ಗುತ್ತಿಗೆದಾರರಿಂದ ಅಧಿಕಾರಿ ಹತ್ಯೆ

7

ಗುತ್ತಿಗೆದಾರರಿಂದ ಅಧಿಕಾರಿ ಹತ್ಯೆ

Published:
Updated:

ಬಾಂಡ/ ಲಖನೌ (ಪಿಟಿಐ): ಗುತ್ತಿಗೆದಾರರಿಬ್ಬರು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಅವರ ನಿವಾಸದಲ್ಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಾಂಡ ನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಜಿ.ಪಂ ಹೆಚ್ಚುವರಿ ಸಿಇಒ ಆಗಿದ್ದ ಆನಂದ್ ಸಿಂಗ್ ಚೌಹಾಣ್ ಕೊಲೆಯಾದವರು. ಭೇಟಿಯಾಗಬೇಕು ಎಂದು ಮನೆಗೆ ಬಂದ ಗುತ್ತಿಗೆದಾರರು ನಂತರ ಅವರತ್ತ ಗುಂಡು ಹಾರಿಸಿದರು. ಈ ವೇಳೆ ಚೌಹಾಣರ ಚಾಲಕ ಹಾಗೂ ಮತ್ತೊಬ್ಬರು ಮನೆಯ ಅಡುಗೆ ಕೋಣೆಯಲ್ಲಿದ್ದರು ಎಂದು ಗೃಹ ಇಲಾಖೆ ತಿಳಿಸಿದೆ.ಚಾಲಕ ಮೊಹಮ್ಮದ್ ಹನೀಫ್ ನೀಡಿದ ದೂರಿನ ಮೇರೆಗೆ ಇಬ್ಬರು ಗುತ್ತಿಗೆದಾರರ ವಿರುದ್ದ ಎಫ್‌ಐಆರ್ (ಪ್ರಥಮ ವರ್ತಮಾನ ವರದಿ) ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry