ಬೆಂಗಳೂರು: ಯಲಹಂಕ ಸಮೀಪದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಾರ್ಚ್ 30ರಿಂದ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಾರ್ವತಿ (23) ಎಂಬುವರು ಕಾಣೆಯಾಗಿದ್ದು, ಈ ಸಂಬಂಧ ಯುವತಿಯ ತಂದೆ ಸದಾಶಿವ ಅವರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ಯುವತಿಯ ಪತ್ತೆ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದರು.

ಈ ಮೊದಲು ದೇವನಹಳ್ಳಿಯಲ್ಲಿರುವ `ಸ್ವಯಂಕೃಷಿ~ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ, ಮೂರು ತಿಂಗಳ ಹಿಂದೆ ಅಲ್ಲಿನ ಕೆಲಸ ಬಿಟ್ಟು ಬೇರೆ ಕಂಪೆನಿಗೆ ಸೇರಿದ್ದರು ಎಂದು ಪೊಲೀಸರು ಹೇಳಿದರು.
`ಮಾರ್ಚ್ 30ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದ ನನ್ನ ಮಗಳು, ಈವರೆಗೂ ಮನೆಗೆ ಹಿಂತಿರುಗಿಲ್ಲ.

ಈ ಬಗ್ಗೆ ನಮ್ಮ ಸಂಬಂಧಿಕರ ಮನೆ ಸೇರಿದಂತೆ ಗೊತ್ತಿರುವ ಕಡೆಯೆಲ್ಲಾ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಮಾರ್ಚ್ 31ರಂದು `ಸ್ವಯಂಕೃಷಿ~ ಸಂಸ್ಥೆಯ ಸಂಸ್ಥಾಪಕ ವೀರೇಂದ್ರ ಬಾಬು ಅವರ ಪತ್ನಿ ಚಂದ್ರಿಕಾ ಅವರು ನನಗೆ ಕರೆ ಮಾಡಿ, ನಿಮ್ಮ ಮಗಳು ಮತ್ತು ನನ್ನ ಗಂಡ ಇಬ್ಬರೂ ಹೈದರಾಬಾದ್ನಲ್ಲಿದ್ದಾರೆ.

ನಿಮ್ಮ ಮಗಳು ನನ್ನ ಗಂಡನನ್ನು ಬಿಡದೇ ಹೋದರೆ ನಾನು ನಿಮ್ಮ ಮನೆ ಮುಂದೆ ಗಲಾಟೆ ಮಾಡುತ್ತೇನೆ~ ಎಂದು ಹೇಳಿದರು ಎಂದು ಸದಾಶಿವ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.