ಕೃಷಿಗೆ ರೂ.8 ಲಕ್ಷ ಕೋಟಿ ಸಾಲ

ನವದೆಹಲಿ(ಪಿಟಿಐ): ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ನಲ್ಲಿ ರೈತರನ್ನು ಖುಷಿಪಡಿಸುವ ಕಸರತ್ತು ಸರ್ಕಾರ ಮಾಡಿದೆ.
2014–15ನೇ ಸಾಲಿನಲ್ಲಿ ಕೇಂದ್ರವು ಕೃಷಿ ಸಾಲ ರೂ.8 ಲಕ್ಷ ಕೋಟಿಗೆ ಹೆಚ್ಚಿಸಿದೆ. ಪ್ರಸಕ್ತ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ 4.6ರಷ್ಟು ಬೆಳವಣಿಗೆಯಾಗಿದೆ ಎಂದು ಚಿದಂಬರಂ ಪ್ರಕಟಿಸಿದರು.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೃಷಿ ಉತ್ಪನ್ನಗಳ ರಫ್ತನ್ನು ರೂ.2,78,280 ಕೋಟಿಗೆ(4500 ಕೋಟಿ ಡಾಲರ್) ಹೆಚ್ಚಿಸಲಾಗಿದೆ. 2012–13ರಲ್ಲಿ ರೂ.2,53,544 ಕೋಟಿ(4100 ಕೋಟಿ ಡಾಲರ್) ಇತ್ತು. ‘ಕೃಷಿ ಕ್ಷೇತ್ರದಲ್ಲಿನ ದೊಡ್ಡ ಸಾಧನೆಗೆ ನಮಗೆ ಅಪಾರ ಹೆಮ್ಮೆ ಇದೆ. ಕೃಷಿ ಸಾಲ ರೂ. 7,35,000 ಕೋಟಿ ದಾಟುವ ನಿರೀಕ್ಷೆ ಇದೆ.
ಆ ಕಾರಣಕ್ಕಾಗಿಯೇ ರೈತರನ್ನು ಪ್ರೋತ್ಸಾಹಿಸಲು 2014–15ನೇ ಸಾಲಿನಲ್ಲಿ ಕೃಷಿ ಸಾಲದ ಗುರಿಯನ್ನು ರೂ.8 ಸಾವಿರ ಕೋಟಿ ಹೊಂದಲಾಗಿದೆ’ ಎಂದು ಚಿದಂಬರಂ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.