ಥಾಯ್ಲೆಂಡ್ (ಪಿಟಿಐ): ಎರಡು ವರ್ಷಗಳ ನಂತರ ಭಾರತದ ಗಾಲ್ಫರ್ ಒಬ್ಬರು ಬ್ರಿಟಿಷ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಈ ಸಾಧನೆ ಮಾಡಿದ್ದು ಬೆಂಗಳೂರಿನ ಯುವ ಗಾಲ್ಫರ್ ಅನಿರ್ಬಾನ್ ಲಾಹಿರಿ.

ಶುಕ್ರವಾರ ನಡೆದ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಲಾಹಿರಿ ನಿಖರ ಕ್ಲಬ್ಗಳನ್ನು ಬೀಸಿ 67 ಪಾಯಿಂಟ್ಗಳೊಂದಿಗೆ ಜಂಟಿ ಅಗ್ರಸ್ಥಾನ ಪಡೆದರು. ಇದು 36 ಹೋಲ್ಗಳ ಸ್ಪರ್ಧೆಯಾಗಿತ್ತು. ಇದರಿಂದ ಬ್ರಿಟಿಷ್ ಗಾಲ್ಫ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕರ್ನಾಟಕದ ಗಾಲ್ಫರ್ದಾಯಿತು.

ಈ ಟೂರ್ನಿ ಜುಲೈ 19ರಿಂದ 22ರ ವರೆಗೆ ಸೇಂಟ್ ಅನ್ನಾಸ್ನಲ್ಲಿ ನಡೆಯಲಿದೆ. 2009ರಲ್ಲಿ ಭಾರತದ ಗಗನಜೀತ್ ಭುಲ್ಲಾರ್ ಅರ್ಹತೆ ಪಡೆದಿದ್ದರು. ಇದಾದ ನಂತರ ಭಾರತದ ಸ್ಪರ್ಧಿಯೊಬ್ಬರು ಇದಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

2012ರಲ್ಲಿ ಎಸ್ಎಐಎಲ್ ಎಸ್ಬಿಐ ಟೂರ್ನಿಯಲ್ಲಿ ಲಾಹಿರಿ ಚಾಂಪಿಯನ್ ಆಗಿದ್ದರು. 2009ರಲ್ಲಿ ಹರಿಯಾಣ ಓಪನ್ ಟೂರ್ನಿಯಲ್ಲೂ ಪ್ರಶಸ್ತಿ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.