ಚನ್ನಪಟ್ಟಣ: ಕಾನ್ಶಿರಾಂ ಜನ್ಮ ದಿನಾಚರಣೆ

7

ಚನ್ನಪಟ್ಟಣ: ಕಾನ್ಶಿರಾಂ ಜನ್ಮ ದಿನಾಚರಣೆ

Published:
Updated:

ಚನ್ನಪಟ್ಟಣ: ನೊಂದ ಶೂದ್ರ ಸಮಾಜಕ್ಕೆ ಆತ್ಮವಿಶ್ವಾಸ, ಗೌರವ ತಂದು ಕೊಟ್ಟ ಮಹಾ ಪುರುಷ ಕಾನ್ಶಿರಾಂ ಎಂದು ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಎಂ. ನಾಗೇಶ್ ಅಭಿಪ್ರಾಯಪಟ್ಟರು.ಪಟ್ಟಣದ ಬಿಎಸ್‌ಪಿ ಕಚೇರಿಯಲ್ಲಿ ನಡೆದ ಕಾನ್ಶಿರಾಂ ಜನ್ಮದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಶೂದ್ರರು ರಾಜ್ಯವಾಳುವ ಅವಕಾಶವನ್ನು ಮಾಡಿಕೊಟ್ಟ ಹಿರಿಮೆ ಸಾಮಾಜಿಕ ಚಳುವಳಿಗಾರ ಕಾನ್ಶಿರಾಂ ಅವರಿಗೆ ಸಲ್ಲುತ್ತದೆ ಎಂದರು.ಮಿಲಿಟರಿ ಶಾಲೆಯಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸಮಾಡಿದ ಅವರು  ಸಮಾಜದ ಉದ್ದಾರಕ್ಕಾಗಿ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ದೇಶದುದ್ದಗಲದಲ್ಲಿ ಪ್ರವಾಸ ಮಾಡಿ ಶೂದ್ರರಲ್ಲಿ ಆತ್ಮಾಭಿಮಾನ ಮೂಡಿಸಿದರೆಂದು ತಿಳಿಸಿದರು. ಸಂದರ್ಭದಲ್ಲಿ ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಸುಜೀವನ್ ಕುಮಾರ್, ಮುಖಂಡರಾದ ಜಯಶೀಲ, ಖಲೀಂ ಉಲ್ಲಾ ಮತ್ತಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry