ವಿಜಾಪುರ:`ಬಸವನ ಬಾಗೇವಾಡಿ ತಾಲ್ಲೂಕು ಕೂಡಗಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ 3 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ~ ಎಂದು ನಿಗಮದ ಕೂಡಗಿ ಸ್ಥಾವರದ ಪ್ರಧಾನ ವ್ಯವಸ್ಥಾಪಕ ಆಸಿಮ್ಕುಮಾರ ಸಾಮಂತಾ ಹೇಳಿದರು.

`ಈ ಒಂದೇ ಸ್ಥಾವರಕ್ಕೆ 15 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಹೂಡಿಕೆಯಾಗುತ್ತಿದೆ. ಸಿಮೆಂಟ್ ಉತ್ಪಾದನೆ, ಇಟ್ಟಿಗೆ ತಯಾರಿಕೆಯೂ ಸೇರಿದಂತೆ ಹಲವಾರು ಪೂರಕ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಆ ಮೂಲಕ ವಿಜಾಪುರ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದೆ~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈ ಭಾಗದ ಮಕ್ಕಳ ಕೌಶಲ್ಯ ಅಬಿವೃದ್ಧಿಗಾಗಿ ಇಲ್ಲೊಂದು ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಆರಂಭಿಸಲಾಗುವುದು. ಇದರ ಜೊತೆಗೆ ಕೂಡಗಿ ಸ್ಥಾವರ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲಾಗುವುದು.

ಸುತ್ತಲಿನ ಗ್ರಾಮಗಳಲ್ಲಿ ಹಸಿರು ಹೊದಿಕೆ, ಬಸ್ ತಂಗುದಾಣ, ಶಾಲಾ ಮಕ್ಕಳಿಗೆ ಶಿಷ್ಯವೇತನ, ಶಾಲೆಗಳಿಗೆ ಕಂಪೌಂಡ್ ನಿರ್ಮಾಣವೂ ಸೇರಿದಂತೆ ಹಲವು ಜನೋಪಯೋಗಿ ಕಾರ್ಯ ಮಾಡಲಾಗುವುದು. ಈ ಕುರಿತು ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಆಡಳಿತದ ಸಲಹೆ-ಸಹಕಾರ ಪಡೆಯಲಾಗುವುದು~ ಎಂದರು.

`ಈ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಉಷ್ಣತೆ ಹೆಚ್ಚಾಗುತ್ತದೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ನಾವು ಸ್ಥಾಪಿಸುತ್ತಿರುವುದು ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಅಲ್ಟ್ರಾ ಮೆಗಾ ವಿದ್ಯುತ್ ಸ್ಥಾವರ. ಹೀಗಾಗಿ ಇದರಿಂದ ಯಾವುದೇ ಹಾನಿ ಇಲ್ಲ.

ರಾಮಗುಂಡಂ ಸ್ಥಾವರದ ಸುತ್ತಲೂ ಹಸಿರು ಹೊದಿಕೆ ನಿರ್ಮಿಸಿದ್ದರಿಂದ ಅಲ್ಲಿಯ ಉಷ್ಣತೆಯಲ್ಲಿ 3 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗಿದೆ~ ಎಂದು ಹೇಳಿದರು.

`ಜಮೀನಿಗೆ ದರ ಪರಿಷ್ಕರಿಸುವ ವಿಷಯ ರಾಜ್ಯ ಸರ್ಕಾರಕ್ಕೆ ಸೇರಿದ್ದು~ ಎಂದಷ್ಟೇ ಪ್ರತಿಕ್ರಿಯಿಸಿದ ಅವರು, ಜಮೀನು ಕಳೆದುಕೊಂಡು ಸಂತ್ರಸ್ತರಾಗುವ ರೈತರ ಮಕ್ಕಳಿಗೆ ತಮ್ಮ ಐಟಿಐಯಲ್ಲಿ ತರಬೇತಿ ನೀಡುವ ಯೋಜನೆಯೂ ಇದೆ ಎಂದರು.

`ಕೂಡಗಿ ಸ್ಥಾವರಕ್ಕೆ ವಶಪಡಿಸಿಕೊಂಡ ಜಮೀನಿಗೆ ಬೇಲಿ ನಿರ್ಮಿಸುವ ಕೆಲಸ ನಡೆಯುತ್ತಿದೆ. ಈಗ 65 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಅಲ್ಲೊಂದು ಕಚೇರಿ ಆರಂಭಿಸಲಾಗುವುದು~.

`ಎನ್ಟಿಪಿಸಿ ದೇಶದಲ್ಲಿ ಈಗ 18 ಐಟಿಐಗಳನ್ನು ಹೊಂದಿದೆ. ಹೊಸದಾಗಿ ಎಂಟು ಐಟಿಐ ಆರಂಭಿಸಲಾಗುತ್ತಿದ್ದು, ಅದರಲ್ಲಿ ವಿಜಾಪುರ ಜಿಲ್ಲೆಯ ಒಂದು ಸೇರಿದೆ~ ಎಂದರು.

ಈ ಸ್ಥಾವರ ಸ್ಥಾಪನೆಯಿಂದ ವಿದ್ಯುತ್ ಲಭ್ಯತೆಯ ಜೊತೆಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯೂ ಆಗಲಿದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಉಪ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಪುಟ್ಟರಾಜು, ಮುಖ್ಯ ವ್ಯವಸ್ಥಾಪಕ ಪಿ. ಶ್ರೀನಿವಾಸರಾವ್, ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ವ್ಯವಸ್ಥಾಪಕ ಅಲ್ಬರ್ಟ್ ಸಿ. ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.