ಶುಕ್ರವಾರ, ಜೂನ್ 18, 2021
24 °C

ಗೃಹ ಇಲಾಖೆಗೆ 54,449 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಈ ಸಾಲಿನ ಮುಂಗಡ ಪತ್ರದಲ್ಲಿ ಗೃಹ ಇಲಾಖೆಗೆ 54,449 ಕೋಟಿ ರೂ. ನೀಡಲಾಗಿದ್ದು, ಹಿಂದಿನ ಅನುದಾನಕ್ಕೆ ಹೋಲಿಸಿದರೆ ಶೇ 2ರಷ್ಟು ಕಡಿತವಾಗಿದೆ.

ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆ ಸಿಬ್ಬಂದಿಯ ಕೊಠಡಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಆದಾಗ್ಯೂ, ಉದ್ದೇಶಿತ ಎನ್‌ಸಿಟಿಸಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನಿಗದಿಪಡಿಸಿಲ್ಲ. ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ಪ್ರಬಲ ವಿರೋಧದಿಂದಾಗಿ ಇದು ವಿಳಂಬವಾಗುತ್ತಿದೆ.

ಇಲಾಖಾ ಪಡೆಗಳ ಸಿಬ್ಬಂದಿಗೆ 400 ಕೋಣೆ ನಿರ್ಮಾಣಕ್ಕಾಗಿ 1,185 ಕೋಟಿ ಅನುದಾನ ನೀಡಲಾಗಿದೆ.

ಇಲಾಖೆಯ 27 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸಲು ನಿರ್ಮಿಸುವ ಕಚೇರಿ ಕಟ್ಟಡ ಮತ್ತು ಅದರ ಭೂ ಸ್ವಾಧೀನಕ್ಕಾಗಿ 3,280 ಕೋಟಿ ನೀಡಲಾಗಿದೆ.

ಗೃಹ ಸಚಿವ ಚಿದಂಬರಂ ಪ್ರಮುಖ ಯೋಜನೆಯಾದ ರಾಷ್ಟ್ರೀಯ ಗುಪ್ತಚರ ಜಾಲಕ್ಕೆ ಈ ವರ್ಷ 364.80 ಕೋಟಿ ನೀಡಲಾಗಿದ್ದು, ಕಳೆದ ವರ್ಷ 27.96 ಕೋಟಿ ಒದಗಿಸಲಾಗಿತ್ತು.

ರಾಷ್ಟ್ರದ ದೊಡ್ಡ ಅರೆಸೇನಾ ಪಡೆಯಾದ ಸಿಆರ್‌ಪಿಎಫ್‌ಗೆ ಈ ಬಾರಿ 9,307.10 ಕೋಟಿ ನೀಡಲಾಗಿದ್ದು, ಕಳೆದ ವರ್ಷ 8762.53 ನೀಡಲಾಗಿತ್ತು. ಗಡಿಭದ್ರತಾ ಪಡೆಗೆ 8400.58 ಕೋಟಿ ಒದಗಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.