ಬಿಡುಗಡೆಯಾದ ಮೊದಲ ದಿನವೇ ಮೂರು ಕೋಟಿ ರೂಪಾಯಿ ಬಾಚಿದೆ. ಮೊದಲನೇ ವಾರದ ಗಳಿಕೆ 15 ಕೋಟಿ...! `ಸಂಗೊಳ್ಳಿ ರಾಯಣ್ಣ' ಬಿಡುಗಡೆಯಾದ ದಿನದಿಂದಲೂ ಅದರ ಗಳಿಕೆಯದೇ ಸುದ್ದಿ. 32 ಕೋಟಿ ರೂ. ಬಂಡವಾಳದಲ್ಲಿ ನಿರ್ಮಿಸಲಾಗಿದೆ .

ಎನ್ನಲಾಗುತ್ತಿರುವ `ಸಂಗೊಳ್ಳಿ ರಾಯಣ್ಣ' ಕನ್ನಡದ ಅದ್ದೂರಿ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ನಿರ್ಮಾಪಕ ಆನಂದ ಅಪ್ಪುಗೋಳ್ ಹೂಡಿರುವ ಬಂಡವಾಳ ಹಿಂದಕ್ಕೆ ಬರಲು ಅದಕ್ಕೆ ಪೂರಕವಾಗಿ ಜನರ ಪ್ರತಿಕ್ರಿಯೆಯೂ ಬೇಕು ನಿಜ.

25ನೇ ದಿನದತ್ತ ಕಾಲಿಟ್ಟಿರುವ `ಸಂಗೊಳ್ಳಿ....' 30 ಕೋಟಿ ರೂ.ನಷ್ಟು ಗಳಿಕೆ ಕಂಡಿದೆ ಎಂಬ ಮಾತುಗಳು ಚಿತ್ರರಂಗದ ಬೆಳವಣಿಗೆಯ ನಿಟ್ಟಿನಲ್ಲಿ ಸಂತಸದ ವಿಚಾರವಾದರೂ, ಅದರ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರದಲ್ಲಿ ಇದು ಕೇವಲ ಕಲ್ಪನೆಯಲ್ಲಿ ಮೂಡಿರಬಹುದಾದ ಅಂಕಿಅಂಶಗಳಷ್ಟೆ ಎಂಬುದು ಸ್ಪಷ್ಟವಾಗುತ್ತದೆ.

ಸಿನಿಮಾ ಎಷ್ಟು ದಿನ ಓಡುತ್ತದೆ ಎನ್ನುವುದು ಈ ಹಿಂದೆ ಇದ್ದ ಯಶಸ್ಸಿನ ಮಾನದಂಡ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವಂತೆ ಇಂದು ಚಿತ್ರ ಶುರುವಾಗುವ ಮೊದಲೇ ಲಾಭದ ಲೆಕ್ಕಾಚಾರ ಶುರುವಾಗುತ್ತದೆ. ಇಂದಿನ ಸಿನಿಮಾಗಳ ಗೆಲುವಿನ ಮಾಪಕವೇ ಗಳಿಕೆ.

ಹಾಕಿದ ಹಣಕ್ಕಿಂತ ಅತಿ ಬೇಗನೆ ದುಪ್ಪಟ್ಟು ಲಾಭ ಗಳಿಸುವುದೇ ಚಿತ್ರದ ಗೆಲುವು ಎನ್ನುವ ಬಾಲಿವುಡ್ ಮನೋಭಾವದ ಬಳುವಳಿ ನಮ್ಮಲ್ಲಿಗೂ ಬಂದು ಹೆಚ್ಚೇನೂ ಸಮಯವಾಗಿಲ್ಲ. ಆದರೆ ಈಗ ಹೆಜ್ಜೆ ಹೆಜ್ಜೆಗೂ ಅದರದ್ದೇ ಸದ್ದು. ನಲವತ್ತು ಐವತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಕ್ರಮೇಣ ಅವುಗಳ ಸಂಖ್ಯೆಯನ್ನು ವಿಸ್ತರಿಸಲಾಗುತ್ತಿತ್ತು.

ಈಗ ಆರಂಭದಲ್ಲೇ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರಬಿಡುಗಡೆಯಾಗಬೇಕು. ಮೊದಲ ವಾರದಲ್ಲಿಯೇ ಕೋಟಿಗಟ್ಟಲೆ ಗಳಿಕೆ ಕಾಣಬೇಕು. ಆಗ ಮಾತ್ರ ಅದು ಯಶಸ್ವಿ ಚಿತ್ರ ಎಂದು ಪರಿಗಣಿಸಲು ಸಾಧ್ಯ ಎನ್ನುವ ಪರಿಸ್ಥಿತಿ. ಇಲ್ಲಿ ಸಿನಿಮಾದ ಗಳಿಕೆಯ ಲಾಭದಲ್ಲಿ ಗೆಲುವು ಮುಖ್ಯವೇ ಹೊರತು ಪ್ರೇಕ್ಷಕನ ಮನಸ್ಸನ್ನು ಆ ಚಿತ್ರ ಗೆದ್ದಿದೆಯೇ ಎಂಬುದು ನಗಣ್ಯ ಎನ್ನುತ್ತಾರೆ ವಿತರಕರು.

`ಸಂಗೊಳ್ಳಿ ರಾಯಣ್ಣ' 25 ದಿನಕ್ಕೆ ಮೂವತ್ತು ಕೋಟಿ ಬಾಚಿದೆ ಎಂಬ ವರದಿಗಳು ನಿಜವಲ್ಲ. ಆದರೆ ಇದುವರೆಗಿನ ಕನ್ನಡ ಸಿನಿಮಾ ಇತಿಹಾಸದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿಯೇ ಯಾವ ಚಿತ್ರವೂ ಕಂಡಿರದ ಗಳಿಕೆಯನ್ನು ಈ ಸಿನಿಮಾ ಕಂಡಿದೆ ಎನ್ನುವುದು ನಿರ್ವಿವಾದ ಎನ್ನುತ್ತಾರೆ ಚಿತ್ರದ ವಿತರಕ ಗಂಗರಾಜು.

ಚಿತ್ರ ಬಿಡುಗಡೆಯಾಗಿದ್ದು 131 ಚಿತ್ರಮಂದಿರಗಳಲ್ಲಿ. ಮೊದಲ ವಾರದಲ್ಲೇ ಗಳಿಕೆ 15 ಕೋಟಿ ದಾಟಿದೆ ಎಂಬುದು ಸುದ್ದಿ. ಟಿಕೆಟ್ ದರ ಏರಿಕೆಯನ್ನೂ ಒಳಗೊಂಡು ಒಟ್ಟಾರೆ ಸುಮಾರು 2096 ಪ್ರದರ್ಶನಗಳನ್ನು ಒಳಗೊಂಡು ಲೆಕ್ಕ ಹಾಕುವಾಗ ತುಸು ಧಾರಾಳತೆ ತೋರಿದರೂ ಮೊದಲ ವಾರದ ಗಳಿಕೆ ಐದೂ ಕಾಲು ಕೋಟಿ ರೂ ದಾಟಲಾರದು. ಈ ಬಗೆಯ ಸುದ್ದಿಗಳು ಚಿತ್ರ ಪ್ರಚಾರದ ಭಾಗ ಎನ್ನುವುದು ಸತ್ಯ.

ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕರಿಗಿದ್ದರೂ ಇಷ್ಟೇ ಚಿತ್ರಮಂದಿರಗಳು ಸಾಕು ಎಂದು ಪಟ್ಟು ಹಿಡಿದವರು ಗಂಗರಾಜು. ಪ್ರತಿಕ್ರಿಯೆ ಅದ್ಭುತವಾಗಿದೆ ಎಂಬ ಕಾರಣಕ್ಕೆ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಿ ಗಳಿಕೆ ಲೆಕ್ಕಾಚಾರ ಹಾಕುವ ಉದ್ದೇಶವೂ ಅವರಿಗಿಲ್ಲ.

ಈಗಿನ ಗಳಿಕೆಯ ಮೊತ್ತವನ್ನು ಹಿಂದಿನ ಕಾಲದ ಚಿತ್ರಗಳಿಗೆ ಹೋಲಿಸುವುದು ಸಹ ತಪ್ಪಾಗುತ್ತದೆ ಎನ್ನುತ್ತಾರೆ ಗಂಗರಾಜು. ಅವರ ಅನುಭವದ ಪ್ರಕಾರ ಪ್ರಮುಖ ಕೇಂದ್ರಗಳ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ ಮೊದಲ ವಾರದಲ್ಲಿ ಹೆಚ್ಚೆಂದರೆ ಐದು ಕೋಟಿ ರೂ ಗಳಿಕೆ ಮಾಡಬಹುದು. ಎರಡು ವರ್ಷ ಓಡಿದ `ಬಂಗಾರದ ಮನುಷ್ಯ'ನ ಒಟ್ಟಾರೆ ಗಳಿಕೆ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಆಗ ಟಿಕೆಟ್ ದರ ಇದ್ದದ್ದೇ 1-2 ರೂಪಾಯಿ.

ಅಲ್ಲದೆ ಹೆಚ್ಚೆಂದರೆ 30-40 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದವು. ಕನ್ನಡದಲ್ಲಿ ದಾಖಲೆ ಸೃಷ್ಟಿಸಿದ `ಮುಂಗಾರು ಮಳೆ' ಬಿಡುಗಡೆಯಾದ ಕೆಲವು ವಾರ ಜನರಿಲ್ಲದೆ ಚಿತ್ರಮಂದಿರಗಳನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿತ್ತು.

ಇದ್ದಕ್ಕಿದ್ದಂತೆ ಜನ ಆ ಚಿತ್ರದತ್ತ ಆಕರ್ಷಿತರಾದರು. ಆಗ ಟಿಕೆಟ್ ದರ ಇದ್ದದ್ದು 25-30 ರೂಪಾಯಿ. ಈಗ ಪರಿಸ್ಥಿತಿ ಹಾಗಿಲ್ಲ. ಚಿತ್ರದ ಗೆಲುವು ಒಂದೇ ವಾರದಲ್ಲಿ ಸಾಬೀತಾಗುತ್ತದೆ. ಟಿಕೆಟ್ ದರ 40-50 ರೂ. ಇರುವುದರಿಂದ ಭಾರಿ ಗಳಿಕೆಯಾದಂತೆ ಅನಿಸುತ್ತದೆ. ವಾರದ ನಂತರ ಪ್ರೇಕ್ಷಕ ಬರುತ್ತಾನೋ ಇಲ್ಲವೋ ಎಂಬುದನ್ನು ಕಾದು ನೋಡುವ ತಾಳ್ಮೆ ಚಿತ್ರಮಂದಿರಗಳಿಗೆ ಇಲ್ಲ, ನಿರ್ಮಾಪಕನಿಗೂ ಇಲ್ಲ.

150-200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೂ ನಿಜವಾಗಿಯೂ ಗಳಿಕೆ ತಂದುಕೊಡುವುದು 100-125 ಪ್ರಮುಖ ಚಿತ್ರಮಂದಿರಗಳು ಮಾತ್ರ ಎನ್ನುವುದು ವಿತರಕ ಕೆಸಿಎನ್ ಕುಮಾರ್ ಅಭಿಪ್ರಾಯ. ಈಗ ಟೀವಿ ಚಾನಲ್ಗಳ ಸಂಖ್ಯೆ ಹೆಚ್ಚಿದೆ, ಸೀಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಅನ್ಯಭಾಷೆಗಳ ಚಿತ್ರಗಳು ಸೆಳೆಯುತ್ತವೆ. ಇಷ್ಟೆಲ್ಲಾ ಪೈಪೋಟಿಗಳು ಇರುವಾಗ ಪ್ರೇಕ್ಷಕನಿಗೆ ಸಿನಿಮಾವನ್ನು ಬೇಗ ತಲುಪಿಸಲು ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ಅನಿವಾರ್ಯ. ಇಲ್ಲದಿದ್ದರೆ ಆತ ಬೇರೆ ಭಾಷೆ ಚಿತ್ರಗಳತ್ತ ಹೊರಳುತ್ತಾನೆ ಎನ್ನುತ್ತಾರೆ ಅವರು.

ಈ ಪೈಪೋಟಿಯ ನಡುವೆಯೂ `ಅದ್ದೂರಿ'ಯಂಥ ಹೊಸಬರ ಚಿತ್ರ ನೂರು ದಿನ ಓಡಿರುವುದು ವಿಶೇಷ. ದಿನಗಟ್ಟಲೆ ಓಡಿಯೂ ಗೆಲ್ಲುವ ಸಿನಿಮಾಗಳು ಆಗಾಗ ನಮ್ಮ ಕಣ್ಣಿಗೆ ಕಾಣುತ್ತಿವೆ. ಇತ್ತ ಒಮ್ಮೆಲೆ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡು ಒಂದೇ ಬಾರಿಗೆ ದುಡ್ಡು ಬಾಚುವ ಚಿತ್ರಗಳೂ ಇವೆ. ಹಾಗೆ ನೋಡಿದರೆ ನಮ್ಮಲ್ಲಿ ತಯಾರಾಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯೇ.

ಚಿತ್ರಗಳಿಲ್ಲದೆ ಎಷ್ಟೋ ಚಿತ್ರಮಂದಿರಗಳು ಖಾಲಿ ಹೊಡೆಯುತ್ತವೆ ಎನ್ನುವ ಕುಮಾರ್, ಚಿತ್ರರಂಗದ ಈ ಧೋರಣೆ ಬದಲಾಗಲು ಪ್ರಮುಖ ನಾಯಕ ನಟರುಗಳು ವರ್ಷಕ್ಕೆ ಒಂದು ಸಿನಿಮಾಕ್ಕೆ ತೃಪ್ತರಾಗುವ ಬದಲು ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದ ನಟರಂತೆ ಕನಿಷ್ಠ ಮೂರು ಸಿನಿಮಾಗಳಲ್ಲಾದರೂ ನಟಿಸಬೇಕು ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.