ಸೋಮವಾರ, ಜುಲೈ 26, 2021
23 °C

ಕನ್ನಡ ಸಿನಿಮಾ ‘ತಿಥಿ’ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕನ್ನಡಿಗ ನಿರ್ದೇಶಕ ರಾಮ್‌ ರೆಡ್ಡಿ ಅವರ ಚೊಚ್ಚಲ ಚಲನಚಿತ್ರ ‘ತಿಥಿ’ ಲೊಕೆರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿದೆ.ಪ್ಯಾರಡೋ ಡಿ'ಒರೊ ಸಿನೆಸ್ಟಿ ಡೆಲ್‌ ಪ್ರೆಸೆಂಟ್‌ ಪ್ರೆಮಿಯೊ ನೆಸಿನ್ಸ್‌ ಮತ್ತು ಸ್ವಚ್‌ ಫಸ್ಟ್ ಫೀಚರ್ ಪ್ರಶಸ್ತಿ ತಿಥಿ ಚಿತ್ರಕ್ಕೆ ದೊರೆತಿದೆ. ಈ ಕನ್ನಡ ಚಿತ್ರದಲ್ಲಿ ವೃತಿಪರರಲ್ಲದ ಕಲಾವಿದರು ಅಭಿನಯಿಸಿದ್ದಾರೆ.ಕಳೆದ ಎಂಟು ವರ್ಷದ ಅವಧಿಯಲ್ಲಿ ಭಾರತದಿಂದ ಈ ಚಿತ್ರೋತ್ಸವಕ್ಕೆ ಯಾವುದೇ ಸಿನಿಮಾಗಳು ಆಯ್ಕೆ ಆಗಿರಲಿಲ್ಲ. ಅದಕ್ಕೂ ಮೊದಲು ‘ಲಗಾನ್‌,    ‘ಬ್ಲ್ಯಾಕ್‌ ಫ್ರೈಡೆ’ ಚಲನಚಿತ್ರಗಳು  ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.