ಭಾನುವಾರ, ಮೇ 9, 2021
18 °C

`ಗುಬ್ಬಿಯೇ ಮರಳಿ ಬಾ ಗೂಡಿಗೆ' ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಯಾರ ಮನೆಯಲ್ಲಿ ಗುಬ್ಬಿಗಳು ಇರುತ್ತವೆಯೋ, ಆ ಮನೆ ಮತ್ತು ಸುತ್ತಲಿನ ವಾತಾವರಣ ಶುದ್ಧವಿದೆ ಎಂದು ಅರ್ಥ' ಎಂದು ಪಕ್ಷಿತಜ್ಞ ಆರ್.ಜಿ ತಿಮ್ಮೋಪುರ ತಿಳಿಸಿದರು.ಗ್ರೀನ್ ಆರ್ಮಿ ನಡೆಸುತ್ತಿರುವ ಪರಿಸರ ಸಪ್ತಾಹದ ಅಂಗವಾಗಿ `ಗುಬ್ಬಿಯೇ ಮರಳಿ ಬಾ ಗೂಡಿಗೆ' ಯೋಜನೆಯ ಅಂಗವಾಗಿ ಮಂಗಳವಾರ ಮಕ್ಕಳಿಗೆ ಗುಬ್ಬಿ ಗೂಡುಗಳನ್ನು ವಿತರಿಸಿ ಮಾತನಾಡಿದ ಅವರು, `ಅಷ್ಟೇ ಅಲ್ಲದೇ, ಗುಬ್ಬಿಗಳು ಇಂದಿನ ದಿನಗಳಲ್ಲಿ ಉಪಯೋಗಿಸುವ ಅಹಾರ ಪದ್ಧತಿಯಿಂದ, ಸಿರಿಧಾನ್ಯಗಳ ಕೊರತೆಯಿಂದ, ರಾಸಾಯನಿಕ ಮಿಶ್ರಿತ ನೀರಿನಿಂದ, ಮೊಬೈಲ್ ತರಂಗಗಳಿಂದ ಸಾಮಾನ್ಯ ಗುಬ್ಬಿ ಸಂಕುಲವು ನಶಿಸಿ ಹೋಗಿದೆ. ಅಳಿದುಳಿದ ಕೆಲವೇ ಗುಬ್ಬಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.ಡಾ.ಧೀರಜ ವೀರನಗೌಡರ, ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ, ಓಂ ಶಾಲೆಯ ಸಂಸ್ಥಾಪಕ ಬಸವರಾಜ ಯಗಟಿಮಠ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ರೂಪಾಲಿ ಅವರಗೇರಿಮಠ ವಹಿಸಿದ್ದರು. ಶಾಲಾ ಶಿಕ್ಷಕ ಫಕ್ಕೀರಪ್ಪ ಸೋಮಣ್ಣವರ ಪರಿಸರದ ಸದ್ಯದ ಸ್ಥಿತಿಗತಿಯ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.