ಸೋಮವಾರ, ಜನವರಿ 20, 2020
24 °C

ಕೋಚ್‌ ಕಾರ್ಖಾನೆ ಸ್ಥಾಪನೆ ಯಾವಾಗ?

– ಕೆ.ಎಂ. ಹನುಮೇಗೌಡ ಕೊಲದೇವಿ,ಮುಳಬಾಗಿಲು ತಾಲ್ಲೂಕು Updated:

ಅಕ್ಷರ ಗಾತ್ರ : | |

‘ಬೆಮೆಲ್‌’ ಹೊರತುಪಡಿಸಿ ಯಾವುದೇ ಪ್ರಮುಖ ಕಾರ್ಖಾನೆಗಳಿಲ್ಲದ  ಕೋಲಾರ ಜಿಲ್ಲೆ ಯಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪಿಸುವುದಾಗಿ 2011ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಯಿತು.ಸ್ಥಳ ಗುರುತಿಸುವುದರಲ್ಲೇ ವರ್ಷ ಕಳೆಯಿತು. ನಂತರ 2012ರ ರೈಲ್ವೆ ಬಜೆಟ್‌ನಲ್ಲೂ  ‘ಕೋಲಾರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆ’ ಮಾಡು­ವುದಾಗಿ ಘೋಷಿಸಿ ಅದಕ್ಕಾಗಿ 1200 ಎಕರೆ ಜಮೀನನ್ನು ಗುರುತಿಸಿ ರುವುದಾಗಿ ಪ್ರಕಟಿಸಲಾ­ಯಿತು. ಆಗ ಸಿ.ಕೆ. ಜಾಫರ್‌ ಷರೀಫ್‌ ಅವರು  ಬಜೆಟ್‌ ಕುರಿತು ‘ಕೋಲಾ­ರಕ್ಕೆ ಪ್ರತಿ ವರ್ಷ ಕೋಚ್‌ ಕಾರ್ಖಾನೆ ಮಂಜೂರಾಗುತ್ತಲೇ ಇರುತ್ತದೆ’ ಎಂದು ವ್ಯಂಗ್ಯ­ವಾ­ಡಿ­ದ್ದರು.ಆ ವರ್ಷದಲ್ಲೂ  ಪ್ರಯ­ತ್ನ­ ಆಗಲಿಲ್ಲ. ಪುನಃ 2013ರ ಬಜೆಟ್‌­ನಲ್ಲೂ ಕೋಚ್‌ ಕಾರ್ಖಾನೆ ಘೋಷಣೆ ಆಗಿದೆ. 2013ರ ರಾಜ್ಯ ಬಜೆಟ್‌ನಲ್ಲಿಯೂ  ಕೋಲಾ­ರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆಗೆ ಅಗತ್ಯವಾದ ಭೂಮಿ ಹಾಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡು­ವುದಾಗಿ ಪ್ರಸ್ತಾಪಿಸಲಾಗಿದೆ.ಒಂದು ಕಾರ್ಖಾನೆ ಸ್ಥಾಪನೆ­ಗಾಗಿ ಇನ್ನೆಷ್ಟು ಬಜೆಟ್‌ಗಳು ಬರಬೇಕು? ಸುಮಾರು 5000 ಮಂದಿ ಉದ್ಯೋಗ ನೀಡುವ ಯೋಜನೆ ಆರಂಭ­­ವಾದಲ್ಲಿ ನಿರಂತರ ಬರಗಾಲಕ್ಕೆ ತುತ್ತಾಗಿ ಅಂತರ್ಜಲದ ಮಟ್ಟ 1500 ಅಡಿ ಆಳ ತಲುಪಿ­ರುವ ಬರಡು ಪ್ರದೇಶದ ಒಂದಿಷ್ಟು ಮಂದಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಆದರೆ ಈಡೇರಿಲ್ಲ. ಇದಕ್ಕೆ ರೈಲ್ವೆ ಸಚಿವರ ಅವಕೃ­ಪೆಯೋ, ರಾಜ್ಯ ಸರ್ಕಾರದ ನಿರಾಸಕ್ತಿಯೋ, ಈ ಯೋಜನೆಯ ರೂವಾರಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಅವರ ವೈಫಲ್ಯವೋ ಗೊತ್ತಿಲ್ಲ.

 

ಪ್ರತಿಕ್ರಿಯಿಸಿ (+)