`ನಾನೀಗ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ...!.~
ಇದು ಅಪರೂಪಕ್ಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶುಭಾ ಪೂಂಜಾ ಮಾತು.

`ಹೆಚ್ಚಿನ ಸಿನಿಮಾಗಳಲ್ಲಿ ನಾನು ಕಾಣಿಸಿಕೊಂಡಿದ್ದು ಹಳ್ಳಿ ಹುಡುಗಿಯಾಗಿ. ಈಗ ಹಳ್ಳಿ ಹುಡುಗಿಯ ಇಮೇಜಿನಿಂದ ಹೊರಬಂದು ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ~ ಎನ್ನುವ ಶುಭಾ ಪೂಂಜಾ ಅವಕಾಶಗಳಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಹಾದಿ ತುಳಿದಿರುವ ಸೂಚನೆ ನೀಡಿದ್ದಾರೆ.

ಕಳೆದ ಐದು ವರ್ಷದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಶುಭಾ ನಟಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೇಳ ಹೆಸರಿಲ್ಲದಂತೆ ಕಳೆದುಹೋದವು. ದುನಿಯಾ ವಿಜಯ್ ಜೊತೆಗಿನ `ಕಂಠೀರವ~, ತರುಣ್ ಜೊತೆಗಿನ `ನಾನಲ್ಲ~ ಕಳೆದ ವರ್ಷ ಬಿಡುಗಡೆಯಾದ ಶುಭಾ ನಟಿಸಿದ ಚಿತ್ರಗಳು.

ಆದರೆ ಎರಡೂ ಚಿತ್ರಗಳು ಗೆಲ್ಲಲಿಲ್ಲ. ಜೊತೆಗೆ ಶುಭಾ ಚಿತ್ರಮಾರುಕಟ್ಟೆಯೂ ಕುಸಿಯಿತು. ಅದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಸದ್ಯ ಕನ್ನಡದಲ್ಲಿ ತೆರೆಕಾಣಬೇಕಿರುವ ಎರಡು ಚಿತ್ರಗಳು ಅವರ ಕೈಯಲ್ಲಿವೆ.

`ಗುಂಡ್ರಗೋವಿ~ ಸತ್ಯ ನಾಯಕರಾಗಿರುವ `ಬೀರ~ ಚಿತ್ರದ ಇಬ್ಬರು ನಾಯಕಿಯರಲ್ಲಿ ಶುಭಾ ಸಹ ಒಬ್ಬರು. ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಗ್ಲಾಮರಸ್ ಆಗಿ ಅವರು ಕಾಣಿಸಿಕೊಂಡಿದ್ದಾರಂತೆ. ಮತ್ತೊಂದು ಚಿತ್ರ `ಗೋಲ್ಮಾಲ್~ನಲ್ಲಿ ಕಾಮಿಡಿ ಪಾತ್ರ ತಮ್ಮದು ಎನ್ನುವ ಅವರು ಮಲಯಾಳಂ ಚಿತ್ರವೊಂದರಲ್ಲೂ ನಟಿಸುತ್ತಿದ್ದಾರೆ.

ಕನ್ನಡತಿಯಾದರೂ ಶುಭಾ ಮೊದಲು ಬಣ್ಣಹಚ್ಚಿದ್ದು ತಮಿಳು ಚಿತ್ರಗಳಲ್ಲಿ. ಕನ್ನಡಕ್ಕೆ ಕಾಲಿರಿಸುವಾಗಲೇ ನಾಲ್ಕು ತಮಿಳು ಚಿತ್ರಗಳಲ್ಲಿ ನಟಿಸಿದ್ದ ಶುಭಾ ಅಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಹಳ್ಳಿ ಹುಡುಗಿಯ ಪಾತ್ರಗಳಿಗೆ ಅವರ ಮುಖ ಚೆನ್ನಾಗಿ ಒಪ್ಪುತ್ತದೆ ಎಂಬ ಕಾರಣಕ್ಕೆ ಅಂತಹ ಪಾತ್ರಗಳೇ ಅರಸಿ ಬಂದವು.

ಹೀಗಾಗಿ ಹಳ್ಳಿ ಹುಡುಗಿ ಇಮೇಜ್ ಅಂಟಿಕೊಂಡಿತು. ಪಾತ್ರಗಳು ಖುಷಿ ಮತ್ತು ಹೆಸರು ಎರಡೂ ತಂದುಕೊಟ್ಟರೂ, ಅಂತಹ ಪಾತ್ರಗಳಿಗೆ ಸೀಮಿತವಾಗುತ್ತಿರುವುದರ ಬಗ್ಗೆ ಅವರಿಗೆ ಸ್ವಲ್ಪ ಬೇಸರವೂ ಇದೆ. ಮೊದಲ ಬಾರಿಗೆ `ಬೀರ~ ಚಿತ್ರದ ಮೂಲಕ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇನೆ. ಮುಂದೆಯೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಆಸೆ ನನ್ನದು ಎನ್ನುವ ಶುಭಾ, ನನಗೆ ಮಾಸ್ ಪ್ರೇಕ್ಷಕರು ಮೆಚ್ಚುವ ಕಮರ್ಷಿಯಲ್ ಚಿತ್ರಗಳ ಬಗ್ಗೆ ಹೆಚ್ಚಿನ ಒಲವು. `ಬಿ~ ಮತ್ತು `ಸಿ~ ಸೆಂಟರ್ಗಳ ಹೀರೋಯಿನ್ ಆಗಿ ಗುರುತಿಸಿಕೊಳ್ಳುವುದಕ್ಕೇ ಹೆಚ್ಚು ಇಷ್ಟಪಡುತ್ತೇನೆ~ ಎನ್ನುತ್ತಾರೆ.

ಹಳ್ಳಿ ಹುಡುಗಿಯ ವೇಷ ಕಳಚಿ ಗ್ಲಾಮರಸ್ ಆಗಿ ನಟಿಸಲು ಸೈ ಎಂದು ಶುಭಾ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವಕಾಶಗಳ ಹುಡುಕಾಟದಲ್ಲಿರುವ ಅವರಿಗೆ ಈಗಲಾದರೂ ಚಿತ್ರರಂಗದ ಕಣ್ಣು ಮತ್ತೆ ತಮ್ಮತ್ತ ತಿರುಗುತ್ತದೆ ಎಂಬ ಭರವಸೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.