`ಹಕ್ಕಿ. ಅದು ಜೀವಜಗದ ಪರಮ ಸೋಜಿಗದ ಒಂದು ಸೃಷ್ಟಿ. ಉರಗಗಳಿಂದ ವಿಕಸಿಸಿ (ಚಿತ್ರ-1) ಅವತರಿಸಿದಾಗಿನಿಂದ ಈವರೆಗೆ ಹಕ್ಕಿಗಳದು ಭಾರೀ ವೈವಿಧ್ಯ ರೆಕ್ಕೆ-ಪುಕ್ಕಗಳನ್ನು ಧರಿಸಿ, ವರ್ಣವೈಭವ ಮೆರೆಸಿ, ಗಾನಸುಧೆ ಹರಿಸಿ ನಿಸರ್ಗವನ್ನು ಅಲಂಕರಿಸಿರುವ ಖಗ ವರ್ಗದಲ್ಲಿ ಸಮೀಪ ಹತ್ತುಸಾವಿರ ಪ್ರಭೇದಗಳಿವೆ.

ಹಾಗಿದ್ದರೂ ಹಕ್ಕಿಗಳದೆಲ್ಲ ಸರಿಸುಮಾರು ಸಾಧಾರಣ ಗಾತ್ರ; ಪುಟ್ಟ ಗಾತ್ರದ ಪ್ರಭೇದಗಳೇ ಹೇರಳ. ಆದರೂ ವಿರಳ ಸಂಖ್ಯೆಯಲ್ಲೇ ಆದರೂ ದೊಡ್ಡಗಾತ್ರದ ಹಕ್ಕಿಗಳೂ ಅಸ್ತಿತ್ವದಲ್ಲಿವೆ; ಅಂಥ ಕೆಲವು ಪ್ರಭೇದಗಳಾದರೂ ಎಲ್ಲೆಡೆ-ಕಾಣಸಿಗುತ್ತವೆ (ಚಿತ್ರ-11).

ಜೊತೆ ಜೊತೆಗೇ ವಿಚಿತ್ರ ರೂಪಗಳ, ಬೃಹದ್ಗಾತ್ರಗಳ, ದೈತ್ಯ ಖಗಗಳೂ ಕೆಲವಾರಿವೆ. ಖಗವರ್ಗದ ಇಂದಿನ ಮತ್ತು ಹಿಂದಿನ ಪರಮ ದೈತ್ಯರ ಸಂಕ್ಷಿಪ್ತ ಪರಿಚಯ:

* ಡೈನೋಸಾರ್ಗಳ ಸರ್ವನಾಶದ ವೇಳೆಗೆ, ಎಂದರೆ ಈಗ್ಗೆ ಸುಮಾರು ಅರವತ್ತೈದು ದಶಲಕ್ಷ ವರ್ಷ ಹಿಂದಿನ ವೇಳೆಗೆ, ಆಗಿನ ಉತ್ತರ ಅಮೆರಿಕ ಖಂಡದಲ್ಲಿ ರಕ್ಕಸ ಹಕ್ಕಿಯೊಂದಿತ್ತು. (ಚಿತ್ರ-2). `ಡಯಟ್ರೀಮಾ~ ಎಂಬ ಆ ಹಕ್ಕಿಗೆ ಹಾರುವ ಶಕ್ತಿ ಇರಲಿಲ್ಲ. ಆದರೆ ಆರಡಿ ಮೀರುವ ಎತ್ತರದ ಸದೃಢ ಶರೀರದ, ಉಕ್ಕಿನಂಥ ಕಾಲುಗಳ, ಭಯಂಕರ ಕೊಕ್ಕಿನ ಆ ಹಕ್ಕಿಗೆ ಆ ಕಾಲದ ಯಾವುದೇ ನೆಲವಾಸಿ ಪ್ರಾಣಿಯನ್ನು ಹಿಡಿದು ಛಿದ್ರಗೊಳಿಸಿ ನುಂಗಿಹಾಕುವ ಅಸಾಮಾನ್ಯ ಸಾಮರ್ಥ್ಯ ಇತ್ತು.

* ಈಗ್ಗೆ ಸುಮಾರು ಹದಿನೈದು ದಶಲಕ್ಷ ವರ್ಷ ಹಿಂದಿನಿಂದ ಎರಡು ದಶಲಕ್ಷ ವರ್ಷ ಹಿಂದಿನವರೆಗಿನ ಅವಧಿಯಲ್ಲಿ ದಕ್ಷಿಣ ಅಮೆರಿಕ ಖಂಡದಲ್ಲಿ ಭೀಕರ ಭಾರೀ ಹಕ್ಕಿಯೊಂದಿತ್ತು. ಅದರ ಗಾತ್ರ-ರೂಪ-ಸ್ವಭಾವಗಳಿಗೆ ಅನ್ವರ್ಥವಾಗುವ `ಟೆರರ್ ಬರ್ಡ್~ ಎಂಬ ಹೆಸರಿನ ಆ ಹಕ್ಕಿ (ಚಿತ್ರ-3) ಏಳಡಿ ಎತ್ತರದ, ಇನ್ನೂರು ಕಿಲೋ ತೂಕದ ಶರೀರ ಹೊಂದಿತ್ತು. ಮನುಷ್ಯರಿಗೆ ಹೋಲಿಸಿದಂತೆ ಅದರ ಗಾತ್ರವನ್ನು ಚಿತ್ರ-3 ರಲ್ಲೇ ಗಮನಿಸಿ. ಕುದುರೆ ಗಾತ್ರದ ತಲೆ, ಕೊಕ್ಕೆಯಂತೆ ಬಾಗಿದ ಕೊಕ್ಕು ಪಡೆದಿದ್ದ ಆ ದೈತ್ಯ ಸಹಜವಾಗಿಯೇ `ಹಾರದ ಹಕ್ಕಿ~ ಆಗಿತ್ತು.

* ಈಗ್ಗೆ ಎಂಟು ದಶಲಕ್ಷ ವರ್ಷ ಹಿಂದೆ ಮತ್ತೊಂದು ಖಗ ದೈತ್ಯ ಆಸ್ಟ್ರೇಲಿಯದಲ್ಲಿತ್ತು. `ನೆಲವನ್ನೇ ನಡುಗಿಸುತ್ತ~ ನಡೆದಾಡುತ್ತಿದ್ದ ಆ ಹಕ್ಕಿಯ ಹೆಸರು `ಥಂಟರ್ ಬರ್ಡ್~ ಹತ್ತಡಿ ಎತ್ತರ ಐದುನೂರು ಕಿಲೋ ತೂಕದ ಈ ಹಕ್ಕಿಯದೇ `ಗರಿಷ್ಠ ತೂಕದ~ ವಿಶ್ವದಾಖಲೆ.

* ಈಗ್ಗೆ ಏಳುನೂರು ವರ್ಷ ಹಿಂದಿನವರೆಗೂ ನ್ಯೂಜಿಲೆಂಡ್ನಲ್ಲಿದ್ದ `ಮೋವಾ~ (ಚಿತ್ರ-6) ಪ್ರಪ್ರಥಮ ಮಾನವ ಸಮಕಾಲೀನ ದೈತ್ಯ ಹಕ್ಕಿ; ಮನುಷ್ಯರಿಂದಲೇ ನಿರ್ನಾಮಗೊಂಡ ಪ್ರಥಮ ದೈತ್ಯ ಹಕ್ಕಿಯೂ ಇದೇ.

ವಿಧ ವಿಧ ಹನ್ನೊಂದು ಪ್ರಭೇದಗಳಿದ್ದ ಮೋವಾಗಳಲ್ಲಿ ಅತ್ಯಂತ ದೈತ್ಯ ಪ್ರಭೇದ ಇನ್ನೂರೈವತ್ತು ಕಿಲೋ ತೂಕ ಇದ್ದು ಹನ್ನೆರಡು ಅಡಿ ಎತ್ತರ ಇತ್ತು. ಅತ್ಯಂತ ಎತ್ತರದ ಹಕ್ಕಿ ಎಂಬ ಸಾರ್ವಕಾಲಿಕ ವಿಶ್ವದಾಖಲೆಯ ಈ ಹಕ್ಕಿ ಸಂಪೂರ್ಣ ಸಸ್ಯಾಹಾರಿಯಾಗಿತ್ತು. ನ್ಯೂಜಿಲ್ಯಾಂಡ್ಗೆ ಮಾನವರು ಪದವಿರಿಸಿದ ಕೇವಲ ನೂರು ವರ್ಷಗಳಲ್ಲಿ ಅವರಿಗೇ ಆಹಾರವಾಗಿ ಅಳಿದುಹೋಯಿತು.

* ಪ್ರಸ್ತುತ ಧರೆಯಲ್ಲಿರುವ ಅತ್ಯಂತ ದೈತ್ಯ ಹಕ್ಕಿ `ಆಸ್ಟ್ರಿಚ್~ (ಚಿತ್ರ 4, 9). ಆಫ್ರಿಕ ಖಂಡದಲ್ಲಿ ನೈಸರ್ಗಿಕವಾಗಿ ನೆಲಸಿರುವ ಆಸ್ಟ್ರಿಚ್ನದು ಎಂಟಡಿ ಎತ್ತರ, 160 ಕಿಲೋ ತೂಕ. ಆರಂಗುಲ ಉದ್ದದ, ಒಂದೂವರೆ ಕಿಲೋ ಮೀರುವ ತೂಕದ ಆಸ್ಟ್ರಿಚ್ ಮೊಟ್ಟೆಯದೂ ದೈತ್ಯ ಗಾತ್ರದಲ್ಲಿ ವಿಶ್ವದಾಖಲೆ (ಆಸ್ಟ್ರಿಚ್ನ ಪ್ರತಿ ಮೊಟ್ಟೆಯ ಗಾತ್ರ ಹನ್ನೆರಡು ಕೋಳಿ ಮೊಟ್ಟೆಗಳ ಒಟ್ಟು ಗಾತ್ರಕ್ಕೆ ಸಮ!) ತಾಸಿಗೆ ಎಪ್ಪತ್ತು ಕಿಲೋಮೀಟರ್ ವೇಗದಲ್ಲಿ ಓಡಬಲ್ಲ ಆಸ್ಟ್ರಿಚ್ನದು `ಗರಿಷ್ಠ ವೇಗದ ದ್ವಿಪಾದಿ ಪ್ರಾಣಿ~ ಎಂಬ ವಿಶ್ವದಾಖಲೆ ಕೂಡ ಆಸ್ಟ್ರಿಚ್ನ ಒಂದೇ `ಒದೆ~ಗೆ ಸಿಂಹವೂ ಸತ್ತುಬೀಳುತ್ತದೆ!

* ಆಸ್ಟ್ರಿಚ್ಗೆ ಅತ್ಯಂತ ಹತ್ತಿರದ ದ್ವಿವಿಧ ದೈತ್ಯ ಸಂಬಂಧಿಗಳಿವೆ: ದಕ್ಷಿಣ ಅಮೆರಿಕ ಖಂಡದಲ್ಲಿರುವ `ರಿಯಾ~ ಮತ್ತು ಆಸ್ಟ್ರೇಲಿಯದ ರಾಷ್ಟ್ರೀಯ ಪಕ್ಷಿಯಾಗಿರುವ `ಎಮು~ (ಚಿತ್ರ-8) ರಿಯಾಗಳದು ಐದು ಅಡಿ ಎತ್ತರ, ಇಪ್ಪತ್ತೈದು ಕಿಲೋ ತೂಕ. ಒಮ್ಮೆಗೆ ಎಂಬತ್ತು ಮೊಟ್ಟೆಗಳನ್ನಿಡುವ ಅನನ್ಯ ಖಗ ದಾಖಲೆ. ಎಮು ಬಹುಮಟ್ಟಿಗೆ ಆಸ್ಟ್ರಿಚ್ ಅನ್ನೇ ಹೋಲುತ್ತದೆ. ನಲವತ್ತೈದು ಕಿಲೋ ತೂಕ ತಲುಪುವ ಈ ಹಕ್ಕಿ ಆಸ್ಟ್ರೇಲಿಯದ ಈಶಾನ್ಯದಲ್ಲಿ ಮತ್ತು ನ್ಯೂಗಿನಿಯಲ್ಲಿ ನೆಲೆಸಿದೆ.

* ಆಸ್ಟ್ರೇಲಿಯದ ಕ್ವೀನ್ಸ್ಲ್ಯಾಂಡ್ನಲ್ಲಿ ಮತ್ತು ನ್ಯೂಗಿನಿಯಲ್ಲಿ ವೃಷ್ಟಿವನಗಳಲ್ಲಷ್ಟೇ ವಾಸಿಸುತ್ತಿರುವ ಮತ್ತೊಂದು ದೈತ್ಯ ಹಕ್ಕಿ `ಕ್ಯಾಸೋವರೀ~ (ಚಿತ್ರ 7, 10) ಐದೂವರೆ ಅಡಿ ಎತ್ತರ, ಅರವತ್ತು ಕಿಲೋ ತೂಕ ಇರುವ ಈ ಬಲಿಷ್ಠ ಹಕ್ಕಿಯ ಗಟ್ಟಿ `ಹೆಲ್ಮೆಟ್~ ಅದರ ವಿಶಿಷ್ಟ ಲಕ್ಷಣ. ತಾಸಿಗೆ ಅರವತ್ತು ಕಿ.ಮೀ. ವೇಗದಲ್ಲಿ ಓಡಬಲ್ಲ, ಒಂದೇ ಒದೆಗೆ ಶತ್ರುವಿನ ದೇಹವನ್ನು ಸೀಳಬಲ್ಲ ಕ್ಯಾಸೋವರಿ ಸಂಪೂರ್ಣ ಫಲಾಹಾರಿ. ವಿಧ ವಿಧ ಹಣ್ಣುಗಳಷ್ಟೇ ಅದರ ಆಹಾರ.

* ಹಾರುವ ಹಕ್ಕಿಗಳಲ್ಲೆಲ್ಲ ಅತ್ಯಧಿಕ ತೂಕದ ದೈತ್ಯ ಆಫ್ರಿಕ ಯೂರೋಪ್ ಮತ್ತು ಏಷಿಯ ಖಂಡಗಳಲ್ಲಿರುವ `ಬಸ್ಟರ್ಡ್~. ಈ ಹಕ್ಕಿ ಸಮೀಪ ಹತ್ತೊಂಬತ್ತು ಕಿಲೋ ತೂಕ ತಲುಪುತ್ತದೆ. ಅತ್ಯಧಿಕ ರೆಕ್ಕೆ ವಿಸ್ತಾರದ `ಆಲ್ಬಟ್ರಾಸ್~ (ಚಿತ್ರ-5) ರೆಕ್ಕೆ ತೆರೆದಾಗ ಭಾರೀ ಗಾತ್ರ ತೋರುತ್ತದೆ; ಅದರ ರೆಕ್ಕೆ ವಿಸ್ತಾರ ಹನ್ನೆರಡು ಅಡಿ! ಎಂತೆಂತಹ ದೈತ್ಯರು! ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.