ಗುರುವಾರ , ಫೆಬ್ರವರಿ 25, 2021
17 °C
ರಾಷ್ಟ್ರೀಯ ಸಬ್ ಜೂನಿಯರ್ ಈಜು: ಮಿಂಚಿದ ಲಿಖಿತ್

ಚಿನ್ನ ಗೆದ್ದ ಕರ್ನಾಟಕದ ಸಂಜೀವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನ ಗೆದ್ದ ಕರ್ನಾಟಕದ ಸಂಜೀವ್

ಹೈದರಾಬಾದ್: ಕರ್ನಾಟಕದ ಆರ್. ಸಂಜೀವ್ 40ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಎರಡು ಚಿನ್ನದ ಪದಕಗಳನ್ನು ಬಾಚಿಕೊಂಡರು.ಗೌಚಿಬೌಲಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಗುಂಪು-2ರ ಸಂಜೀವ್ 800ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಎಂಟು ನಿಮಿಷ 51.02ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೊದಲ ಬಂಗಾರ ಗೆದ್ದುಕೊಂಡರೆ, 200ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಎರಡನೇ ಸ್ವರ್ಣ ಪಡೆದರು. ನಿಗದಿತ ಗುರಿಯನ್ನು ಸಂಜೀವ್ ಎರಡು ನಿಮಿಷ 17.63ಸೆಕೆಂಡ್‌ಗಳಲ್ಲಿ ತಲುಪಿದರು.ಹೋದ ವರ್ಷ ಚೆನ್ನೈನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸಂಜೀವ್ ಒಂದು ಬೆಳ್ಳಿ ಮಾತ್ರ ಜಯಿಸಿದ್ದರು. ಆದರೆ, ಮುತ್ತಿನ ನಗರಿಯಲ್ಲಿ ಎರಡು `ಬಂಗಾರ'ದ ಸಾಧನೆ ಮೂಡಿಬಂತು.ಲಿಖಿತ್‌ಗೂ ಚಿನ್ನ: 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪ್ರಾಬಲ್ಯ ಮೆರೆದ ಕರ್ನಾಟಕ ಈಜುಪಟು ಎಸ್.ಪಿ. ಲಿಖಿತ್ (ಕಾಲ: 30.89ಸೆಕೆಂಡ್) ಬಂಗಾರ ಜಯಿಸಿದರು. ಗುಜರಾತ್‌ನ ನೀಲ್ ಕಂಟ್ರ್ಯಾಕ್ಟರ್ (ಕಾಲ: 31.51ಸೆ.) ಬೆಳ್ಳಿ ಗೆದ್ದರೆ, ಮಹಾರಾಷ್ಟ್ರದ ಆರ್. ರಜನಿ (ಕಾಲ: 31.70ಸೆ.) ಕಂಚಿಗೆ ತೃಪ್ತಿ ಪಟ್ಟರು.1500ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ರಾಜ್ಯದ ಮಿತೇಶ್ ಮನೋಜ್ ಕುಂಟೆ 16 ನಿಮಿಷ 45.54 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಗಳಿಸಿದರು. ಈ ವಿಭಾಗದ ಎರಡನೇ ಸ್ಥಾನವೂ ಕರ್ನಾಟಕದ ಪಾಲಾಯಿತು. ಮಹಮ್ಮದ್ ಯಾಕೂಬ್ (ಕಾಲ: 16:45.64ಸೆ.) ಬೆಳ್ಳಿ ಗೆದ್ದರು. ಗುಜರಾತ್‌ನ ರಾಜ್ ಭನ್ವಾಡಿಯಾ (ಕಾಲ: 17:09.00)  ಕಂಚು ತಮ್ಮದಾಗಿಸಿಕೊಂಡರು.200ಮೀ. ಬಟರ್‌ಫ್ಲೇ ಸ್ಪರ್ಧೆಯಲ್ಲಿ ಮಿತೇಶ್ ಕುಂಟೆ (ಕಾಲ: 2:13.17ಸೆ.) ಕಂಚು, 50ಮೀಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಡಿ. ಮಾನವ್ (ಕಾಲ: 33.09ಸೆ) ಚಿನ್ನಕ್ಕೆ ಕೊರಳೊಡ್ಡಿದರು. ಬಾಲಕಿಯರ ವಿಭಾಗದಲ್ಲಿ 400ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ವಿ. ಮಾಳವಿಕಾ (ಕಾಲ: 4:36.26ಸೆ) ಕಂಚಿನ ಪದಕ ಗೆದ್ದುಕೊಂಡರು. 200ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕರ್ನಾಟಕದ ಕೆ. ಸಿಮ್ರಾನ್ ದೀಪಕ್ ಎರಡು ನಿಮಿಷ 33.83ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿಗೆ ತೃಪ್ತಿ ಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.