ಮಂಗಳವಾರ, ಏಪ್ರಿಲ್ 13, 2021
25 °C

ಚಿಂತಾಮಣಿಗೆ ಬಂದ ರೈಲು ಎಂಜಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಕೋಲಾರದಿಂದ ನಗರಕ್ಕೆ ಬಂದ ರೈಲು ಎಂಜಿನ್‌ಗೆ ಮಂಗಳವಾರ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯರು ಪೂಜೆ ಸಲ್ಲಿಸಿ ಬರಮಾಡಿಕೊಂಡರು.ಅನೇಕ ವರ್ಷಗಳ ನಂತರ ನಗರಕ್ಕೆ ಬಂದ ರೈಲು ಎಂಜಿನನ್ನು ಕಂಡ ಜನರ ಸಂತಸಕ್ಕೆ ಪಾರವೇ ಇರಲಿಲ್ಲ. ಕೋಲಾರದಿಂದ ಚಿಂತಾಮಣಿ ವರೆಗೂ ಬ್ರಾಡ್‌ಗೇಜ್ ಕಾಮಗಾರಿ ಪೂರ್ಣವಾಗಿದ್ದು ಚಿಂತಾಮಣಿಯಿಂದ ಚಿಕ್ಕಬಳ್ಳಾಪುರವರೆಗೂ ಅಲ್ಪ-ಸ್ವಲ್ಪ ಕಾಮಗಾರಿ ಬಾಕಿ ಇದ್ದು ಕೆಲಸ ಭರದಿಂದ ಸಾಗಿದೆ. ಇನ್ನು ಒಂದೆರಡು ತಿಂಗಳುಗಳಲ್ಲಿ ಪ್ರಯಾಣಿಕರ ರೈಲು ಪ್ರಾರಂಭವಾಗಬಹುದು ಎನ್ನಲಾಗಿದೆ.ಮಂಗಳವಾರ ನಗರಕ್ಕೆ ಬಂದ ರೈಲು ಎಂಜಿನ್ ನಂತರ ಪ್ರಯೋಗಾರ್ಥವಾಗಿ ಶಿಡ್ಲಘಟ್ಟಕ್ಕೆ ಪ್ರಯಾಣ ಬೆಳಸಿತು.

ಅಧಿಕಾರಿಗಳಾದ ಅಮರಗುಂಡಪ್ಪ, ಮುರಳಿ, ಆನಂದ್, ಮುಸ್ತಾಪ್, ಸ್ಥಳೀಯರಾದ ರಾಜಣ್ಣ, ತ್ಯಾಗರಾಜ್  ಪೂಜೆ ಮಾಡಿ ಬರಮಾಡಿಕೊಂಡು ನಂತರ ಶಿಡ್ಲಘಟ್ಟಕ್ಕೆ ಬೀಳ್ಕೊಟ್ಟರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.