ಮಂಗಳವಾರ, ಏಪ್ರಿಲ್ 13, 2021
32 °C

ಕಾರು ಡಿಕ್ಕಿ: ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರು ಡಿಕ್ಕಿ ಹೊಡೆದು ಐದು ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ವರ್ತೂರು- ಬಳಗೆರೆ ರಸ್ತೆಯಲ್ಲಿ ಸೋಮವಾರ ನಡೆದಿದೆ.ಕೂಲಿ ಕಾರ್ಮಿಕ ಬಸವರಾಜು ಎಂಬುವರ ಪುತ್ರಿ ಉಮಾದೇವಿ ಮೃತಪಟ್ಟ ಬಾಲಕಿ. ಬಸವರಾಜು ಅವರ ತಮ್ಮ ನಾಗರಾಜು ಅವರು ಕೂಲಿ ಕಾರ್ಮಿಕರಾಗಿದ್ದು, ನಗರದ ಬಳಗೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.ಬಸವರಾಜು ಅವರು, ತಾಯಿ ಈರಮ್ಮ, ಪತ್ನಿ ಮತ್ತು ಮಕ್ಕಳೊಂದಿಗೆ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ಈರಮ್ಮ ಅವರು ಮೊಮ್ಮಗಳು ಉಮಾದೇವಿಯನ್ನು ಕರೆದುಕೊಂಡು ಕಿರಿಯ ಮಗ ನಾಗರಾಜು ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಸೋಮವಾರ ಬೆಳಗಿನ ಜಾವ ಬಳ್ಳಾರಿಯಿಂದ ನಗರಕ್ಕೆ ಬಂದ ಈರಮ್ಮ ಮತ್ತು ಉಮಾದೇವಿ, ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್‌ನಲ್ಲಿ ವರ್ತೂರಿಗೆ ಬಂದರು. ಬಸ್‌ನಿಂದ ಕೆಳಗಿಳಿದ ಈರಮ್ಮ ಅವರು ಸಮೀಪದ ಹೋಟೆಲ್‌ನಲ್ಲಿ ಕಾಫಿ ಕುಡಿದು, ಮೊಮ್ಮಗಳಿಗೆ ಸಿಹಿ ತಿನಿಸು ಕೊಡಿಸಿದರು. ನಂತರ ಅವರು ಬಳಗೆರೆಗೆ ನಡೆದು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಉಮಾದೇವಿಯ ಕೈಯಿಂದ ತಿನಿಸು ಜಾರಿ ಕೆಳಗೆ ಬಿದ್ದಿತು. ಉಮಾದೇವಿ ಅಜ್ಜಿಯ ಕೈ ಬಿಡಿಸಿಕೊಂಡು ಅದನ್ನು  ತೆಗೆದುಕೊಳ್ಳಲು ರಸ್ತೆಗೆ ಓಡಿ ಹೋದಾಗ ಅದೇ ಮಾರ್ಗವಾಗಿ ಬಂದ ಕಾರು ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ.ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.