ಶನಿವಾರ, ಜನವರಿ 18, 2020
18 °C

ಕರ್ನಾಟಕ ತಂಡಗಳಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಸೀನಿಯರ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿವೆ. ಮಂಗಳವಾರ ನಡೆದ ಲೀಗ್‌ ಪಂದ್ಯಗಳಲ್ಲಿ ಕರ್ನಾಟಕದ ತಂಡಗಳು ಸುಲಭ ಗೆಲುವು ಪಡೆದವು. ಪುರುಷರ ತಂಡ 25-07, 25-14, 25-12 ರಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಮಣಿಸಿ ಸತತ ಮೂರನೇ ಜಯ ಸಾಧಿಸಿತು. ಮಹಿಳಾ ತಂಡದವರು 25-16, 25-18, 25-15 ರಲ್ಲಿ ಜಾರ್ಖಂಡ್‌ ವಿರುದ್ದ ಗೆಲುವು ಪಡೆದರು.

ಪ್ರತಿಕ್ರಿಯಿಸಿ (+)