ಕಳ್ಳಬಟ್ಟಿ ಮುಕ್ತ ರಾಜ್ಯ ಮಾಡಲು ಬದ್ಧ

7

ಕಳ್ಳಬಟ್ಟಿ ಮುಕ್ತ ರಾಜ್ಯ ಮಾಡಲು ಬದ್ಧ

Published:
Updated:

ಬೆಂಗಳೂರು: ಕಳ್ಳಬಟ್ಟಿ ಮುಕ್ತ ರಾಜ್ಯ ಮಾಡಲು ಬದ್ಧ ಇರುವುದಾಗಿ ಹೇಳಿ ರುವ ಅಬಕಾರಿ ಸಚಿವ ಎಂ.ಪಿ. ರೇಣು ಕಾಚಾರ್ಯ ಅವರು ಈ ದಂಧೆ ಯಿಂದ ಹೊರಬರುವ ಜನರಿಗೆ ಪುನ ರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.ಕಳ್ಳಬಟ್ಟಿ ದಂದೆ ನಿಲ್ಲಿಸಿ, ಸಮಾಜದ ಮುಖ್ಯವಾಹಿನಿಗೆ ಬರುವ ಜನರಿಗೆ ಇದರ ಅನುಕೂಲ ಕಲ್ಪಿಸಲಾಗುವುದು. ಈ ಕುರಿತ ಸಮೀಕ್ಷೆಗೆ ಆದೇಶ ನೀಡಿದ್ದು, 15 ದಿನಗಳಲ್ಲಿ ವರದಿ ಲಭ್ಯವಾಗಲಿದೆ ಎಂದರು. ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ,ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತ ಅಭಿವದ್ಧಿ ನಿಗಮಗಳ ಮೂಲಕ ಪುನ ರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು. ಕಳ್ಳಬಟ್ಟಿ ದಂದೆ ಹೆಚ್ಚಾಗಿ ಬೆಳಗಾವಿ, ಬಾಗಲಕೋಟೆ, ಕಾರವಾರ ಮುಂತಾಡೆಡೆ ಇದೆ. ಇಂತಹ ಕಡೆ ಪುನರ್ವಸತಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಉಡುಪಿ, ಚಾಮರಾಜನಗರ, ಕೊಪ್ಪಳ ಜಿಲ್ಲೆಗ ಳನ್ನು ಕಳ್ಳಬಟ್ಟಿ ಮುಕ್ತ ಜಿಲ್ಲೆಗಳೆಂದು ಘೋಷಣೆ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry