ಗುರುವಾರ , ಜನವರಿ 23, 2020
20 °C

ಕೆಎಸ್‌ಆರ್‌ಟಿಸಿ ಹಗಲು ದರೋಡೆ

ಎಂ.ಶೈಲಾ,ಮೈಸೂರು Updated:

ಅಕ್ಷರ ಗಾತ್ರ : | |

ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ನಗರ ಸಂಚಾರ ಬಸ್‌ನಲ್ಲಿ (ಸಿಟಿ ಬಸ್‌) ಪ್ರಯಾಣದ ಚಾರ್ಜು ₨ 14 (15 ಕಿ.ಮೀ). ಆದರೆ, ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ (ಕೆಎಸ್‌ಆರ್‌ಟಿಸಿ)  ₨22, ಕ್ರಮಿಸುವ ದೂರ 16 ಕಿ.ಮೀ.ಈ ಎರಡೂ ಬಸ್‌­ಗಳು ಕ್ರಮಿಸುವುದು ಮೈಸೂರು–ಬೆಂಗ­ಳೂರು ಹೆದ್ದಾರಿಯ­ಲ್ಲಾ­ದರೂ ಕೆಎಸ್‌ಆರ್‌ಟಿಸಿ  ಬಸ್‌ಗೆ ಮಾತ್ರ ಒಂದು ಕಿ.ಮೀ. ದೂರ ಹೆಚ್ಚು ಮತ್ತು ದರವೂ ಅಧಿಕ. ಅದು ಹೇಗೆ?ಹಾಗೆ ನೋಡಿದರೆ, ಗ್ರಾಮಾಂತರ (ಸಬರ್ಬ್‌) ಬಸ್‌ನಿಲ್ದಾಣದಿಂದ ಹಿಂದಕ್ಕೆ ಸುಮಾರು ಒಂದು ಕಿ.ಮೀ. ಅಂತರದಲ್ಲಿ  ನಗರ ಬಸ್‌ನಿಲ್ದಾಣ (ಅರಮನೆ ಪಕ್ಕ) ಇದೆ. ಇಲ್ಲಿಂದ ಶ್ರೀರಂಗಪಟ್ಟಣಕ್ಕೆ 16 ಕಿ.ಮೀ. ಆದೀತು. ಆದರೆ, ಈ ಬಸ್‌ನ ಪ್ರಯಾಣ ದರ ಕೆಎಸ್‌ಆರ್‌ಟಿಸಿಗಿಂತ ₨ 8 ಕಡಿಮೆ. ಇದು ಕೆಎಸ್‌ಆರ್‌ಟಿಸಿಯ ಹಗಲು ದರೋಡೆ­ಯಲ್ಲದೆ ಮತ್ತೇನು?

ಪ್ರತಿಕ್ರಿಯಿಸಿ (+)