ಭಾನುವಾರ, ಜೂನ್ 13, 2021
21 °C

ಜಾತಕ, ಗೋತ್ರಗಳು ಅವೈಜ್ಞಾನಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಕ ಹೊಂದಾಣಿಕೆಯ ವೈವಾಹಿಕ ಸಂಬಂಧಗಳು ಅವೈಚಾರಿಕ ಹಾಗೂ ಅವೈಜ್ಞಾನಿಕ (ಪ್ರವಾ. ಮಾ.9) ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ನಿರ್ದಿಷ್ಟವಾಗಿ ಜಾತಕ ಸಿದ್ಧಪಡಿಸುವುದೇ ಅಸಾಧ್ಯ. ಒಂದು ಮಗು ಯಾವ ಮುಹೂರ್ತದಲ್ಲಿ ಅಥವಾ ಯಾವ ಕ್ಷಣದಲ್ಲಿ ಹುಟ್ಟುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಮಗು ಜೀವ ಪಡೆಯುವ ಹಾಗೂ ಹುಟ್ಟುವ ಪ್ರಕ್ರಿಯೆ ದೀರ್ಘ ಸಮಯದ್ದಿರುತ್ತದೆ.

ಅಲ್ಲದೆ ಗೋತ್ರದ ಕಲ್ಪನೆ ಕೂಡ ನಿರಾಧಾರವಾದದ್ದು; ಸಾವಿರಾರು ವರ್ಷಗಳಿಂದ ವರ್ಣ ಸಂಕರ ನಡೆಯುತ್ತಲೇ ಬಂದಿದೆ. ಮೂಲ ವಂಶಜರು ಎನ್ನಲಾಗುವ ವಿಶ್ವಾಮಿತ್ರ, ಕಶ್ಯಪ, ಭಾರದ್ವಾಜ ಮೊದಲಾದವರ ವಂಶವಾಹಿನಿಗಳು ಕೆಲವು ನಿರ್ದಿಷ್ಟ ಮನೆತನಗಳಲ್ಲಿ ಮಾತ್ರ ಇಂದಿಗೂ ಹರಿಯುತ್ತಿರುವುದು ಸಾಧ್ಯವಿಲ್ಲ. ಆದ್ದರಿಂದ ಸಗೋತ್ರ ವಿವಾಹ ನಿಷಿದ್ಧ ಎನ್ನುವುದು ಅರ್ಥಹೀನ. ಬೇರೆ ಬೇರೆ ಗೋತ್ರಗಳ ಗಂಡು ಹೆಣ್ಣು ಮದುವೆಯಾಗಿ ಕೂಡಿದಾಗಲೇ ಎರಡು ಗೋತ್ರಗಳ ಮಿಶ್ರಣವಾಗಿ ಬಿಡುತ್ತದೆ. ಅವರಿಗೆ ಹುಟ್ಟುವ ಮಗುವಿಗೆ ತಾಯಿ ಗೋತ್ರವನ್ನು ಅಲಕ್ಷಿಸಿ ತಂದೆಯ ಗೋತ್ರವನ್ನು ಮಾತ್ರ ಹೆಸರಿಸುವುದು ಅವೈಜ್ಞಾನಿಕ.

ಜಾತಕ ಹೊಂದಾಣಿಕೆಯಾಗಿ ಮದುವೆಯಾದ ದಾಂಪತ್ಯ ಹಾಳಾದ ಉದಾಹರಣೆಗಳೂ ಇವೆ; ಹಾಗೆಯೇ ಜಾತಕ ನೋಡದೇ ಮದುವೆಯಾದ ದಾಂಪತ್ಯ ಯಶಸ್ವಿಯಾಗಿವೆ. ಮತ್ತು ಸಗೋತ್ರ ವಿವಾಹವಾದವರ ಸಂತಾನ ಕೆಡುತ್ತದೆ ಎನ್ನುವುದಕ್ಕೆ ಸಮೂಹ ನಿದರ್ಶನಗಳಿಲ್ಲ. ಜಗತ್ತಿನ ಆರುನೂರು ಕೋಟಿ ಜನರಲ್ಲಿ ಗೋತ್ರ, ಜಾತಕ ಅನುಸರಿಸುವವರು ಶೇ 0.01ಕ್ಕಿಂತ ಕಡಿಮೆ. ಆದ್ದರಿಂದ ಜಾತಕ, ಗೋತ್ರಗಳೆಲ್ಲ ಅವೈಚಾರಿಕ ನಂಬಿಕೆಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.