ಬುಧವಾರ, ಮೇ 12, 2021
18 °C

ಚಿನ್ನ ದರ ರೂ 775 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ(ಪಿಟಿಐ): ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಗುರುವಾರ ಭಾರಿ ಪ್ರಮಾಣದಲ್ಲಿ ತಗ್ಗಿದೆ. 10 ಗ್ರಾಂ ಅಪರಂಜಿ ಚಿನ್ನ ಮುಂಬೈನಲ್ಲಿರೂ765ರಿಂದ 775ರವರೆಗೂ ಇಳಿಮುಖವಾ ಯಿತು. ನವದೆಹಲಿಯಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಅಂದರೆ,ರೂ400ರಷ್ಟು ಇಳಿಕೆ ಕಂಡಿತು.ಮುಂಬೈನಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನರೂ765ರಷ್ಟು ಬೆಲೆ ತಗ್ಗಿಸಿಕೊಂಡುರೂ27,160ಕ್ಕೂ, ಅಪರಂಜಿ ಚಿನ್ನರೂ775ರಷ್ಟು ಮೌಲ್ಯ ಕಳೆದುಕೊಂಡುರೂ27,295ಕ್ಕೆ ಬಂದಿತು. ಸಿದ್ಧ ಬೆಳ್ಳಿಯೂ ಗುರುವಾರದ ವಹಿವಾಟಿನಲ್ಲಿರೂ1935ರಷ್ಟು ಭಾರಿ  ಕುಸಿತ ಕಂಡು ಕೆ.ಜಿ.ಗೆರೂ43,115ರಲ್ಲಿ ಮಾರಾಟವಾಯಿತು.ನವದೆಹಲಿಯಲ್ಲಿರೂ400ರಷ್ಟು ಮೌಲ್ಯ ಕಳೆದುಕೊಂಡ 10 ಗ್ರಾಂ ಅಪರಂಜಿ ಚಿನ್ನರೂ28,000ರಲ್ಲೂ, ಸ್ಟ್ಯಾಂಡರ್ಡ್ ಚಿನ್ನರೂ27,800ರಲ್ಲೂ ಮಾರಾಟವಾಯಿತು. ಬೆಳ್ಳಿ ಧಾರಣೆರೂ1500ರಷ್ಟು ಗರಿಷ್ಠ ಪ್ರಮಾಣದಲ್ಲಿ ಬೆಲೆ ಕಳೆದುಕೊಂಡಿತು. ಕೆ.ಜಿ.ಗೆರೂ43,100ರಲ್ಲಿ ವಹಿವಾಟು ನಡೆಸಿತು.

ಜಾಗತಿಕ ಪರಿಣಾಮಜಾಗತಿಕ ಮಟ್ಟದಲ್ಲಿ ಬಂಗಾರ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದೇ ಭಾರತದ ಚಿನಿವಾರ ಪೇಟೆಯಲ್ಲಿನ ಧಾರಣೆ ಇಳಿಕೆಗೆ ಕಾರಣವಾಯಿತು. ಜತೆಗೆ ಅಮೆರಿಕ ಆರ್ಥಿಕವಾಗಿ ಸದೃಢವಾಗುತ್ತಿರುವ ಹಿನ್ನೆಲೆಯಲ್ಲಿ  ಅಲ್ಲಿನ ಕೇಂದ್ರ ಬ್ಯಾಂಕ್ ಆರ್ಥಿಕ ಉತ್ತೇಜನ ಕ್ರಮಗಳನ್ನು ಈ ವರ್ಷಾಂತ್ಯ ವೇಳೆಗೆ ಕಡಿಮೆ ಮಾಡಲಿದೆ ಎಂಬ ಸುದ್ದಿ ಜಾಗತಿಕ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಕಳೆದ ಎರಡೂವರೆ ವರ್ಷದಲ್ಲಿಯೇ ಕಡಿಮೆ ಮಟ್ಟಕ್ಕೆ ಇಳಿಯುವಂತೆ ಮಾಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.