ಭಾನುವಾರ, ಫೆಬ್ರವರಿ 28, 2021
29 °C
ರಾಯಚೂರು

ಕ್ರೀಡಾಂಗಣ ಕುಸಿತಕ್ಕೆ ಕ್ಷಣಗಣನೆ

ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ಕ್ರೀಡಾಂಗಣ ಕುಸಿತಕ್ಕೆ ಕ್ಷಣಗಣನೆ

ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲೂ ಒಂದು ಕ್ರೀಡಾಂಗಣವಿದೆ.  ಇದು ಹೆಸರಿಗಷ್ಟೇ ಕ್ರೀಡಾಂಗಣ!2013ರ ಮಾರ್ಚ್ ತಿಂಗಳಲ್ಲಿ ‘ಪ್ರಜಾವಾಣಿ’ ಕ್ರೀಡಾ ಪುರವಣಿಯಲ್ಲಿ ಈ ಕ್ರೀಡಾಂಗಣದ ಹದಗೆಟ್ಟ ಸ್ಥಿತಿಯ ಬಗ್ಗೆ ವರದಿ ಪ್ರಕಟಗೊಂಡಿತ್ತು. ಆಗ ಸಂಬಂಧ ಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತದವರು ಸರಸರನೆ ಕ್ರೀಡಾಂಗಣದಲ್ಲೆಲ್ಲಾ ಓಡಾಡಿದ್ದರು.  ಸಭೆ ನಡೆಸಿ ದ್ದರು. ಕ್ರೀಡಾಂಗಣ ಅಭಿವೃದ್ಧಿಗೆ ₨ 22 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಯುವಜನ ಸಬಲೀಕರಣ ಇಲಾಖೆ ಅಧಿಕಾರಿಗಳೂ ಹೇಳಿದ್ದರು.ಒಂದು ವರ್ಷ ಉರುಳಿದೆ. ಕ್ರೀಡಾಂಗಣ ಸ್ಥಿತಿ ಹೇಗಿತ್ತೋ ಹಾಗೆಯೇ ಇದೆ ! ಸಂಪೂರ್ಣ ಹಾಳಾ ಗಿರುವ ಓಟದ ಟ್ರ್ಯಾಕ್, ಮಳೆ ಬಂದರೆ ಕೆರೆಯಂತಾ ಗುವ ಅರ್ಧ ಕ್ರೀಡಾಂಗಣ, ಯಾವುದೇ ಕ್ಷಣದಲ್ಲಾ ದರೂ ಕುಸಿಯಬಹುದು ಎಂಬಂತಿರುವ ಪ್ರೇಕ್ಷಕರ ಗ್ಯಾಲರಿ ಈ ಕ್ರೀಡಾಂಗಣದ ಹದಗೆಟ್ಟ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.ಶಿಥಿಲಾವಸ್ಥೆಯಲ್ಲಿರುವ ಗ್ಯಾಲರಿಯೂ ಬಿದ್ದು ಹೋಗಿ  ಅಪಾಯ ಸಂಭವಿಸಬಹುದು ಎಂಬ ಆತಂಕ ಜಿಲ್ಲಾಡಳಿತಕ್ಕೆ ಕಾಡಿತ್ತು. ಹೀಗಾಗಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯ ಮೈದಾನಕ್ಕೆ ಸ್ಥಳಾಂತರಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿತ್ತು.ಇಷ್ಟೆಲ್ಲ ಆದರೂ ಕ್ರೀಡಾಂಗಣಕ್ಕೆ ಅಭಿವೃದ್ಧಿ ಭಾಗ್ಯ ಬಂದಿಲ್ಲ!  ಗ್ಯಾಲರಿಯನ್ನು ನೆಲಸಮಗೊಳಿಸಲು    ಜಿಲ್ಲಾಧಿಕಾರಿಗಳು ಈಚೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕಣಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.ಆದರೆ ಈವರೆಗೂ ಆ ಇಲಾಖೆಯಿಂದ ಅಂಥ ಯಾವುದೇ ಕಾಮಗಾರಿ ಆರಂಭವಾಗಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.