ಸೋಮವಾರ, ಜೂನ್ 21, 2021
30 °C

ಗುರುಭಕ್ತಿ ಉತ್ಸವಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು 393ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 419ನೇ ವರ್ಧಂತಿ ಉತ್ಸವ ಕಾರ್ಯಕ್ರಮವನ್ನೊಳಗೊಂಡ ‘ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವ’ಕ್ಕೆ ಚಾಲನೆ ಸೋಮವಾರ ಚಾಲನೆ ನೀಡಿದರು.ಬೆಳಿಗ್ಗೆ ರಾಘವೇಂದ್ರಸ್ವಾಮಿಗಳ ಮೂಲಬೃಂದಾವ­ನಕ್ಕೆ ಅಭಿಷೇಕ ನಡೆಯಿತು. ಅನಂತರ ರಾಯರ ಮೂಲ ಪಾದುಕೆಗಳಿಗೆ ಪೀಠಾಧಿಪತಿ ಮತ್ತು ಉತ್ತರಾಧಿಕಾರಿ­ಗಳಿಬ್ಬರು ಪುಷ್ಪ, ಕನಕ, ಮುತ್ತು, ರತ್ನಗಳಿಂದ ಅಭಿಷೇಕ ಮಾಡಿದರು.ನವರತ್ನ ಖಚಿತ ಚಿನ್ನದ ರಥೋತ್ಸವ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ರಾಘವೇಂದ್ರಸ್ವಾಮಿಗಳ ಮೂಲ ಪಾದುಕೆಗಳನ್ನಿಟ್ಟು ಉತ್ಸವ ಮಾಡಲಾಯಿತು. ಸಾವಿರಾರು ಭಕ್ತರು ಪಟ್ಟಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗುರುಭಕ್ತಿ ಉತ್ಸವವು ಮಾ.8ರವರೆ­ಗೆ ಮುಂದುವರಿಯಲಿದೆ.ಪೀಠಾಧಿಪತಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ಆಡಳಿತಾಧಿಕಾರಿ ಆರ್. ಪ್ರಭಾಕರರಾವ್, ರಾಜಾ ಎಸ್. ಗಿರಿರಾಜಾಚಾರ್ಯ, ವಿದ್ವಾಂಸರಾದ ವಿ.ಆರ್ ಪಂಚಮುಖಿ, ಎನ್. ವಾದಿರಾಜಾಚಾರ್ಯ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.