ಸೋಮವಾರ, ಜನವರಿ 27, 2020
15 °C

ಕೋಟ್ಯಧೀಶರ ನಗರಿ ದುಬೈ: ಭಾರತೀಯರ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ದುಬೈ ಕೋಟ್ಯಧೀಶರ ನಗರಿ ಪಟ್ಟಿಗೆ ಸೇರಲು ಭಾರತೀಯ ಧನವಂತರೂ ಕಾರಣರಾಗಿದ್ದಾರೆ. ಅತ್ಯಂತ ಶ್ರೀಮಂತರು ವಾಸಿಸುವ ನಗರಗಳ ಕುರಿತ ಇತ್ತೀಚಿನ ಸೂಚ್ಯಂಕದ ಪ್ರಕಾರ ಮುಂಬೈ ಕೋಟ್ಯಧೀಶರು ಇರುವ ಐದನೇ ಪ್ರಮುಖ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಡೀ ಮಧ್ಯ ಪ್ರಾಚ್ಯದಲ್ಲಿ ದುಬೈನಲ್ಲೇ ಅತಿ ಹೆಚ್ಚು ಧನವಂತರು ನೆಲೆಸಿದ್ದಾರೆ. ಇದರಲ್ಲಿ ಭಾರತೀಯ ಕೋಟ್ಯಧೀಶರ ಪಾಲೂ ಇದೆ ಎಂದು `ವೆಲ್ತಿ ಇನ್‌ಸೈಟ್~ ಸಂಸ್ಥೆಯ ಅಂಕಿಅಂಶ ಹೇಳಿದೆ.ಕೋಟ್ಯಧಿಪತಿಗಳು ಹೆಚ್ಚಿರುವ ನಗರದ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದ್ದರೆ, ಮಾಸ್ಕೊ, ಲಂಡನ್, ಹಾಂಕಾಂಗ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.

ಪ್ರತಿಕ್ರಿಯಿಸಿ (+)