ಹಿರಿಯೂರು: ತಾಲ್ಲೂಕಿನ ನಂದಿಹಳ್ಳಿಯ ರಂಗನಾಥಸ್ವಾಮಿ ದೇಗುಲದ ಮುಂಭಾಗದ ಬಯಲಿನಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ರಾಸುಗಳಿಗೆ ಹುಲ್ಲು ಹಾಕುವ ಮೂಲಕ ಗೋಶಾಲೆ ಉದ್ಘಾಟಿಸಿದರು.

ಹಣ ಕೊಟ್ಟರೂ ಮೇವು ಸಿಗುವುದು ಕಷ್ಟವಾಗಿದೆ. ಇಡೀ ದೇಶದಲ್ಲಿ ಬರಗಾಲ ಇರುವ ಕಾರಣ ಎಲ್ಲೂ ಮೇವಿನ ಲಭ್ಯತೆ ಇಲ್ಲ. ಪ್ರಯುಕ್ತ ರೈತರು ಮೇವನ್ನು ಜೋಪಾನವಾಗಿ ಬಳಸಬೇಕು. ಒಂದು ಕಡ್ಡಿಯೂ ಹಾಳಾಗದಂತೆ ಕತ್ತರಿಸಿ ಬಳಸಿ. ದನ-ಕರು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೆಲವೇ ದಿನಗಳಲ್ಲಿ ಮೇವು ಕತ್ತರಿಸುವ ಯಂತ್ರ ಕೊಡಿಸಲಾಗುವುದು ಎಂದುಭರವಸೆ ನೀಡಿದರು.

ಗೋಶಾಲೆಯಲ್ಲಿ ದನ-ಕರುಗಳ ಜತೆ ಇರುವ ರೈತರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂಬ ರೈತರ ಮನವಿಗೆ, ಮೊದಲು ಜಾನುವಾರು ಉಳಿಸುವ ಕೆಲಸ ಮಾಡೋಣ. ನಂತರ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ತಾಲ್ಲೂಕಿನ ಯಲ್ಲದಕೆರೆ ಗೋಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲೂ ಸಚಿವರು, ರೈತರಿಗೆ ಇದೇ ಭರವಸೆ ನೀಡಿದರು.

ಶಾಸಕ ಡಿ. ಸುಧಾಕರ್, ಉಪ ವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಜಿ.ಆರ್. ರಮೇಶ್, ರಾಘವೇಂದ್ರರೆಡ್ಡಿ, ಸುರೇಶ್ಬಾಬು, ಎಂ.ಟಿ. ಸುರೇಶ್, ಈರಲಿಂಗೇಗೌಡ, ಆರ್. ನಾಗೇಂದ್ರನಾಯ್ಕ, ತಿಪ್ಪೀರಣ್ಣ, ಚಿದಾನಂದ, ಅಶೋಕ್, ಸದಾನಂದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.