ಶನಿವಾರ, ಜುಲೈ 24, 2021
22 °C

ಕಾರಹುಣ್ಣಿಮೆ: ಎತ್ತುಗಳೊಂದಿಗೆ ರೈತರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಹುಣ್ಣಿಮೆ: ಎತ್ತುಗಳೊಂದಿಗೆ ರೈತರ ಸಂಭ್ರಮ

ಚಿಕ್ಕೋಡಿ: ಪ್ರಸಕ್ತ ವರ್ಷ ಮುಂಗಾರು ಸಕಾಲದಲ್ಲಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಖುಷಿಯಾಗಿರುವ ಕೃಷಿಕರು ಪಟ್ಟಣ ಸೇರಿದಂತೆ ತಾಲ್ಲೂಕಿ ನಾದ್ಯಂತ ಭಾನುವಾರ ಕಾರಹುಣ್ಣಿಮೆ ಯನ್ನು ಸಂಭ್ರಮದಿಂದ ಆಚರಿಸಿದರು. ಕೃಷಿಕರು ಬಸವಣ್ಣನೆಂದೇ ಪೂಜಿ ಸಲ್ಪಡುವ ಎತ್ತುಗಳಿಗೆ ಜೋಳದ ಖಿಚಡಿ, ಅಂಬಲಿ ನೀಡಿದರು.ಮಧ್ಯಾಹ್ನ ಪಟ್ಟಣದಲ್ಲಿ ವಿವಿಧ ವಾದ್ಯಮೇಳ ಗಳೊಂದಿಗೆ ಎತ್ತುಗಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಕೃಷಿಕರು ಪರಸ್ಪರ ಗುಲಾಲು ಎರಚಿ ಕೊಂಡು ಕುಣಿದು ಕುಪ್ಪಳಿಸಿದರು. ನಂತರ ಪಟ್ಟಣದ ವಾಡಾಗಲ್ಲಿ, ಹೊಸಪೇಠಗಲ್ಲಿ, ಪ್ರಭುವಾಡಿ, ಪುರಸಭೆ ಎದುರು, ಹಾಲಟ್ಟಿ ಮುಂತಾದೆಡೆ ಮಾನದ ಎತ್ತುಗಳನ್ನು ಕರಿಜಿಗಿಸುವ ಸಡಗರದಲ್ಲಿ ಜನ ತೇಲಾಡುತ್ತಿದ್ದರು. ಯುವಕರು ಮೋಜಿನ ಆಟಗಳಾದ ನಿಂಬೆಹಣ್ಣು ಎಸೆಯುವುದು, ಕಣ್ಣು ಕಟ್ಟಿ ಗುರಿ ಮುಟ್ಟುವುದು ಮುಂತಾದ ಮೋಜಿನ ಆಟಗಳಲ್ಲಿ ಸಂಭ್ರಮಿ ಸುತ್ತಿದ್ದರು.ಮುಗಳಖೋಡ ವರದಿ

ಮುಗಳಖೋಡ: ಇಲ್ಲಿಯ ನೀರಲ ಕೋಡಿ ತೋಟದ ಸಮುದಾಯದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.

ಮೈಗೆ ಹುಲಮಂಜಿ, ಕೋಡುಗಳಿಗೆ ಬಣ್ಣ, ರಿಬ್ಬಣಗಳನ್ನು ಕಟ್ಟಿ ಅಲಂಕರಿ ಸಿದ 30ಕ್ಕೂ ಅಧಿಕ ಸಂಖ್ಯೆಯ ಜೋಡಿ ಎತ್ತುಗಳ ಸಾಲು ಮತ್ತು ಬಸವಣ್ಣ ನವರ ಭಾವಚಿತ್ರದೊಂದಿಗೆ ಶಿವಶಂಕರ ನಗರದ ಪಾಂಡುರಂಗ ಮಂದಿರದಿಂದ ನಾಶಿಯವರ ತೋಟದ ಹನುಮಾನ ಗುಡಿಯವರೆಗೆ ವಾದ್ಯಗಳ ಸಂಭ್ರಮ ದೊಂದಿಗೆ ಮೆರವಣಿಗೆ ಜರುಗಿತು. ರೈತರು, ಗ್ರಾಮದ ಹಿರಿಯರು, ಯುವಕರು ಪರಸ್ಪರ ಗುಲಾಲು ಹಾಕಿಕೊಂಡು ಸಂಭ್ರಮಿಸಿದರು.ನ್ಯಾಯವಾದಿ ಕೆಂಪಣ್ಣ ಅಂಗಡಿ, ಶ್ರೀಶೈಲ್ ಹೊಸಟ್ಟಿ, ಪರಪ್ಪ ಅಂಗಡಿ, ಶ್ರೀಶೈಲ್ ಅಂಗಡಿ, ದುಂಡಪ್ಪ ಅಂಗಡಿ, ಸಿದ್ದಪ್ಪ ಅಂಗಡಿ, ರಮೇಶ ನಾಶಿ, ಮಲ್ಲಪ್ಪ ಕುಲಲಿ, ಯಲ್ಲಪ್ಪ ಅಂಗಡಿ, ರಾಮಪ್ಪ ಅಂಗಡಿ, ಆನಂದ ಹೊಸಟ್ಟಿ, ಭೀಮಪ್ಪ ಹೊಸಟ್ಟಿ, ಸಂಜೀವ ಕೋರೆ, ಆಶೋಕ ಕಾಪ್ಸಿ, ಮಹಾದೇವ ಅಂಗಡಿ, ಮುತ್ತಪ್ಪ ಅಂಗಡಿ ಮತ್ತಿತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.