ಭಾನುವಾರ, ಜನವರಿ 19, 2020
26 °C

ಕ್ಯಾಲಸನಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಗ್ರಾಮ ಪಂಚಾಯಿತಿಯಿಂದ ಬಿಬಿಎಂಪಿಗೆ ಸೇರ್ಪಡೆಯಾದ ಕ್ಯಾಲಸನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಎಸ್. ನಂದೀಶ್‌ರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಬಿಬಿಂಪಿಯು 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ. ಕೆಲವೆಡೆ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ವಿಳಂಬಗೊಂಡ ಕಾರಣಕ್ಕೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳ್ಳುವ ರೀತಿಯಲ್ಲಿ ಸ್ಥಳೀಯರು ಮೇಲ್ವಿಚಾರಣೆ ನಡೆಸಬೇಕು ಎಂದರು.ಬಿಬಿಎಂಪಿ ಸದಸ್ಯೆ ತೇಜಸ್ವಿನಿರಾಜು ಮಾತನಾಡಿ, ನಾಗರಿಕ ಪರ ಸಂಘಟನೆಗಳು ಮತ್ತು ನಿವಾಸಿಗಳು ಒಗ್ಗಟ್ಟಿನಿಂದ ಇದ್ದರೆ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯ ಎಂದರು.ಬಿಜೆಪಿ ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಿದಾನಂದ, ಮುಖಂಡ ಕೇಶವಮೂರ್ತಿ, ಸುಬ್ಬರೆಡ್ಡಿ, ಬೈರೇಗೌಡ, ಬಿ.ಎಚ್.ಗಣೇಶರೆಡ್ಡಿ, ಲೋಕೇಶ್, ದಾಮೋದರ ರೆಡ್ಡಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)