ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಗುರುವಾರ ಚೀನಾ ನೀಡಲು ಉದ್ದೇಶಿಸಿದ್ದ ಪ್ರಶಸ್ತಿ ತಿರಸ್ಕರಿಸಿದರು. ಭಾರತ-ಚೀನಾ ಸ್ನೇಹ ಅಭಿವೃದ್ಧಿ ಸಂಕೇತವಾಗಿ ಚೀನಾ ಪ್ರಧಾನಿ ವೆನ್ ಜಿಯೊಬೊ ಇಲ್ಲಿ ಈ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ತಮ್ಮನ್ನು ಚೀನಾ ಪರ ತೋರಿಸಿಕೊಳ್ಳಲು ಬಯಸದ ಕರಣ್ ಈ ಪ್ರಶಸ್ತಿ ನಿರಾಕರಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ವಿಶೇಷ ವೀಸಾ ನೀಡುತ್ತಿರುವ ಚೀನಾ ಕ್ರಮಕ್ಕೆ ರಾಜ್ಯಸಭಾ ಸದಸ್ಯ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಅಧ್ಯಕ್ಷ ಹಾಗೂ ಎಐಸಿಸಿ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷರೂ ಆದ ಕರಣ್ ಅವರ ಈ ನಿರ್ಧಾರ ಒಂದು ಪ್ರತಿಭಟನೆಯಾಗಿದೆ.
ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೇರಿ ಒಂಬತ್ತು ಗಣ್ಯರಿಗೆ ಭಾರತ-ಚೀನಾ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ಕಾರಣಕ್ಕಾಗಿ ನೀಡುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರಣ್ ತೆರಳಲಿಲ್ಲ. ಪ್ರೊ. ತಾನ್ ಚುಂಗ್, ಜಿ. ವಿಶ್ವನಾಥನ್, ಜಿ. ಬ್ಯಾನರ್ಜಿ, ಎಂ. ಮೋಹಂತಿ, ಎಸ್. ಚಕ್ರವರ್ತಿ, ಭಾಸ್ಕರನ್, ಶೆರ್ಡಿಲ್ ಹಾಗೂ ಪಲ್ಲವಿ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದ ಇತರ ಭಾರತೀಯರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.