ಗುರುವಾರ , ಆಗಸ್ಟ್ 6, 2020
27 °C

ಗುರುಪೂರ್ಣಿಮೆ: ವಿಶೇಷ ಪೂಜೆ, ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಪೂರ್ಣಿಮೆ: ವಿಶೇಷ ಪೂಜೆ, ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ

ಬೆಂಗಳೂರು: ನಗರದಲ್ಲಿ ಮಂಗಳವಾರ ಗುರುಪೂರ್ಣಿಮೆ ಪ್ರಯುಕ್ತ ಹಿಂದೂ, ಬೌದ್ದ ಮತ್ತು ಜೈನ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಗುರುರೂಪದಲ್ಲಿ ಜನರಿಗೆ ಮಾರ್ಗದರ್ಶನ ನೀಡಿದ ಗುರು ರಾಘವೇಂದ್ರಸ್ವಾಮಿ, ಶಿರಡಿ ಸಾಯಿಬಾಬಾ, ಬುದ್ದ ಹಾಗೂ ಮಹಾವೀರ ಮಂದಿರಗಳಲ್ಲಿ ಅಭಿಷೇಕ,  ಹೋಮ-ಹವನ ಹಾಗೂ ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ ಜರುಗಿತು.ಭಕ್ತಾದಿಗಳು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾದರು. ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಗುರುದೇವತಾ ಪೂಜೆ ಮತ್ತು ವ್ಯಾಸ ಮಂತ್ರಾಕ್ಷತೆಯ ಕಾರ್ಯಕ್ರಮ ನಡೆಯಿತು. ಯಶವಂತಪುರ ವೃತ್ತದಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ ಮಹಾಯಾಗ ಮತ್ತು ದೇವಿಗೆ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಸಂಸ್ಥಾಪನಾಚಾರ್ಯರಾದ ಚಿದಂಬರ ದೀಕ್ಷಿತ ಸ್ವಾಮೀಜಿ ಅವರಿಗೆ ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಯಿತು.ಸೌತ್ ಎಂಡ್ ವೃತ್ತದಲ್ಲಿರುವ ಭಗವಾನ್ ಶ್ರೀ 1008 ಆದಿನಾಥ ಜಿನಮಂದಿರದಲ್ಲಿ ಚಾತುರ್ಮಾಸ ಸಮಾರಂಭ ನಡೆಯಿತು. ಬೌದ್ದ ಬಿಕ್ಕುಗಳು ಗಾಂಧಿ ನಗರದಲ್ಲಿರುವ `ಮಹಾಬೋಧಿ~ ಬೌದ್ದ ವಿಹಾರದಲ್ಲಿ ಬುದ್ದನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.`ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ~ ಎಂಬ ದಾಸರ ವಾಣಿಯಂತೆ ನೃತ್ಯಪಟು ವೈಜಯಂತಿ ಕಾಶಿ ಅವರ ಶಿಷ್ಯ ಗುರುರಾಜ ಅವರು ನಾಟ್ಯ ಕಲಿಸಿದ ಗುರುವಿಗೆ ನಮನ ಸಲ್ಲಿಸಲು ಕೆಂಗೇರಿಯಲ್ಲಿರುವ ಶಂಕರಮಠದಲ್ಲಿ `ಗುರುಭ್ಯೋ ನಮಃ~ ಭರತನಾಟ್ಯ ಪ್ರದರ್ಶಿಸಿದರು.ಪತಂಜಲಿ ಯೋಗಾಶ್ರಮ ಟ್ರಸ್ಟ್ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ಯೋಗಿ ಗುರೂಜಿ ವಿಶೇಷ ಉಪನ್ಯಾಸ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.