ಶನಿವಾರ, ಆಗಸ್ಟ್ 15, 2020
26 °C

ಕುಮುದಾ ಪದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮುದಾ ಪದ

ಹಾಲು ಬಿಳುಪಿನ ಈ ಹುಡುಗಿಗೆ ಕಪ್ಪು ಬಣ್ಣ ಬಳಿದುಕೊಂಡು ಹಳ್ಳಿಹುಡುಗಿಯ ಪಾತ್ರ ಮಾಡುವಾಸೆಯಂತೆ. ಆ ಆಸೆಯನ್ನು ಹೇಳಿಕೊಳ್ಳುತ್ತಾ ತುಟಿ ಅರಳಿಸುವ ಸುಂದರಿಯ ಹೆಸರು ಕುಮುದಾ. ಊರು ಮೈಸೂರಾದರೂ ಕನ್ನಡ ಮಾತನಾಡಲು ತಡವರಿಸುತ್ತಾರೆ. ಅದಕ್ಕೆ ಕಾರಣ ಅವರು ಊಟಿಯಲ್ಲಿ ಬೆಳೆದಿದ್ದು ಮತ್ತು ಕನ್ನಡದ ಗೆಳೆಯರು ಇಲ್ಲದೇಹೋದದ್ದು.`ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-3~ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಕುಮುದಾ ಮೂರನೇ ಸುತ್ತಿನಲ್ಲಿ ಸೋತರು. ಅದಕ್ಕೂ ಕಾರಣ ಅವರಿಗೆ ಕನ್ನಡ ಸರಿಯಾಗಿ ಬಾರದೇ ಇರುವುದು. `ಒಂದು ವರ್ಷದಿಂದ ಈಚೆಗೆ ಕನ್ನಡ ಮಾತನಾಡಲು ಮತ್ತು ಓದಲು ಕಲಿಯುತ್ತಿರುವೆ. ಕನ್ನಡ ಸಿನಿಮಾ ನೋಡುತ್ತಿರುವೆ~ ಎನ್ನುವ ಕುಮುದಾಗೆ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುವಾಸೆ.ಆರ್.ಚಂದ್ರು ನಿರ್ದೇಶನದ `ಚಾರ್‌ಮಿನಾರ್~ನಲ್ಲಿ ಎರಡನೇ ನಾಯಕಿಯಾಗಿ ಆಯ್ಕೆಯಾಗಿರುವ ಅವರು, ಚಿತ್ರ ಮುಗಿಯುವ ವೇಳೆಗೆ ಕನ್ನಡವನ್ನು ಸ್ಪಷ್ಟವಾಗಿ ಕಲಿತು ಮುಂದಿನ ಚಿತ್ರಗಳಿಗೆ ಡಬ್ಬಿಂಗ್ ಮಾಡುವಾಸೆ ವ್ಯಕ್ತಪಡಿಸುತ್ತಾರೆ.`ಚಾರ್‌ಮಿನಾರ್~ನಲ್ಲಿ ಕುಮುದಾಗೆ ಕಾಲೇಜು ವಿದ್ಯಾರ್ಥಿನಿಯ ಪಾತ್ರ. `ನನಗೆ ಟಾಮ್‌ಬಾಯ್ ರೀತಿಯ ಪಾತ್ರ ಸಿಕ್ಕಿದೆ. ನಾಯಕ ಪ್ರೇಮ್ ಅವರ ಬೆನ್ನು ಬೀಳುವ ಪಾತ್ರ ಅದು~ ಎಂದು ನಗುತ್ತಾರೆ ಅವರು.ಶಾಲಾ ದಿನಗಳಿಂದಲೂ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕುಮುದಾ ಮೊದಲು ರೂಪದರ್ಶಿಯಾಗಿ ಗುರುತಿಸಿಕೊಂಡರು. ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವಾಗ ಸಿನಿಮಾ ಕಡೆಗೆ ಆಕರ್ಷಣೆ ಹುಟ್ಟಿತು.`ನೃತ್ಯ ಹೇಳಿಕೊಟ್ಟರೆ ಮಾಡುವೆ. ನಟನೆ ಹೇಳಿಕೊಟ್ಟರೂ ಮಾಡುವೆ. ಅದರಿಂದ ನನಗೆ ಅದ್ಯಾವುದರ ತರಬೇತಿ ಬೇಕಾಗಿಲ್ಲ~ ಎಂದು ಆತ್ಮವಿಶ್ವಾಸದಿಂದ ನುಡಿಯುವ ಕುಮುದಾ ಗ್ಲಾಮರಸ್ಸಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ.`ಮಾಡೆಲ್‌ಗಳು ಸಿನಿಮಾ ನಾಯಕಿಯರಿಗಿಂತ ಗ್ಲಾಮರಸ್ಸಾಗಿರುತ್ತಾರೆ. ನಾನು ಮಾಡೆಲ್ ಆದ ಕಾರಣ ಸಿನಿಮಾದ ಗ್ಲಾಮರ್‌ಗೆ ಸಿದ್ಧವಾಗಿಯೇ ಬಂದಿದ್ದೇನೆ~ ಎಂದು ಮುಕ್ತವಾಗಿ ಮಾತನಾಡುವ ಕುಮುದಾಗೆ ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ.`ನಾನು ಮೊದಲಿನಿಂದಲೂ ಪುನೀತ್, ರಕ್ಷಿತಾ ಅಭಿಮಾನಿ. ಅವರ ಸಿನಿಮಾಗಳನ್ನು ಮಿಸ್ ಮಾಡದೇ ನೋಡುತ್ತೇನೆ~ ಎಂದು ಕಣ್ಣಿನಲ್ಲಿ ಮಿಂಚು ಹರಿಸುತ್ತಾರೆ ಕುಮುದಾ.ಹಾರರ್ ಚಿತ್ರಗಳನ್ನು ನೋಡಲು ಇಷ್ಟಪಡುವ ಅವರಿಗೆ ಅಂಥ ಚಿತ್ರಗಳ ಪ್ರಧಾನ ಪಾತ್ರಗಳಲ್ಲಿ ನಟಿಸುವ ಬಯಕೆ ಇದೆ. ಜೊತೆಗೆ ಹಳ್ಳಿ ಹುಡುಗಿಯ ಪಾತ್ರವೂ ಅಚ್ಚುಮೆಚ್ಚು.“ಡಿಸೆಂಬರ್‌ಗೆ `ಚಾರ್‌ಮಿನಾರ್~ ಬಿಡುಗಡೆಯಾಗುತ್ತಿದೆ. ಆ ನಂತರ ನಾನು ಮಾಡೆಲಿಂಗ್ ಮಾಡುವುದಿಲ್ಲ. ಸಂಪೂರ್ಣವಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳುವೆ. ಸಿನಿಮಾ ಯಾರದು ಎಂಬುದರ ಮೇಲೆ ನನ್ನ ಪಾತ್ರಗಳು ನಿರ್ಧಾರವಾಗಲಿವೆ” ಎನ್ನುತ್ತಾರೆ ಈ ಚೆಲುವೆ. ಸಿನಿಮಾ ನಾಯಕಿಯಾಗಲು ಅಗತ್ಯವಿರುವ ಫಿಟ್‌ನೆಸ್ ಕಾಯ್ದಕೊಳ್ಳುತ್ತಿರುವ ಕುಮುದಾಗೆ ಅವರ ತಾಯಿಯೇ ಡಯಟೀಶಿಯನ್ ಅಂತೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.