ಸೋಮವಾರ, ಜನವರಿ 27, 2020
17 °C

ಕಾಲುವೆ ನಿರ್ಮಾಣ: ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ನಿರ್ಮಾಣ ಹಂತದಲ್ಲಿರುವ ಹೇಮಾವತಿ, ಯಗಚಿ ನದಿ ಮೂಲದ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಇನ್ನು 4 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ 526 ಗ್ರಾಮಗಳ ಕುಡಿಯುವ ನೀರಿನ ಬವಣೆ ಪರಿಹಾರವಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ತಾಲ್ಲೂಕಿನ ಯಳವಾರೆ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ವತಿಯಿಂದ ರೂ.40 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಾರನಹಳ್ಳಿ ಕೆರೆಯಿಂದ ಯಳವಾರೆ ಕೆರೆಗೆ ಸಂಪರ್ಕ ಕಾಲುವೆ ನಿರ್ಮಾಣ ಕಾಮಗಾರಿ, ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಸುತ್ತಿರುವ ಹುಚ್ಚಮ್ಮದೇವಿ ದೇಗುಲ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಮತ್ತು ರೂ.12 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಓವರ್‌ಹೆಡ್ ಟ್ಯಾಂಕ್ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಹೊನ್ನವಳ್ಳಿ ಕೆರೆಗೆ ಕೊಳವೆ ಮೂಲಕ ನೀರು ತುಂಬಿಸುವ ರೂ.89 ಕೋಟಿ ವೆಚ್ಚದ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.ಹಾಗೆಯೇ ಎರಡನೇ ಹಂತದ ಯಗಚಿ ನದಿ ಮೂಲದಿಂದ ರೂ.26 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಾವಗಲ್, ಬಾಣಾವರ ಹೋಬಳಿಗೆ ನೀರು ಪೂರೈಸುವ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದೇ ರೀತಿ 3ನೇ ಹಂತದ ಹೇಮಾವತಿ ನದಿ ಮೂಲದಿಂದ ರೂ.69 ಕೋಟಿ ವೆಚ್ಚದಲ್ಲಿ ಬನ್ನಿಘಡದಿಂದ ಗಂಡಸಿ ಹೋಬಳಿ ಹಾಗೂ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆಯ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ರೂ.1.54 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಎ.ಹರಿಹರಪುರ ತಾಂಡ್ಯದಲ್ಲಿ ಸೇವಾಲಾಲ್ ಭವನ ನಿರ್ಮಾಣ, ಬಿ ಹರಿಹರಪುರ ತಾಂಡ್ಯದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಹಿರಿಯೂರಿ ನಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ಕೋರನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಕಾಚೀಗಟ್ಟ ಮೇಗಲಹಟ್ಟಿ ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್, ಬಿ.ಎಚ್ ರಸ್ತೆಯಿಂದ ಬಸವನಹಳ್ಳಿ ರಸ್ತೆ ಅಭಿವೃದ್ಧಿ, ಬಿ.ಎಚ್ ರಸ್ತೆಯಿಂದ ಮಂಜುನಾಥನ ಕೊಪ್ಪಲು ರಸ್ತೆ ಅಭಿವೃದ್ಧಿ, ಬಾಣಾವರ-ಸರ್ವೆಕೊಪ್ಪಲು ರಸ್ತೆ ಅಭಿವೃದ್ಧಿ, ಶಾನೇಗೆರೆ-ಕೋಡಿಹಳ್ಳಿ ರಸ್ತೆ ಅಭಿವೃದ್ಧಿ, ಬೆಂಡೇಕೆರೆಯಿಂದ ಕೊಮ್ಮಾರಘಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.          ತಾ.ಪಂ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ,ತಾ.ಪಂ ಮಾಜಿ ಸದಸ್ಯ ಗಂಗಾಧರ್, ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಮ್ಮ,   ಎಪಿಎಂಸಿ ಸದಸ್ಯ ಮುರುಂಡಿ ಶಿವಯ್ಯ, ಗ್ರಾ.ಪಂ ಮಾಜಿ ಅಧ್ಯಕ್ಷ ಧರ್ಮಶೇಖರ್, ನಾಗರಾಜು, ತಾಲ್ಲೂಕು ಗಂಗಾಮತ ಅಧ್ಯಕ್ಷಕೇಶವಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)