ಮಂಗಳವಾರ, ಮೇ 24, 2022
30 °C

ಕ್ರಿಕೆಟ್: ಮಿಂಚಿದ ಬಿನ್ನಿ, ಕರ್ನಾಟಕ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ಸ್ಟುವರ್ಟ್ ಬಿನ್ನಿ ಅವರ ಆಲ್‌ರೌಂಡ್ ಆಟದ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡದವರು ಭಾನುವಾರ ಇಲ್ಲಿ ಆರಂಭವಾದ ದಕ್ಷಿಣ ವಲಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ತಂಡವನ್ನು ಮಣಿಸಿ ಶುಭಾರಂಭ ಮಾಡಿದ್ದಾರೆ.

ಕರ್ನಾಟಕ ನೀಡಿದ 171 ರನ್‌ಗಳ ಗುರಿಗೆ ಉತ್ತರವಾಗಿ ಗೋವಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸುವಲ್ಲಿ ಮಾತ್ರ ಸಫಲವಾಯಿತು. ಮೊದಲು ಬ್ಯಾಟಿಂಗ್‌ನಲ್ಲಿ 49 ರನ್ ಗಳಿಸಿ ಅಬ್ಬರಿಸಿದ್ದ ಸ್ಟುವರ್ಟ್ ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದರು.

ಬ್ಯಾಟಿಂಗ್ ವೇಳೆ ಬಿನ್ನಿ ಹಾಗೂ ಮನೀಷ್ ಪಾಂಡೆ (49) ಮೂರನೇ ವಿಕೆಟ್‌ಗೆ ವೇಗವಾಗಿ 72 ರನ್ ಸೇರಿಸಿದರು. ಪರಿಣಾಮ ಕರ್ನಾಟಕ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 (ಗಣೇಶ್ ಸತೀಶ್ 38, ಮನೀಷ್ ಪಾಂಡೆ 49, ಸ್ಟುವರ್ಟ್ ಬಿನ್ನಿ 49; ಸೌರಭ್ ಬಂಡೇಕರ್ 42ಕ್ಕೆ4, ರಾಬಿನ್ ಡಿಸೋಜಾ 30ಕ್ಕೆ2); ಗೋವಾ: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 (ಸಗುಣ್ ಕಾಮತ್ 32, ಸೌರಭ್ ಬಂಡೇಕರ್ 24; ಸ್ಟುವರ್ಟ್ ಬಿನ್ನಿ 14ಕ್ಕೆ4, ರಾಜೂ ಭಟ್ಕಳ್ 22ಕ್ಕೆ2): ಫಲಿತಾಂಶ: ಕರ್ನಾಟಕ ತಂಡಕ್ಕೆ 40 ರನ್‌ಗಳ ಗೆಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.