ಗುಬ್ಬಿ: ಪಟ್ಟಣದ ಗೋಸಲ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಶನಿವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು. 18ಕೋಮಿನ ಮುಖಂಡರು ರಥೋತ್ಸವ ಮುನ್ನ ಉಪ್ಪರಿಗೆಯಲ್ಲಿ ದೇವರನ್ನು ತೂಗಿ, ಪೂಜಿಸಿ ನಂತರ ವಿಧಿವಿಧಾನಗಳೊಂದಿಗೆ ರಥಕ್ಕೆ ಕೂರಿಸಿದ ನಂತರ ರಥ ಎಳೆಯಲಾಯಿತು.

ರಥ ಎಳೆಯುತ್ತಿದ್ದಂತೆ ನೆರೆದಿದ್ದ ನವ ವಧು-ವರರು, ಜನಸ್ತೋಮ ರಥದ ಕಳಸಕ್ಕೆ ಬಾಳೆಹಣ್ಣು, ದವನ ತೂರಿದರು. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಬಳಿಕ ನೆರೆದಿದ್ದ ಭಕ್ತರಿಗೆ ಪಾನಕ, ಫಲಾಹಾರ ವ್ಯವಸ್ಥೆಯನ್ನು ವಿವಿಧ ಕೋಮುಗಳ ಮುಖಂಡರು, ಆಟೊ ಚಾಲಕರ ಸಂಘದವರು ಸ್ವಇಚ್ಚೆಯಿಂದ ಭಕ್ತರಿಗೆ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.