ಬುಧವಾರ, ಆಗಸ್ಟ್ 12, 2020
27 °C

ಕರವೇ ದಶಮಾನೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕನ್ನಡ ಭಾಷೆಯು ಕನ್ನಡ ಪರ ಸಂಘಟನೆಗಳಿಂದ ಉಳಿದಿದೆ ವಿನಃ ಸರ್ಕಾರದಿಂದ ಅಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.ನಗರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಮಾತನಾಡಲು ಹಿಂಜರಿಕೆ ಬೇಡ ಎಂದರು.ಕರವೇ ರಾಜ್ಯದಲ್ಲಿ 18 ಸಾವಿರ ಶಾಖೆ ಹೊಂದಿದ್ದು, 62 ಲಕ್ಷ ಸದಸ್ಯರು ಇದ್ದಾರೆ. ಕನ್ನಡ ಭಾಷೆ, ನೆಲ, ಜಲದ ಉಳಿವಿಗಾಗಿ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್, ತುಮಕೂರು ವಿ.ವಿ. ಮೌಲ್ಯಮಾಪನಾ ವಿಭಾಗದ ಕುಲಸಚಿವ ಪ್ರೊ.ಲಕ್ಷ್ಮೀಕಾಂತ್ ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಗೋವಿಂದರಾಜು, ಜೆಡಿಎಸ್ ಮುಖಂಡ ಎಲ್.ಪುಟ್ಟೀರಪ್ಪ, ಗುತ್ತಿಗೆದಾರ ನರಸೇಗೌಡ, ಸೌರಭ ನರ್ಸಿಂಗ್ ಹೋಂನ ಸೌಭಾಗ್ಯ ರತ್ನ ಇದ್ದರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗೋವಿಂದರಾಜು, ಟಿ.ವಿ.ರಾಜು, ನಟರಾಜ, ಡೇವಿಡ್, ಬಸವರಾಜು, ಭೋಗನರಸಿಂಹ, ರವೀಂದ್ರ,ಬಾಬು ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಶಿಲ್ಪಕಲಾ, ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಸುಮುಖ್ ವಿ.ಮಾಕಂ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.