ಬುಧವಾರ, ಜನವರಿ 29, 2020
27 °C
ಜೂನಿಯರ್‌ ಅಥ್ಲೆಟಿಕ್ಸ್‌ಗೆ ತೆರೆ: ಕರ್ನಾಟಕಕ್ಕೆ ಐದನೇ ಸ್ಥಾನ; ಅಂತಿಮ ದಿನ ಏಳು ಪದಕ

ಕೇರಳಕ್ಕೆ ಸಮಗ್ರ ಪ್ರಶಸ್ತಿಯ ಸಂಭ್ರಮ

ಮಹಮ್ಮದ್‌ ನೂಮಾನ್‌/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇರಳ ತಂಡದವರು ನಿರೀಕ್ಷೆಯಂತೆಯೇ 29ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಕೇರಳ ಒಟ್ಟು 585 ಪಾಯಿಂಟ್‌ ಕಲೆಹಾಕುವ ಮೂಲಕ ಅಗ್ರಸ್ಥಾನ ಪಡೆಯಿತು. ಈ ಮೂಲಕ ದೇಶದ ಅಥ್ಲೆಟಿಕ್ಸ್‌ನಲ್ಲಿ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು.

365.5 ಪಾಯಿಂಟ್‌ ಕಲೆಹಾಕಿದ ತಮಿಳು ನಾ ಡು ಎರಡನೇ ಸ್ಥಾನ ಗಳಿಸಿತು.  ಕರ್ನಾಟಕ 182.5 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನ ಪಡೆಯಿತು.ಕರ್ನಾಟಕಕ್ಕೆ ಏಳು ಪದಕ: ಕೂಟದ ಅಂತಿಮ ದಿನ ಕರ್ನಾಟಕದ ಪಾಲಿಗೆ ಸ್ಮರಣೀಯ ಎನಿಸಿಕೊಂಡಿತು. ಆತಿಥೇಯ ಅಥ್ಲೀಟ್‌ಗಳು ಒಂದು ಚಿನ್ನ ಹಾಗೂ ಆರು ಬೆಳ್ಳಿ ಪದಕ ಗೆದ್ದುಕೊಂಡರು.20 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದಲ್ಲಿ ಕರ್ನಾಟಕ  ಚಿನ್ನ ಒಳಗೊಂಡಂತೆ ಒಟ್ಟು 4 ಪದಕ ಜಯಿಸಿತು. 200 ಮೀ. ಓಟದಲ್ಲಿ ಸಲೀಮ್‌ ಶೇಖ್‌ ಬಂಗಾರದ ನಗು ಬೀರಿದರು. ಬೆಳಗಾವಿ ಜಿಲ್ಲೆಯ ಅಥಣಿಯ ಅಥ್ಲೀಟ್‌ 22.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.ಇದೇ ವಯೋವರ್ಗದ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಮಹೇಂದರ್‌ ಸಿಂಗ್‌ 9:32.84 ಸೆಕೆಂಡ್‌ಗಳೊಂದಿಗೆ ಬೆಳ್ಳಿ ತಮ್ಮದಾಗಿಸಿಕೊಂಡರು. 10000 ಮೀ. ಓಟದಲ್ಲಿ ಶ್ರೀಓಂ ಪಟೇಲ್‌ ಎರಡನೇ ಸ್ಥಾನ ಗಿಟ್ಟಿಸಿದರು. ಅವರು 5000 ಮೀ. ಓಟದಲ್ಲೂ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.4X400 ಮೀ. ರಿಲೇ ಸ್ಪರ್ಧೆಯಲ್ಲಿ ಎ.ಕೆ. ರಘು, ಎನ್‌. ಮಂಜುನಾಥ್‌, ಡಿ.ಆರ್‌. ರಾಹುಲ್‌ ಮತ್ತು ಜಗದೀಶ್‌ ಅವರನ್ನೊಳಗೊಂಡ ಕರ್ನಾಟಕ 3:17. 75 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿತು.ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ 200 ಮೀ. ಓಟದಲ್ಲಿ ಜಿ.ಕೆ. ವಿಜಯ ಕುಮಾರಿ ಬೆಳ್ಳಿ ಗೆದ್ದರು. ಈ ಅಥ್ಲೀಟ್‌ 400 ಮೀ. ಓಟದಲ್ಲಿ ಚಿನ್ನ ಜಯಿಸಿದ್ದರು. ಇದೇ ವಿಭಾಗದ ಷಾಟ್‌ಪಟ್‌ನಲ್ಲಿ ಜಿ.ಕೆ. ನಮಿತಾ 13.46 ಮೀ. ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು.ಎ. ನಿತ್ಯಾಶ್ರೀ, ಕೆ.ಆರ್‌. ಮೇಘನಾ, ಎಚ್‌.ಸಿ. ರೋಜಾ ಮತ್ತು ಕೆ. ಯಶಸ್ವಿನಿ ಅವರನ್ನೊಳಗೊಂಡ ಕರ್ನಾಟಕ ತಂಡ ಬಾಲಕಿಯರ 20 ವರ್ಷ ವಯಸ್ಸಿನೊಳಗಿನವರ 4X400 ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿತು.ರಾಷ್ಟ್ರೀಯ ದಾಖಲೆ: ಕೂಟದ ಕೊನೆಯ ದಿನ ಮೂರು ರಾಷ್ಟ್ರೀಯ ದಾಖಲೆಗಳು ಮೂಡಿ ಬಂದವು. ಬಾಲಕರ 16 ವರ್ಷ ವಯಸ್ಸಿನೊಳ ಗಿನವರ ವಿಭಾಗದ 200 ಮೀ. ಓಟದಲ್ಲಿ ಪಶ್ಚಿಮ ಬಂಗಾಳದ ಚಂದನ್‌ ಬವೂರಿ 22.11 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದರಲ್ಲದೆ, ತಮಿಳು ನಾಡಿನ ಎಂ.ಎಸ್‌. ಅರುಣ್‌ (22.30 ಸೆ.) ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದರು.ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ 800 ಮೀ. ಓಟದಲ್ಲಿ ಕೇರಳದ ಜೆಸ್ಸಿ ಜೋಸೆಫ್‌ (2:08.65 ಸೆ.) ಮತ್ತು ಹೆಪ್ಟಥ್ಲಾನ್‌ನಲ್ಲಿ ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್‌ ಹೊಸ ದಾಖಲೆ ಸ್ಥಾಪಿಸಿದರು.ಅಂತಿಮ ದಿನದ ಫಲಿತಾಂಶ:

ಬಾಲಕರ ವಿಭಾಗ

20 ವರ್ಷ ವಯಸ್ಸಿನೊಳಗಿನವರು: 200 ಮೀ. ಓಟ: ಸಲೀಮ್‌ ಶೇಖ್‌ (ಕರ್ನಾಟಕ)-1, ಮಹಾವೀರ್‌ (ಹರಿಯಾಣ)-2, ಎಂ. ರತನ್‌ ಕುಮಾರ್‌ (ಆಂಧ್ರ ಪ್ರದೇಶ)-3. ಕಾಲ: 22.27 ಸೆ.

10000 ಮೀ. ಓಟ: ರಾಜೇಂದ್ರ ಬಿಂದ್‌ (ಉತ್ತರ ಪ್ರದೇಶ)-1, ಶ್ರೀಓಂ ಪಟೇಲ್‌ (ಕರ್ನಾಟಕ)-2, ಪ್ರವೀಣ್‌ (ದೆಹಲಿ)-3. ಕಾಲ: 32:26.91 ಸೆ.

800 ಮೀ. ಓಟ: ಲಲಿತ್‌ ಮಾಥುರ್‌ (ದೆಹಲಿ)-1, ಲವ್‌ಪ್ರೀತ್‌ ಸಿಂಗ್‌ (ಪಂಜಾಬ್‌)-2, ಅರ್ಜುನ್‌ ಖೋಕರ್‌ (ಹರಿಯಾಣ)-3. ಕಾಲ: 1:54.35 ಸೆ.

3000 ಮೀ. ಸ್ಟೀಪಲ್‌ಚೇಸ್‌: ಎಂ. ನರೇಶ್‌ (ಆಂಧ್ರ ಪ್ರದೇಶ)-1, ಮಹೇಂದರ್‌ ಸಿಂಗ್‌ (ಕರ್ನಾಟಕ)-2, ನಾಗರಾಜ್‌ ಕೆ. (ಮಹಾರಾಷ್ಟ್ರ)-3. ಕಾಲ: 9:26.62 ಸೆ.

4X400 ರಿಲೇ: ಕೇರಳ-1, ಕರ್ನಾಟಕ-2, ತಮಿಳುನಾಡು-3. ಕಾಲ: 3:15.71 ಸೆ.

18 ವರ್ಷ ವಯಸ್ಸಿನೊಳಗಿನವರು:

200 ಮೀ. ಓಟ: ಮೋಹಿತ್‌ (ಹರಿಯಾಣ)-1, ಆರ್‌. ಮೋಹನ್‌ ಕುಮಾರ್‌ (ತಮಿಳುನಾಡು)-2, ಬಿ. ಕಾರ್ತಿಕೇಯನ್‌ (ಪುದುಚೇರಿ)-3. ಕಾಲ: 21.78 ಸೆ.

3000 ಮೀ. ಓಟ: ಅರ್ಜುನ್‌ ಕುಮಾರ್‌ (ಉತ್ತರ ಪ್ರದೇಶ)-1, ಅಭಿಷೇಕ್‌ ಪಾಲ್‌ (ಅಸ್ಸಾಂ)-2, ಪಿ.ಆರ್‌. ರಾಹುಲ್‌ (ಕೇರಳ)-3. ಕಾಲ: 8:39.30 ಸೆ.

ಟ್ರಿಪಲ್‌ ಜಂಪ್‌: ಎಸ್‌. ಮಹಮ್ಮದ್‌ ಜುಬೇರ್‌ (ತಮಿಳುನಾಡು)-1, ಸೋನು ಕುಮಾರ್‌ (ರಾಜಸ್ತಾನ)-2, ಆನಂದ್‌ (ಹರಿಯಾಣ)-3.

16 ವರ್ಷ ವಯಸ್ಸಿನೊಳಗಿನವರು:

200 ಮೀ. ಓಟ: ಚಂದನ್‌ ಬವೂರಿ (ಪಶ್ಚಿಮ ಬಂಗಾಳ)-1, ಬಿ. ಕ್ಷಿತಿಜ್‌ (ಮಹಾರಾಷ್ಟ್ರ)-2, ಎಂ.ಎಸ್‌. ಅರುಣ್‌ (ತಮಿಳುನಾಡು)-3. ಕಾಲ: 22.11 ಸೆ.

ಬಾಲಕಿಯರ ವಿಭಾಗ:

20 ವರ್ಷ ವಯಸ್ಸಿನೊಳಗಿನವರು:

200 ಮೀ. ಓಟ: ಎಸ್‌. ಅರ್ಚನಾ (ತಮಿಳುನಾಡು)-1, ಸಿ. ರೆಂಜಿತಾ (ಕೇರಳ)-2, ರುಮಾ ಸರ್ಕಾರ್‌ (ಪಶ್ಚಿಮ ಬಂಗಾಳ)-3. ಕಾಲ: 24.61 ಸೆ.

800 ಮೀ. ಓಟ: ಪಿ.ಯು ಚಿತ್ರಾ (ಕೇರಳ)-1, ಪ್ರಮೀಳಾ ಯಾದವ್‌ (ಉತ್ತರ ಪ್ರದೇಶ)-2, ಕೋಮಲ್‌ ಚೌಧರಿ (ಹರಿಯಾಣ)-3. ಕಾಲ: 2:13.24 ಸೆ.

3000 ಮೀ. ಓಟ: ಪ್ರೀತಿ ಲಂಬಾ (ಹರಿಯಾಣ)-1, ಪೂಜಾ ವರಾಡೆ (ಮಹಾರಾಷ್ಟ್ರ)-2, ಎಂ.ಡಿ. ತಾರಾ (ಕೇರಳ)-3. ಕಾಲ: 10:14.20 ಸೆ.

4X400 ರಿಲೇ: ಕೇರಳ-1, ಕರ್ನಾಟಕ-2, ಆಂಧ್ರ ಪ್ರದೇಶ-3. ಕಾಲ: 4:00.46 ಸೆ.

18 ವರ್ಷ ವಯಸ್ಸಿನೊಳಗಿನವರು:

200 ಮೀ. ಓಟ: ಶಹರ್ಬಾನಾ ಸಿದ್ದೀಕಿ (ಕೇರಳ)-1, ಜಿ. ವಿಜಯಕುಮಾರಿ (ಕರ್ನಾಟಕ)-2, ಎ. ಚಂದ್ರಲೇಖಾ (ತಮಿಳುನಾಡು)-3. ಕಾಲ: 25.51 ಸೆ.

800 ಮೀ. ಓಟ: ಜೆಸ್ಸಿ ಜೋಸೆಫ್‌ (ಕೇರಳ)-1, ಥೆರೆಸಾ ಜೋಸೆಫ್‌ (ಕೇರಳ)-2, ಸುಗಂಧ (ಉತ್ತರ ಪ್ರದೇಶ)-3. ಕಾಲ: 2:08.65 ಸೆ.

ಷಾಟ್‌ಪಟ್‌: ಮೇಘನಾ ದೇವಾಂಗ್‌ (ಮಹಾರಾಷ್ಟ್ರ)-1, ಜಿ.ಕೆ. ನಮಿತಾ (ಕರ್ನಾಟಕ)-2, ಕೆ. ಸುಭಾಷಿನಿ (ತಮಿಳುನಾಡು)-3. ದೂರ: 14.82 ಸೆ.

ಹೆಪ್ಟಥ್ಲಾನ್‌: ಸ್ವಪ್ನಾ ಬರ್ಮನ್‌ (ಪಶ್ಚಿಮ ಬಂಗಾಳ)-1, ರಾಜೇಶ್ವರಿ (ಒಡಿಶಾ)-2, ಎಂ. ಸೌಮ್ಯಾ (ತಮಿಳುನಾಡು)-3. ಪಾಯಿಂಟ್‌: 4992

16 ವರ್ಷ ವಯಸ್ಸಿನೊಳಗಿನವರು:

200 ಮೀ. ಓಟ: ಜಿಸ್ನಾ ಮ್ಯಾಥ್ಯೂ (ಕೇರಳ)-1, ತಿಯಾಶಾ ಸಮದ್ದೆರ್‌ (ಪಶ್ಚಿಮ ಬಂಗಾಳ)-2, ಸಿದ್ದಿ ಹಿರೇ (ಮಹಾರಾಷ್ಟ್ರ)-3. ಕಾಲ: 25.35 ಸೆ.

ಸಮಗ್ರ ಚಾಂಪಿಯನ್‌ಷಿಪ್‌: ಕೇರಳ (585 ಪಾಯಿಂಟ್‌); ರನ್ನರ್‌ ಅಪ್‌: ತಮಿಳುನಾಡು (362 ಪಾಯಿಂಟ್‌)

ಪ್ರತಿಕ್ರಿಯಿಸಿ (+)