ಸೋಮವಾರ, ಏಪ್ರಿಲ್ 19, 2021
32 °C

ಕಾಯ್ದೆ ವಿರೋಧಿಸಿ ವಕೀಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಕೇಂದ್ರ ಸರ್ಕಾರವು ಲೀಗಲ್ ಪ್ರಾಕ್ಟಿಶನರ್ಸ್‌ (ರೆಗ್ಯೂ ಲೇಶನ್) ಕಾಯ್ದೆ ಜಾರಿಗೊಳಿಸುವ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸಲು ಮುಂದಾಗಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಗುರುವಾರ ವಕೀಲರು ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 11 ಗಂಟೆಗೆ ನ್ಯಾಯವಾದಿಗಳು ವಕೀಲರ ಸಂಘದ ಕಚೇರಿ ಮುಂದೆ 15 ನಿಮಿಷ ಪ್ರತಿಭಟನೆ ನಡೆಸಿದರು. ನಂತರ ಸಂಘದ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಕೇಂದ್ರ ಸರ್ಕಾರ ಸದರಿ ಕಾನೂನು ಜಾರಿಗೆ ತಂದರೆ ವಕೀಲ ವೃತ್ತಿಯು ದಾಸ್ಯ ವೃತ್ತಿಯಾಗುತ್ತದೆ ಎಂದು ನ್ಯಾಯವಾದಿಗಳು ಆತಂಕ ವ್ಯಕ್ತಪಡಿಸಿದರು.

 

ವಕೀಲರು ನಿರ್ಭೀತಿ ಯಿಂದ ನ್ಯಾಯಾಲಯದ ಕಲಾಪಗ ಳನ್ನು ನಡೆಸುವುದಕ್ಕೆ ಸಾಧ್ಯವಾಗು ವುದಿಲ್ಲ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಪರಮೇಶ್ವರ್, ಮಾಜಿ ಅಧ್ಯಕ್ಷ ಐ.ಈ.ಪೀತಾಂಬರಾ ಚಾರ್ ಇತರ ವಕೀಲರು ತಿಳಿಸಿದರು. ಕಾಯ್ದೆ ಕೈಬಿಡುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಉಪವಿಭಾಗಾಧಿ ಕಾರಿಗೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.