ಹಾಸನ: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕಾವು ಏರುತ್ತಿದ್ದಂತೆ ಕೆಲವು ಹಣವಂತರೂ ಕಣಕ್ಕೆ ಧುಮುಕುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು ಟಿಕೆಟ್ಗಾಗಿ ಮುಖಂಡರ ಮನೆ, ಕಚೇರಿಗಳಿಗೆ ಅಲೆದಾಡುತ್ತಿದ್ದರೆ, ಕೆಲವು ಮುಖಂಡರು ತಮ್ಮ ಮಕ್ಕಳ ಟಿಕೆಟ್ ಖಾತರಿಪಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಕೆಲವು ಮುಖಂಡರ ಮಕ್ಕಳೂ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದು, ಅವರಿಗೆ ಟಿಕೆಟ್ ಸಹ ಬಹುತೇಕ ಖಚಿತವಾಗಿದೆ. ಒಳಗಿನ ಬೇಗುದಿಯನ್ನು ತಣಿಸದಿದ್ದರೆ ಕಾರ್ಯಕರ್ತರ ಪಡೆ ಇದ್ದರೂ ಗೆಲುವು ಸುಲಭವಲ್ಲ ಎಂಬ ಪಾಠವನ್ನು ಜೆಡಿಎಸ್ ಈಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಿಂದ ಕಲಿತುಕೊಂಡಿದೆ. ಆದರೆ ಅದೇ ಚುನಾವಣೆ ಕಾಂಗ್ರೆಸ್ನಲ್ಲಿ ಹೊಸ ಉತ್ಸಾಹ ತುಂಬಿದೆ. ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು, ಒಗ್ಗಟ್ಟಾಗಿ ದುಡಿದರೆ ಜೆಡಿಎಸ್ ಕೋಟೆಯನ್ನು ಒಡೆದು ಒಳಗೆ ಪ್ರವೇಶ ಪಡೆಯಬಹುದು ಎಂಬ ಭಾವನೆ ಕಾಂಗ್ರೆಸ್ನಲ್ಲಿ ಮೂಡಿದೆ. ಆದರೆ ದುಪ್ಪಟ್ಟಾಗಿರುವ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕಾಂಗ್ರೆಸ್ಗೆ ತಲೆನೋವಾಗಿದೆ.

‘ಕೋಟಿ’ ಬೇಕು ಚುನಾವಣೆಗೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಸಾಕಷ್ಟು ಕೆಲಸ ಮಾಡಿದೆ ಎಂಬುದು ಬಹಿರಂಗ ಸತ್ಯ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು ಈಚೆಗೆ ಪತ್ರಿಕಾಗೋಷ್ಠಿಯಲ್ಲೇ ಈ ಮಾತನ್ನು ಒಪ್ಪಿಕೊಂಡು, ‘ಎಷ್ಟು ಏನು ಎಂದು ಹೇಳುವುದಿಲ್ಲ. ಚುನಾವಣೆಯಲ್ಲಿ ಹಣ ವೆಚ್ಚವಾಗುವುದು ಸಾಮಾನ್ಯ, ಕಾಂಗ್ರೆಸ್ ಮಾತ್ರವಲ್ಲ ಎಲ್ಲರೂ ಬೇಕಾದಷ್ಟು ಖರ್ಚು ಮಾಡಿದ್ದಾರೆ’ ಎಂದಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಹಣದ ಹೊಳೆ ಹರಿಯುವ ಸೂಚನೆ ಈಗಾಗಲೇ ಲಭ್ಯವಾಗುತ್ತಿದೆ. ‘ಟಿಕೆಟ್ ಸಿಕ್ಕರೆ ಒಂದು ಕೋಟಿ ವರೆಗೂ ವೆಚ್ಚ ಮಾಡಲು ಸಿದ್ದ’ ಎಂದು ಅನೇಕ ಟಿಕೆಟ್ ಆಕಾಂಕ್ಷಿಗಳು ಹೇಳುತ್ತಿದ್ದಾರೆ. ಅದೇ ಭರವಸೆಯನ್ನು ಪಕ್ಷದ ಮುಖಂಡರಿಗೂ ಕೊಡುತ್ತಿದ್ದಾರೆ. ಜತೆಯಲ್ಲೇ ಕೆಲವು ಹಣವಂತರು, ರಿಯಲ್ಎಸ್ಟೇಟ್ ವ್ಯಕ್ತಿಗಳೂ ಟಿಕೆಟ್ಗಾಗಿ ನಾಯಕರ ಬಳಿ ಎಡತಾಕುತ್ತಿದ್ದಾರೆ.

ಕಣಕ್ಕೆ ಧುಮುಕುತ್ತಿದ್ದಾರೆ ಮಕ್ಕಳು, ಸಂಬಂಧಿಕರು: ಕಳೆದ ಬಾರಿ ಜಿಲ್ಲಾ ಪಂಚಾಯಿತಿಯಲ್ಲಿ ಮುಖಂಡರ ಮಕ್ಕಳು, ಕುಟುಂಬದವರು ಇರಲಿಲ್ಲ. ಒಬ್ಬ ಶಾಸಕರ ಸಹೋದರ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕೆಲವು ಮುಖಂಡರು, ಶಾಸಕರ ಮಕ್ಕಳು ಕಣಕ್ಕೆ ಧುಮುಕುವುದು ಬಹುತೇಕ ಖಚಿತವಾಗಿದೆ.

ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರ ಪುತ್ರ ಡಾ.ಮಂಥರ್ ಗೌಡ ರಾಮನಾಥಪುರ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಖಚಿತಪಡಿಸಿದ್ದಾರೆ.

ಇತ್ತ ಹಾಸನ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ (ಜೆಡಿಎಸ್) ಅವರ ಪುತ್ರ ಸ್ವರೂಪ್ ಕಂದಲಿ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ವಿಧಾನಪರಿಷತ್ತಿನ ಮಾಜಿ ಸದಸ್ಯ, ಆಹಾರ ನಿಗಮದ ಹಾಲಿ ಅಧ್ಯಕ್ಷ ಎಸ್.ಎಂ. ಆನಂದ್ ಅವರ ಪುತ್ರ ಸಿದ್ಧತೆ ಮಾಡುತ್ತಿದ್ದಾರೆ. ಆದರೆ ಅಲ್ಲಿ ಇನ್ನೊಬ್ಬ ಪ್ರಬಲ ಆಕಾಂಕ್ಷಿಯೂ ಇದ್ದು, ಸಚಿವ ಎ. ಮಂಜು ಅವರ ಪರ ಇದ್ದಾರೆ ಎನ್ನಲಾಗುತ್ತಿದೆ.

ಹೊಳೆನರಸೀಪುರ ತಾಲ್ಲೂಕಿನಲ್ಲಿ ದಿ.ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ, ಕಳೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅನುಪಮಾ ಅವರ ಪುತ್ರ ಶ್ರೇಯಸ್ ಕಣಕ್ಕೆ ಇಳಿಯಲಿದ್ದಾರೆ. ತಮ್ಮ ಪುತ್ರ ಪ್ರಜ್ವಲ್ ಅವರನ್ನು ಹಳೇಕೋಟೆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ರೇವಣ್ಣ ಆಸಕ್ತಿ ವಹಿಸಿದ್ದರು. ಆದರೆ ಪ್ರಜ್ವಲ್ ಜಿಲ್ಲಾ ಪಂಚಾಯಿತಿಗೆ ಆಸಕ್ತಿ ತೋರಿಸುತ್ತಿಲ್ಲ, ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರ ಪತ್ನಿ ಚಂಚಲಾ ಆಲೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಅವರು ಸಕಲೇಶಪುರ ತಾಲ್ಲೂಕಿನ ಬೆಳಗೋಡು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಅಣ್ಣ ಪುಟ್ಟಸ್ವಾಮಿಗೌಡ ಕಸಬಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಬಾಲಕೃಷ್ಣ ಅವರ ಪತ್ನಿ ಜಿ.ಪಂ. ಹಾಲಿ ಸದಸ್ಯೆ. ಅವರ ಕ್ಷೇತ್ರದ ಮೀಸಲಾತಿ ಬದಲಾಗಿದ್ದು, ಈ ಬಾರಿ ಬಾಗೂರು ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ. ಆದರೆ ಒಂದೇ ಕುಟುಂಬದ ಮೂವರಿಗೆ ಅಧಿಕಾರ ಕೊಟ್ಟರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗಬಹುದು ಎಂಬ ಭೀತಿಯಿಂದ ಜೆಡಿಎಸ್ ಮುಖಂಡರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಇವರಿಗೆ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ. ಮಾಜಿ ಶಾಸಕ, ಹಾಲಿ ಕಾಂಗ್ರೆಸ್ ಮುಖಂಡ ಸಿ.ಎಸ್. ಪುಟ್ಟೇಗೌಡ ಅವರ ತಮ್ಮ ಶಂಕರಣ್ಣ ಅವರ ಮಗ ಯುವರಾಜ್ ಚನ್ನರಾಯಪಟ್ಟಣ ಕಸಬಾ ಕ್ಷೇತ್ರದಿಂದ ಪುಟ್ಟಸ್ವಾಮಿಗೌಡ ಅವರಿಗೆ ಸ್ಪರ್ಧೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಬಾಲಕೃಷ್ಣ ಅವರ ಅಣ್ಣನೇ ಇಲ್ಲಿ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ನಿಂದ ಇಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಆಗಿದೆ.

ಇವರಲ್ಲಿ ಬಹುತೇಕ ಎಲ್ಲರೂ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲೇಬೇಕು ಎಂಬ ಜಿದ್ದು ಎರಡೂ ಪಕ್ಷಗಳಲ್ಲಿ ಮೂಡಿರುವುದರಿಂದ ಇಂಥ ಪ್ರಭಾವಶಾಲಿಗಳತ್ತ ಪಕ್ಷಗಳು ಒಲವು ತೋರಬಹುದು. ಮುಖಂಡರ ಕುಟುಂಬದ ಇನ್ನೂ ಕಲವರು ಕಣಕ್ಕೆ ಇಳಿದರೂ ಅಚ್ಚರಿ ಇಲ್ಲ.

ಶಕ್ತಿ ಪ್ರದರ್ಶನ ಆರಂಭ: ದೊಡ್ಡ ಮಟ್ಟದ ರಾಜಕೀಯ ಪರಿವರ್ತನೆಗಳಾದಾಗ ಪ್ರಭಾವಿ ನಾಯಕರು, ಸಚಿವರು ಶಕ್ತಿ ಪ್ರದರ್ಶನ ಮಾಡುವುದಿದೆ. ಆದರೆ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳೇ ಶಕ್ತಿ ಪ್ರದರ್ಶನ ಆರಂಭಿಸಿದ್ದಾರೆ. ಗುರುವಾರ ಇಬ್ಬರು ಅಭ್ಯರ್ಥಿಗಳು ಕಾಂಗ್ರೆಸ್ ಕಚೇರಿ ಮುಂದೆ ಬೆಂಬಲಿಗರ ಪ್ರದರ್ಶನ ಮಾಡಿದ್ದಾರೆ.

ಅತ್ತ ಜೆಡಿಎಸ್ನಲ್ಲೂ ಇಂಥ ಪ್ರಸಂಗಗಳು ನಡೆಯುತ್ತಿವೆ. 300 – 400 ಬೆಂಬಲಿಗರೊಂದಿಗೆ ಮುಖಂಡರ ಮನೆಗೆ ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡುವುದರ ಜೊತೆಗೆ ಪರೋಕ್ಷವಾಗಿ ಟಿಕೆಟ್ ಕೊಡದಿದ್ದರೆ ಬಂಡಾಯದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಇದು ಮುಖಂಡರಿಗೆ ಸಮಸ್ಯೆಯಾಗುತ್ತಿದೆ.
ಹಾಸನದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫೆ.1ರಂದು ಅಧಿಸೂಚನೆ ಹೊರಡಲಿದೆ. ಇದಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಹೋರಾಟ ಇನ್ನಷ್ಟು ತೀವ್ರಗೊಳ್ಳುವುದು ನಿಚ್ಚಳವಾಗಿದೆ.

ಈ ಬಾರಿ ಕನಿಷ್ಠ 30 ರಿಂದ 35 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಜಿ.ಪಂ. ಅಧಿಕಾರವನ್ನು ನಮ್ಮ ಪಕ್ಷದವರೇ ಹಿಡಿಯುತ್ತಾರೆ
- ಎಂ.ಎ. ಗೋಪಾಲಸ್ವಾಮಿ,
ವಿಧಾನಪರಿಷತ್ ಸದಸ್ಯ

ಪರಿಷತ್ ಚುನಾವಣೆಯಂತೆ ಆಣೆ– ಪ್ರಮಾಣ ಜಿ.ಪಂ. ಚುನಾವಣೆಯಲ್ಲಿ ನಡೆಯುವುದಿಲ್ಲ. ಅಧಿಕಾರ ಉಳಿಸಿಕೊಳ್ಳುವುದು ನಮಗೆ ಗೊತ್ತಿದೆ
- ಎಚ್.ಡಿ. ರೇವಣ್ಣ,
ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.