ಕೆವಿನ್ಗೆ ಐಪಿಎಲ್ನಲ್ಲಿ ಆಡುವ ಬಯಕೆ
ಬೆಂಗಳೂರು: ವಿಶ್ವ ಕಪ್ ಕ್ರಿಕೆಟ್ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗದ ಶತಕ ಗಳಿಸಿದ ಐರ್ಲೆಂಡ್ ತಂಡದ ಕೆವಿನ್ ಒಬ್ರಿಯನ್ ಇಂಡಿಯನ್ ಪ್ರೀಮಿಯರ್ ಲೀಗ್ನ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಆಡುವ ಬಯಕೆ ಹೊಂದಿದ್ದಾರೆ.
‘ವೇಗದ ಬ್ಯಾಟಿಂಗ್ ಮಾಡುವ ನಿಮಗೆ ಐಪಿಎಲ್ ಸೂಕ್ತವಾದ ಆಟ. ಆದ್ದರಿಂದಲೇ ಐಪಿಎಲ್ನತ್ತ ಗಮನ ಹರಿಸಬೇಕು’ ಎಂದು ಸಾಕಷ್ಟು ಅಭಿಮಾನಿಗಳು ನನಗೆ ಹೇಳಿದ್ದಾರೆ. ಆದ್ದರಿಂದ ಐಪಿಎಲ್ನಲ್ಲಿ ಆಡುವ ಬಯಕೆ ಹೊಂದಿದ್ದಾಗಿ ಕೆವಿನ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಕೆವಿನ್ ಶತಕ ಗಳಿಸಿ ತಂಡಕ್ಕೆ ಅಚ್ಚರಿಯ ಗೆಲುವು ನೀಡಿದ್ದರು. ‘ಈ ಶತಕ ನನ್ನ ಕ್ರಿಕೆಟ್ ಜೀವನದಲ್ಲಿ ಮಹತ್ವದ ಸಾಧನೆಯ ಮೈಲಿಗಲ್ಲು’ ಎಂದು ಕೆವಿನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.