ಗುರುವಾರ , ಮೇ 26, 2022
31 °C

ಕ್ರಿಕೆಟ್: ಉಪಾಧ್ಯಕ್ಷರ ಇಲೆವೆನ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದ್ಭುತ ಪ್ರದರ್ಶನ ತೋರಿದ ನಿಶಾಂತ್ ಶೆಖಾವತ್ (196, 249 ಎಸೆತ, 23 ಬೌಂಡರಿ) ಹಾಗೂ ಕೆ.ಎಲ್.ಶ್ರೀಜಿತ್ ಅವರ ಶತಕಗಳ ನೆರವಿನಿಂದ ಉಪಾಧ್ಯಕ್ಷರ ಇಲೆವೆನ್ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆದ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಟೂರ್ನಿಯ ಪಂದ್ಯದಲ್ಲಿ ರಾಯಚೂರು ವಲಯದ ವಿರುದ್ಧ ಇನಿಂಗ್ಸ್ ಹಾಗೂ 121 ರನ್‌ಗಳ ಗೆಲುವು ಪಡೆದಿದೆ.ಮಂಗಳವಾರ ಕೊನೆಗೊಂಡ ಎರಡು ದಿನಗಳ ಈ ಪಂದ್ಯದಲ್ಲಿ 197 ರನ್‌ಗಳ ಹಿನ್ನಡೆ ಪಡೆದಿದ್ದ ರಾಯಚೂರು ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 40 ಓವರ್‌ಗಳಲ್ಲಿ ಕೇವಲ 76 ರನ್ ಗಳಿಸುವಷ್ಟರಲ್ಲಿ ಸರ್ವ ಪತನ ಕಂಡಿತು. ಅಬ್ರಾರ್ ಕಾಜಿ (11ಕ್ಕೆ 5) ಪ್ರಭಾವಿ ಪ್ರದರ್ಶನ ತೋರಿದರು. ಇದಕ್ಕೂ ಮೊದಲು ಉಪಾಧ್ಯಕ್ಷರ ಇಲೆವೆನ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 89.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 337 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಸಂಕ್ಷಿಪ್ತಸ್ಕೋರ್: ರಾಯಚೂರು ವಲಯ: ಮೊದಲ ಇನಿಂಗ್ಸ್: 45 ಓವರ್‌ಗಳಲ್ಲಿ 140 ಹಾಗೂ 40 ಓವರ್‌ಗಳಲ್ಲಿ 76 (ಅಬ್ರಾರ್ ಕಾಜಿ 11ಕ್ಕೆ 5, ರೌನಕ್ ಶಾ 27ಕ್ಕೆ 3). ಉಪಾಧ್ಯಕ್ಷರ ಇಲೆವೆನ್: 89.5 ಓವರ್‌ಗಳಲ್ಲಿ 337 (ನಿಶಾಂತ್ ಶೆಖಾವತ್ 196, ಶ್ರೀಜಿತ್ ಔಟಾಗದೆ 100; ಆನಂದ್ 75ಕ್ಕೆ 2). ಫಲಿತಾಂಶ: ಉಪಾಧ್ಯಕ್ಷರ ಇಲೆವೆನ್‌ಗೆ ಗೆಲುವುತುಮಕೂರು ವಲಯ: ಮೊದಲ ಇನಿಂಗ್ಸ್: 75.4 ಓವರ್‌ಗಳಲ್ಲಿ 235 ಹಾಗೂ 51 ಓವರ್‌ಗಳಲ್ಲಿ 108 (ಎಚ್.ಪಿ.ರಾಹುಲ್ 33, ಮನು ರವೀಂದ್ರ 31; ಮಿತ್ರಕಾಂತ್ 30ಕ್ಕೆ4). ಬೆಂಗಳೂರು ವಲಯ: 81 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 384 (ಮಯಾಂಕ್ ಅಗರವಾಲ್ 123, ಸೂರಜ್ ಸಂಪತ್ 35, ಅರ್ಜುನ್ ಹೊಯ್ಸಳ ಔಟಾಗದೆ 137, ದಿನೇಶ್ ಬೊರ್ವಾಂಕರ್ 65; ರಘುವೀರ್ 100ಕ್ಕೆ40).ಫಲಿತಾಂಶ: ಬೆಂಗಳೂರು ವಲಯಕ್ಕೆ ಇನಿಂಗ್ಸ್ ಹಾಗೂ 41 ರನ್ ಜಯಮಂಗಳೂರು ವಲಯ: ಮೊದಲ ಇನಿಂಗ್ಸ್: 81.2 ಓವರ್‌ಗಳಲ್ಲಿ 225 ಹಾಗೂ 21 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 83 (ನಿಶಿತ್ ಔಟಾಗದೇ 34, ನಸ್ರುಲ್ಲಾ 27). ಕಾರ್ಯದರ್ಶಿ ಇಲೆವೆನ್: 89.1 ಓವರ್‌ಗಳಲ್ಲಿ 222 (ಅನಿಲ್ ಮಹಾಪಾತ್ರ 44, ದಿಕ್ಷಾಂಶು ನೇಗಿ ಔಟಾಗದೆ 97, ಕೌಶಿಕ್ ಉಡುಪ 23; ಆದಿತ್ಯ ರೈ 56ಕ್ಕೆ 6, ರಿತೇಶ್ ಭಟ್ಕಳ್ 43ಕ್ಕೆ 2).ಫಲಿತಾಂಶ: ಡ್ರಾ

ಮೈಸೂರು ವಲಯ: ಮೊದಲ ಇನಿಂಗ್ಸ್: 65.5 ಓವರ್‌ಗಳಲ್ಲಿ 174 ಹಾಗೂ 42.1 ಓವರ್‌ಗಳಲ್ಲಿ 97 (ಭರತ್ 55; ಶಶಿಂದ್ರ 19ಕ್ಕೆ6, ಉಮಂಗ್ 12ಕ್ಕೆ 2). ಸಂಯುಕ್ತ ನಗರ ವಲಯ: 75.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 301ಕ್ಕೆ ಡಿಕ್ಲೇರ್ಡ್ (ಲಿಯಾನ್ ಖಾನ್ 117, ಅಮನ್ ರಾಜ್ 36; ನಂದಕಿಶೋರ್ 70ಕ್ಕೆ2, ನವೀನ್ 65ಕ್ಕೆ2, ನಿತೀಶ್ ಮಂಜು 31ಕ್ಕೆ2).ಫಲಿತಾಂಶ: ಸಂಯುಕ್ತ ನಗರ ವಲಯಕ್ಕೆ ಇನಿಂಗ್ಸ್ ಹಾಗೂ 30 ರನ್ ಜಯ

ಅಧ್ಯಕ್ಷರ ಇಲೆವೆನ್: ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 401 ಹಾಗೂ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 46 ರನ್. ಧಾರವಾಡ ವಲಯ: 80.1 ಓವರ್‌ಗಳಲ್ಲಿ 255 (ಸಮರ್ಥ್ ಊಟಿ 59, ದರ್ಶನ್ ಪಾಟೀಲ್ 73; ಡೇವಿಡ್ ಮಥಾಯಸ್ 60ಕ್ಕೆ 4).ಫಲಿತಾಂಶ: ಡ್ರಾಬೆಂಗಳೂರು ನಗರ ಇಲೆವೆನ್: ಮೊದಲ ಇನಿಂಗ್ಸ್: 75.1 ಓವರ್‌ಗಳಲ್ಲಿ 281 ಹಾಗೂ 33.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 139 ರನ್ (ನಿರ್ಮಲ್ ಎಸ್. 47, ಸ್ಟಾಲೀನ್ ಹೂವರ್ ಔಟಾಗದೇ 47, ಸಂತೋಷ್ ಎಸ್. 21; ವಿಕ್ರಂ ವೆಂಕಟೇಶ್ 37ಕ್ಕೆ 2).ಶಿವಮೊಗ್ಗ ವಲಯ: 68.4 ಓವರ್‌ಗಳಲ್ಲಿ 197 (ಜೆ.ಕಾರ್ತಿಕೇಯ 62, ವಿಕ್ರಂ ವೆಂಕಟೇಶ್ 81, ಹೊಯ್ಸಳ 33; ಹರೀಶ್ ಕುಮಾರ್ ಆರ್. 55ಕ್ಕೆ 6,     ಸಂತೃಪ್ತ್ 46ಕ್ಕೆ 2). ಫಲಿತಾಂಶ: ಡ್ರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.