ಗುರುವಾರ , ಮೇ 6, 2021
23 °C

ಕಸ ಮುಕ್ತಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆ. ಪಿ. ನಗರದ ಮೊದಲನೆ ಹಂತದಲ್ಲಿರುವ ಆಕ್ಸ್‌ಫರ್ಡ್‌ ಶಾಲೆ ಹಾಗೂ ಪಕ್ಕದಲ್ಲಿರುವ ಆಟದ ಮೈದಾನದ ಮದ್ಯದಲ್ಲಿರುವ 10ನೇ ಬಿ ಅಡ್ಡರಸ್ತೆ ಕಸ ಸುರಿಯುವ ಮತ್ತು ವಾಹನ ಪಾರ್ಕಿಂಗ್‌ ಮಾಡುವ ರಸ್ತೆಯಾಗಿ ಮಾರ್ಪಾಡಾಗಿದೆ.ಸಾವಿರಾರು ಮಕ್ಕಳು ಶಾಲೆಗೆ ಹೋಗಲು ಮತ್ತು ಆಟವಾಡಲು ಮೈದಾನಕ್ಕೆ ಹೋಗಬೇಕಾದರೆ ಇದೇ ರಸ್ತೆಯನ್ನೇ ಬಳಸಬೇಕಾಗಿದೆ. ರಸ್ತೆಯನ್ನು ದಾಟುವಾಗ ಮಕ್ಕಳಿಗೆ ಕಸದ ವಾಸನೆ ಜೊತೆಗೆ ರಸ್ತೆ ಮೇಲೆ ನಿಂತಿರುವ ವಾಹನಗಳ ಕಾಟವೂ ಕಾಡುತ್ತದೆ.ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ ರಸ್ತೆಯನ್ನು ಕಸ ಮುಕ್ತಗೊಳಿಸಿ ಮಕ್ಕಳು ಹಾಗೂ ಜನಸಾಮಾನ್ಯರಿಗೂ ಓಡಾಡಲು ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.