ಬುಧವಾರ, ಜೂನ್ 16, 2021
22 °C

ಕಿಂಗ್ ಫಿಷರ್‌ನ 40 ಬ್ಯಾಂಕ್ ಖಾತೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ನಿಗದಿತ ಗಡುವಿನೊಳಗೆ ಸುಮಾರು 40 ಕೋಟಿ ರೂಪಾಯಿಗಳ ತೆರಿಗೆ ಬಾಕಿ ಪಾವತಿಸದ ಕಾರಣಕ್ಕಾಗಿ ಈಗಾಗಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ 40ರಷ್ಟು ಬ್ಯಾಂಕ್ ಖಾತೆಗಳನ್ನು ಸೇವಾ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದು, ಇದರಿಂದ ಸಂಸ್ಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ.`ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಸುಮಾರು 40 ಬ್ಯಾಂಕ್ ಖಾತೆಗಳನ್ನು ನಾವು ಗುರುವಾರ ಮತ್ತು ಶುಕ್ರವಾರ ಸ್ಥಗಿತಗೊಳಿಸಿದ್ದೇವೆ. ಸಂಸ್ಥೆಯು ನಮ್ಮ ಇಲಾಖೆಗೆ ರೂ 40 ಕೋಟಿಗಳ ಬಾಕಿ ಪಾವತಿಗೆ ವಿಧಿಸಲಾಗಿದ್ದ ಫೆಬ್ರುವರಿ 29ರ ಗಡುವಿಗೆ ಸ್ಪಂದಿಸಲು ವಿಫಲವಾಗಿರುವುದರಿಂದ ಈ ಕ್ರಮ ಕೈಗೊಂಡಿದ್ದೇವೆ~ ಎಂದು ಸೇವಾ ತೆರಿಗೆ ಆಯುಕ್ತ ಎಸ್.ಕೆ. ಸೋಲಂಕಿ ಶನಿವಾರ ತಿಳಿಸಿದರು.ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಇದು ಸತತ ನಾಲ್ಕನೇ ಬಾರಿಗೆ ಕಿಂಗ್‌ಫಿಷರ್ ಏರ್‌ಲೈನ್ಸ್ ಬ್ಯಾಂಕ್ ಖಾತೆಗಳನ್ನು ಸೇವಾ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.