ಕಿಂಗ್‌ಫಿಷರ್ ಕ್ಯಾಲೆಂಡರ್‌ಗಾಗಿ ಬಿಕಿನಿ ತೊಟ್ಟು, ಮಾದಕ ಭಂಗಿಯಲ್ಲಿ ಕಾಣಿಸಿಕೊಂಡು ಹುಡುಗರ ಎದೆಬಡಿತ ಹೆಚ್ಚಿಸಿದ್ದ ಬಾಲಿವುಡ್ ಬೆಡಗಿ, ಬೆಂಗಳೂರು ಹುಡುಗಿ ನಿಕೋಲ್ ಫರಿಯಾ ಈಗ ಇನ್ನಷ್ಟು ಸುಂದರವಾಗಿದ್ದಾರೆ. 2010ರಲ್ಲಿ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ನಿಕೋಲ್ ಈಚೆಗೆ ನಗರದಲ್ಲಿ ನಡೆದ ಕಿಂಗ್‌ಫಿಷರ್ ಡರ್ಬಿ ಪ್ರೀ–ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅಂದಿನ ಪಾರ್ಟಿಯ ಕೇಂದ್ರ ಬಿಂದುವಾಗಿದ್ದ ನಿಕೋಲ್ ‘ಮೆಟ್ರೊ’ ಜೊತೆ ಮಾತಿಗೆ ಸಿಕ್ಕಾಗ ಚುಟುಕಾಗಿಯೇ ಅನೇಕ ವಿಚಾರಗಳನ್ನು ಹಂಚಿಕೊಂಡರು.

ಕುದುರೆ ಸುಂದರ ಪ್ರಾಣಿ ಎಂದು ಮೆಚ್ಚಿಕೊಳ್ಳುವ ನಿಕೋಲ್‌ಗೆ ಗ್ಲಾಮರ್, ಫ್ಯಾಷನ್ ಮತ್ತು ಸ್ಪೋರ್ಟ್ಸ್‌ನ ಮಿಶ್ರಣದಂತಿರುವ ಕುದುರೆ ರೇಸ್‌ಗಳನ್ನು ವೀಕ್ಷಿಸುವುದೆಂದರೆ ತುಂಬ ಇಷ್ಟವಂತೆ. ‘ನನ್ನ ಮತ್ತು ಕಿಂಗ್‌ಫಿಷರ್‌ನೊಂದಿಗಿನ ಸಹಯೋಗಕ್ಕೆ ಕೆಲವು ವರ್ಷಗಳ ಇತಿಹಾಸವಿದೆ. ಈ ಬ್ರಾಂಡ್‌ನೊಂದಿಗೆ ಕೈಜೋಡಿಸಿರುವುದು ನನಗೆ ಅತ್ಯಂತ ಖುಷಿ ನೀಡಿದೆ. ಪ್ರತಿಷ್ಠಿತ ರೇಸ್ ಎಂದು ಕರೆಯಿಸಿಕೊಳ್ಳುವ ಕಿಂಗ್‌ಫಿಷರ್ ಡರ್ಬಿ ನನ್ನ ಪ್ರಕಾರ ದೇಶದ ಅತ್ಯುತ್ತಮ ಡರ್ಬಿ. ಕುದುರೆಗಳೆಂದರೆ ನನಗೆ ಅಚ್ಚುಮೆಚ್ಚು. ಸುಂದರ ಕುದುರೆಗಳನ್ನು ಕಂಡಾಗೆಲ್ಲ ನನ್ನ ಮೈಮನ ಪುಳಕಗೊಳ್ಳುತ್ತದೆ’ ಎಂದು ತಮ್ಮೊಳಗಿನ ರೇಸ್ ಪ್ರೇಮವನ್ನು ತೆರೆದಿಡುತ್ತಾರೆ ನಿಕೋಲ್.

‘ಯಾರಿಯಾ’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಖಾತೆ ತೆರೆದ ನಿಕೋಲ್, ಸದ್ಯಕ್ಕೆ ಯಾವುದೇ ಚಿತ್ರಕ್ಕೂ ಸಹಿ ಹಾಕಿಲ್ಲವಂತೆ. ‘ನಾನು ಈವರೆಗೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಅತ್ಯುತ್ತಮ ಸ್ಕ್ರಿಪ್ಟ್‌ಗಾಗಿ ಎದುರು ನೋಡುತ್ತಿದ್ದೇನೆ. ಕತೆ ಇಷ್ಟವಾಗಿ ಸಿನಿಮಾಕ್ಕೆ ಸಹಿ ಹಾಕಿದರೆ ಸದ್ಯದಲ್ಲೇ ನನ್ನನ್ನು ಬೆಳ್ಳಿತೆರೆಯ ಮೇಲೆ ನೋಡಬಹುದು’ ಎಂದು ಮುಗುಳ್ನಗುತ್ತಾರೆ 24ರ ಹರೆಯದ ನಿಕೋಲ್.

ಕಣ್ಣುಕುಕ್ಕುವ ದೇಹಸಿರಿ ಹೊಂದಿರುವ ನಿಕೋಲ್ ಅದನ್ನು ಕಾಪಿಟ್ಟುಕೊಳ್ಳಲು ನಿತ್ಯವೂ ದೇಹ ದಂಡಿಸುತ್ತಾರಂತೆ. ನಿಮ್ಮ ಸುಂದರ ಕಾಯದ ಹಿಂದಿನ ಗುಟ್ಟೇನು ಅಂದರೆ ನಕ್ಕು ಹೇಳಿದ್ದು ಹೀಗೆ: ‘ಸಿನಿಮಾ, ಫ್ಯಾಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮೇಲೆ ಫಿಟ್‌ನೆಸ್‌ಗೆ ಹೆಚ್ಚು ಗಮನ ನೀಡಬೇಕು. ಅದಕ್ಕಾಗಿ ನಿತ್ಯವೂ ಒಂದಷ್ಟು ಸಮಯವನ್ನು ನನ್ನ ದೇಹ ದಂಡನೆಗೆ ಮೀಸಲಿಡುತ್ತೇನೆ. ಜಿಮ್‌ನಲ್ಲಿ ಬೆವರಿಳಿಸುತ್ತೇನೆ. ಬೆಲ್ಲಿ ಡಾನ್ಸ್ ನನ್ನ ಕಾಯವನ್ನು ಸುಂದರವಾಗಿ ಕಡೆದಿದೆ’ ಎನ್ನುತ್ತಾರೆ ಅವರು.

2014ರ ಕಿಂಗ್‌ಫಿಷರ್ ಕ್ಯಾಲೆಂಡರ್‌ಗಾಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ನಿಕೋಲ್, ಕ್ಯಾಲೆಂಡರ್ ಫೋಟೋಶೂಟ್‌ನ ಅನುಭವವನ್ನು ನೆನೆದು ಈಗಲೂ ಪುಳಗೊಳ್ಳುತ್ತಾರೆ. ‘ಕಿಂಗ್‌ಫಿಷರ್ ಕ್ಯಾಲೆಂಡರ್‌ನ ಫೋಟೋಶೂಟ್ ನಡೆದಿದ್ದು ಫಿಲಿಪ್ಪೀನ್ಸ್‌ನ ಬೊರಾಕೆ ಮತ್ತು ಕೆಬುವಿನ ಸಮುದ್ರ ತೀರದಲ್ಲಿ.

ಕ್ಯಾಲೆಂಡರ್‌ಗಾಗಿ ಬಿಕಿನಿ ತೊಟ್ಟು ಪೋಸ್ ನೀಡಿದ್ದೇ ಒಂದು ರೋಚಕ ಅನುಭವ. ಇಲ್ಲಿ ಒಬ್ಬೊಬ್ಬ ರೂಪದರ್ಶಿಯ ಫೋಟೋಶೂಟ್ ತುಂಬ ವೈಯಕ್ತಿಕವಾಗಿ ನಡೆಯುತ್ತಿದ್ದರಿಂದ ರೂಪದರ್ಶಿಗಳು ಮತ್ತು ಫೋಟೋಗ್ರಾಫರ್‌ಗಳ ನಡುವೆ ಒಳ್ಳೆ ಹೊಂದಾಣಿಕೆ ಏರ್ಪಟ್ಟಿತ್ತು. ಈ ಹೊಂದಾಣಿಕೆ ಅತ್ಯುತ್ತಮ ಭಂಗಿಗಳನ್ನು ಸೆರೆಹಿಡಿಯಲು ನೆರವಾಯ್ತು. ಕಿಂಗ್‌ಫಿಷರ್ ಫೋಟೋಶೂಟ್ ಒಂದೊಳ್ಳೆ ಅನುಭವ. ಜೊತೆಗೆ ಅಲ್ಲಿ ಸಿಕ್ಕಾಪಟ್ಟೆ ಫನ್ ಇತ್ತು’ ಎಂದೆನ್ನುತ್ತಾ ತುಟಿಯರಳಿಸಿ ನಕ್ಕು, ಮಾತಿಗೆ ವಿರಾಮವಿತ್ತರು ನಿಕೋಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.