರು. ಮಧ್ಯಾಹ್ನ ತಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಘೋಷಣೆ ಹಾಕುತ್ತ ಬಸ್ನಿಲ್ದಾಣ, ಸರ್ಕಲ್ ಮೂಲಕ ಪ್ರತಿಭಟಣೆಯ ಮೆರವಣಿಗೆ ನಡೆಸಿ ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು.

ಸಂಘಟನೆಯ ಪ್ರಮುಖರು ಸಭೆ ಮಾತನಾಡಿ, ಹಲವು ವರ್ಷಗಳಿಂದ ತಮಗೆ ಕಡಿಮೆ ವೇತನ ನೀಡುತ್ತಿದ್ದು, ಇಂದಿನ ಬೆಲೆಗಳಿಗೆ ಹೋಲಿಸಿದರೆ ಏತಕ್ಕೂ ಸಾಲುವದಿಲ್ಲ ಎಂದು ಅವರು ಅಸಮಾಧಾನ ವ್ಯಕ್ಯಪಡಿಸಿದ್ದರು.

ಸರ್ಕಾರ ಹಲವು ಬಾರಿ ಭರವಸೆ ನೀಡಿದ್ದರೂ ಈವರೆಗೆ ಈಡೇರಿಸಿಲ್ಲ. ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಮತ್ತು ತಮ್ಮ ಬೇಡಿಕೆ ಈಡೇರಿಸುವಂತೆ ಎಂದು ಒತ್ತಾಯಿಸಿ ತಹಶೀಲ್ದಾರ ಎ.ಐ. ಅಕ್ಕಿವಾಟೆ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಚಂದ್ರವ್ವಾ ಮಗದುಮ್ಮ ,ಜಿ.ಎಲ್ ರಾಜಾಪುರೆ, ಕೆ.ಬಿ ಕೌಜುಲಗಿ. ಗುರಲಿಂಗವ್ವ ಪಂಕನ್ನವರ, ಗಂಗುತಾಯಿ ಚೌಗಲಾ, ನಿರ್ಮಲಾ ಚೌಗಲಾ, ಗಂಗವ್ವಾ ಕಾಂಬಳೆ ಆರ್.ಆರ್. ಬಡೆಪ್ಪಗೋಳ, ಎಲ್.ಬಿ. ತಳವಾರ, ಆಶಾ ವೀರಗೌಡ, ನಿರ್ಮಲಾ, ಶಮ್ಸಾದ ಹೊನಗೇಕರ, ದುಂಡವ್ವಾ ಅಂಬಾರಿ, ಮರಿಯಮ್ ಕಿಲ್ಲೇದಾರ ಸೇರಿದಂತೆ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.