ಕ್ರಿಕೆಟ್: ಪಾಕ್ ತಂಡಕ್ಕೆ ಸುಲಭ ಗೆಲುವು

ಮಂಗಳವಾರ, ಮೇ 21, 2019
24 °C

ಕ್ರಿಕೆಟ್: ಪಾಕ್ ತಂಡಕ್ಕೆ ಸುಲಭ ಗೆಲುವು

Published:
Updated:

ಬಲಾವಯೊ: ಐಜಾಜ್ ಚೀಮಾ (24ಕ್ಕೆ4) ಹಾಗೂ ಮೊಹಮ್ಮದ್ ಹಫೀಜ್ (31ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ.ಕ್ವೀನ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಈ ಪಂದ್ಯದ ಐದನೇ ದಿನವಾದ ಸೋಮವಾರ ಜಿಂಬಾಬ್ವೆ ನೀಡಿದ 88 ರನ್‌ಗಳ ಗುರಿಯನ್ನು ಪಾಕಿಸ್ತಾನ 21.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು.ಜಿಂಬಾಬ್ವೆ ತನ್ನ ಎರಡನೇ ಇನಿಂಗ್ಸ್ ನಲ್ಲಿ 56.3 ಓವರ್‌ಗಳಲ್ಲಿ ಕೇವಲ 141 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ: ಮೊದಲ ಇನಿಂಗ್ಸ್: 150.4 ಓವರ್‌ಗಳಲ್ಲಿ 412 ಹಾಗೂ 56.3 ಓವರ್‌ಗಳಲ್ಲಿ 141 (ತಟೈಂಡ ಟೈಬು 58, ಕೈಲ್ ಜಾರ್ವಿಸ್ ಔಟಾಗದೆ 25; ಐಜಾಜ್ ಚೀಮಾ 24ಕ್ಕೆ4, ಮೊಹಮ್ಮದ್ ಹಫೀಜ್ 31ಕ್ಕೆ4); ಪಾಕಿಸ್ತಾನ: ಮೊದಲ ಇನಿಂಗ್ಸ್: 156.1 ಓವರ್‌ಗಳಲ್ಲಿ 466 ಹಾಗೂ 21.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 (ಮೊಹಮ್ಮದ್ ಹಫೀಜ್ 38, ಅಜರ್ ಅಲಿ 22): ಫಲಿತಾಂಶ: ಪಾಕಿಸ್ತಾನಕ್ಕೆ ಏಳು ವಿಕೆಟ್ ಗೆಲುವು ಹಾಗೂ 1-0ರಲ್ಲಿ ಸರಣಿ ಜಯ. ಪಂದ್ಯ ಶ್ರೇಷ್ಠ: ಮೊಹಮ್ಮದ್ ಹಫೀಜ್.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry