ಶುಕ್ರವಾರ, ಮಾರ್ಚ್ 5, 2021
17 °C
ಪ್ರಜಾವಾಣಿ ಫಲಶ್ರುತಿ

ಗೋಕರ್ಣ ಕೋಟಿತೀರ್ಥ ತಾತ್ಕಾಲಿಕ ಸ್ವಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ ಕೋಟಿತೀರ್ಥ ತಾತ್ಕಾಲಿಕ ಸ್ವಚ್ಛ

ಗೋಕರ್ಣ: ಮಹಾಶಿವರಾತ್ರಿ ಸಮೀಪಿಸುತ್ತಿರುವುದರಿಂದ ಭಕ್ತರ ಭಾವನೆಗೆ ಧಕ್ಕೆ ಬಾರದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಕೋಟಿತೀರ್ಥದ ಪಾಚಿಯನ್ನೆಲ್ಲಾ ತೆಗೆದು ತಾತ್ಕಾಲಿಕವಾಗಿ ಸ್ವಚ್ಛಗೊಳಿಸಿದೆ.‘ಒಟ್ಟು  ₨40 ಸಾವಿರ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು ಮಹಾಶಿವರಾತ್ರಿ ಮುಗಿದ ನಂತರ ನೀರನೆಲ್ಲಾ ತೆಗೆದು ಸಂಪೂರ್ಣ ಸ್ವಚ್ಛತಾ ಕಾಮಗಾರಿಯನ್ನು ಮಾಡಲಾಗುವುದು. ಈಗಾಗಲೇ ಪ್ರವಾಸೋದ್ಯಮ ಇಲಾಖೆ ನಿರ್ಮಿತಿ ಕೇಂದ್ರದವರಿಗೆ ಈ ಕಾಮಗಾರಿ ಹೊಣೆ ವಹಿಸಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು ತಿಳಿಸಿದ್ದಾರೆ.‘ಕೋಟಿತೀರ್ಥದ ಕುರಿತು ‘ಪ್ರಜಾವಾಣಿ’ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಸ್ಥಳೀಯರೂ ಸಹ ಚಿಗುರು ಮಿತ್ರಮಂಡಳಿ ಮತ್ತು ಮಹಿಳಾ ಮಂಡಳಾ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಿದ್ದು ಇಲ್ಲಿ ಉಲ್ಲೇಖನೀಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.