ಗುಜರಾತ್‌ನಲ್ಲಿ ಬಿಜೆಪಿ ಜಯಭೇರಿ: ವಿಜಯೋತ್ಸವ

7

ಗುಜರಾತ್‌ನಲ್ಲಿ ಬಿಜೆಪಿ ಜಯಭೇರಿ: ವಿಜಯೋತ್ಸವ

Published:
Updated:

ಯಾದಗಿರಿ: ಗುಜರಾತ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ನಗರದ ಸ್ಟೇಶನ್ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ, ಬಿಜೆಪಿ ಪಕ್ಷದ ತತ್ವ, ಸಿದ್ಧಾಂತ, ಜನಪರ ಯೋಜನೆಗಳಿಂದಾಗಿ ಗುಜರಾತ್‌ನಲ್ಲಿ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದರು.ಜಿಲ್ಲೆಯಾದ್ಯಂತ ಬಿಜೆಪಿ ಪಕ್ಷವನ್ನು ಚುರುಕಿನಿಂದ ಸಂಘಟಿಸುವ ಮೂಲಕ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವಿಂದ್ರನಾಥ ನಾದ್, ಮಹೇಂದ್ರಗೌಡ ಅಳ್ಳಳ್ಳಿ, ವೆಂಕಟರಡ್ಡಿಅಬ್ಬೆತುಮಕೂರ, ಭೋಜಪ್ಪ ಮಗ್ಗ, ಸಾಯಿಬಣ್ಣ ಬಸವಂತಪೂರ, ಕಾಂತಿಲಾಲ ಶರ್ಮಾ, ನಾಗಪ್ಪ ಗಚ್ಚಿನಮನಿ, ಶರಣು ಆಶನಾಳ, ನಾಗರಾಜ ಈಟೆ, ನಾಗರಾಜ ಮಾನಸಗಲ್, ರಮೇಶ ಕೋಟಿಮನಿ, ರಿಯಾಜ್, ಡಾ. ಶಫಿ, ಸ್ವಾಮಿನಾಥ ಪುಲ್ಸೆ, ವೆಂಕಟೇಶ ನಾಗುಂಡಿ, ಮಂಜು ಜಡಿ, ಸೋಹನ್ ಪ್ರಸಾದ, ಬಲವಂತ, ದಶರಥಸಿಂಗ ಠಾಕೂರ, ರಘು ಚವ್ಹಾಣ, ಮುಂತಾದವರು ಹಾಜರಿದ್ದರು.ಬಿಜೆಪಿ ಹರ್ಷ: ನರೇಂದ್ರ ಮೋದಿ ನಾಯಕತ್ವದಲ್ಲಿ ಗುಜರಾತ ಚುನಾವಣೆಯಲ್ಲಿ ಬಿಜೆಪಿ ಭಾರಿ ಜಯ ಪಡೆದಿರುವಕ್ಕೆ ಬಿಜೆಪಿ ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ.ಸತತ ಮೂರನೇ ಬಾರಿ ಮುಖ್ಯಮಂತ್ರಿ ಆಗಲಿರುವ ನರೇಂದ್ರಮೋದಿ ನಾಯಕತ್ವ ಇಂದು ರಾಷ್ಟ್ರಕ್ಕೆ ಅವಶ್ಯವಾಗಿದ್ದು, ಭವಿಷ್ಯದ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಲಿ. ಗುಜರಾತ ಅಭಿವೃದ್ಧಿಯಲ್ಲಿ ಮೋದಿಯವರ ಪರಿಶ್ರಮಕ್ಕೆ ಗುಜರಾತ ಜನತೆ ಅಭೂತಪೂರ್ವ ಬೆಂಬಲ ನೀಡಿರುವುದು ಅಭಿನಂದನಾರ್ಹ. ಗುರುಮಠಕಲ್, ಶಹಾಪುರ, ಸುರಪುರ ಮತ್ತು ಯಾದಗಿರಿ ನಗರದಲ್ಲಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ವಿಜಯೋತ್ಸವ ಆಚರಿಸಿದ್ದು, ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮನೋಬಲ ಇಮ್ಮಡಿಗೊಂಡಿದೆ ಎಂದು ತಿಳಿಸಿದೆ.ಯಾದಗಿರಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ, ಬರಲಿರುವ ಚುನಾವಣೆಗಳನ್ನು ಎದುರಿಸುವಲ್ಲಿ ಗುಜರಾತ್ ಗೆಲುವು ಕಾರ್ಯಕರ್ತರಿಗೆ ಹೊಸ ಹುರುಪು ತಂದಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ, ತೊಗರಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ಗಡ್ಡಿಮನಿ, ಗುರು ಪಾಟೀಲ ಶಿರವಾಳ, ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವಿಂದ್ರನಾಥ ನಾದ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಸಂಘಟನಾ ಪ್ರಧಾನ ಕಾರ್ಯದರ್ಶಿ ನೀಲಕಂಠರಾಯ ಯಲ್ಹೇರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry