ಬುಧವಾರ, ಏಪ್ರಿಲ್ 21, 2021
30 °C

ಕಮ್ರನ್ ಅಕ್ಮಲ್ ತಲೆದಂಡಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೆಟ್ಟದಾಗಿ ವಿಕೆಟ್ ಕೀಪಿಂಗ್ ಮಾಡಿದ ಪಾಕಿಸ್ತಾನದ ಕಮ್ರನ್ ಅಕ್ಮಲ್ ಅವರನ್ನು ತಂಡದಿಂದ ಕೈಬಿಡುವಂತೆ ಆಕ್ರೋಶ ಭುಗಿಲೆದ್ದಿದೆ.ಕ್ಯಾಂಡಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕಿವೀಸ್ ಪಡೆಯ ರಾಸ್ ಟೇಲರ್ 0 ಹಾಗೂ 4 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಕಮ್ರನ್ ಕ್ಯಾಚ್ ಕೈಚೆಲ್ಲಿದ್ದರು.ಬಳಿಕ ಟೇಲರ್ 124 ಎಸೆತಗಳಲ್ಲಿ ಅಜೇಯ 131 ರನ್ ಗಳಿಸಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳಿದ್ದವು. ಈ ಪರಿಣಾಮ ತಂಡ 302 ರನ್ ಗಳಿಸಿತ್ತು. ಆದರೆ ಈ ಮೊತ್ತ ಬೆನ್ನಟ್ಟಿದ್ದ ಪಾಕ್ 110 ರನ್‌ಗಳ ಸೋಲು ಕಂಡಿತ್ತು.ಹಾಗಾಗಿ ಅಕ್ಮಲ್ ಅವರನ್ನು ತಂಡದಿಂದ ಕೈಬಿಡುವಂತೆ ಪಾಕ್ ಮಾಧ್ಯಮಗಳು ಹಾಗೂ ಅಭಿಮಾನಿಗಳು ಆಗ್ರಹಿಸಿದ್ದಾರೆ. ಅಭಿಮಾನಿಗಳು ಫೇಸ್‌ಬುಕ್, ಬ್ಲಾಗ್ ಹಾಗೂ ಟ್ವಿಟರ್ ಮೂಲಕ ಕಮ್ರನ್ ಅವರನ್ನು ಟೀಕಿಸುತ್ತಿದ್ದಾರೆ, ತಮಾಷೆ ಮಾಡುತ್ತಿದ್ದಾರೆ.‘ಅವರನ್ನು ತಂಡದಿಂದ ವಜಾಗೊಳಿಸಬೇಕು. ತಕ್ಷಣವೇ ಸ್ವದೇಶಕ್ಕೆ ಕಳುಹಿಸಬೇಕು. ಅಗತ್ಯವಿದ್ದರೆ ಸುಮ್ಮನೇ ಗಾಯವಾಗಿದೆ ಎಂದು ತಂಡದ ಆಡಳಿತ ಸುಳ್ಳು ಹೇಳಿ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಕಮ್ರನ್ ಪಾಕ್ ಕ್ರಿಕೆಟ್‌ನ ದುರಂತ’ ಂದಿದ್ದಾರೆ.ಶ್ರೀಲಂಕಾ ಹಾಗೂ ಕೆನಡಾ ವಿರುದ್ಧ ಕೂಡ ಈ ವಿಕೆಟ್ ಕೀಪರ್ ತುಂಬಾ ತಪ್ಪುಗಳನ್ನು ಎಸಗಿದ್ದರು. ಬ್ಯಾಟಿಂಗ್‌ನಲ್ಲೂ ವೈಫಲ್ಯ ಕಾಣುತ್ತಿದ್ದಾರೆ‘ಈ ಸಂದರ್ಭದಲ್ಲಿ ನೀವು ಏನು ಮಾಡಲು ಸಾಧ್ಯವಿಲ್ಲ. ಕಮ್ರನ್ ಅವರನ್ನು ಆರಂಭಿಕ ಆಟಗಾರನಾಗಿ ಕಳುಹಿಸಿ’ ಎಂದು ಮಾಜಿ ನಾಯಕ ಇಮ್ರಾನ್ ಖಾನ್ ಸಲಹೆ ನೀಡಿದ್ದಾರೆ.‘ಈ ಸಂದರ್ಭದಲ್ಲಿ ಅಭಿಮಾನಿಗಳು ಸಮಾಧಾನದಿಂದ ಇರಬೇಕು. ಕಮ್ರನ್ ಈಗ ತುಂಬಾ ಕಷ್ಟಪಡುತ್ತಿದ್ದಾರೆ. ಹಾಗಾಗಿ ಹಿಂದಿನ ಪಂದ್ಯ ಮರೆತು ಈಗ ಮುಂದಿನ ಪಂದ್ಯಕ್ಕೆ ನಾವು ಯೋಜನೆ ರೂಪಿಸಬೇಕು. ಆದರೆ ಕೇವಲ ಕಮ್ರನ್ ಅವರನ್ನು ಗುರಿಯಾಗಿಸಿ ಟೀಕೆ ಮಾಡುವುದನ್ನು ನಾನು ಸಹಿಸಲಾರೆ’ ಎಂದು ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ನುಡಿದಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ತಂಡದ ಆಡಳಿತ ಕಮ್ರನ್ ಅವರನ್ನು ಬೆಂಬಲಿಸಬೇಕು. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವು ನೀಡಬೇಕು. ಅವರ ನಡೆಯಲ್ಲಿ ತಾಂತ್ರಿಕ ಸಮಸ್ಯೆಗಳಿವೆ. ನನಗೆ ಅವಕಾಶ ನೀಡಿದರೆ ಅದಕ್ಕೆ ಖಂಡಿತ ಪರಿಹಾರ ನೀಡುತ್ತೇನೆ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.