ಬೆಂಗಳೂರು: ‘ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಜಾನಪದ ಕಲಾವಿದರನ್ನು ವಿನಾಕಾರಣ ಅವಮಾನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಆರೋಪಿಸಿದರು.

‘ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಮಾ.11ರಂದು ರಾತ್ರಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಸಿಕೊಡಲು ಜಾನಪದ ಗಾಯಕರನ್ನು ಆಹ್ವಾನಿಸಲಾಗಿತ್ತು. ಉದ್ಘಾಟನಾ ಕಾರ್ಯಕ್ರಮವು ಎರಡು ಗಂಟೆ ತಡವಾಗಿ ಮುಕ್ತಾಯವಾದ್ದರಿಂದ ರಾತ್ರಿ 11.20ಕ್ಕೆ ನಮಗೆ ಅವಕಾಶ ಕಲ್ಪಿಸಲಾಯಿತು. ಈ ಕಾರ್ಯಕ್ರಮವನ್ನು ರದ್ದುಪಡಿಸಿ ನಮಗೆ ಅವಕಾಶ ನೀಡಬೇಕೆಂದು ಕಾರ್ಯಕ್ರಮದ ವ್ಯವಸ್ಥಾಪಕರ ಮೇಲೆ ಹಂಸಲೇಖ ಒತ್ತಡ ಹೇರಿದರು’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಾರ್ಯಕ್ರಮ ನಡೆಸಿಕೊಡಲು ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನ್ನಿ, ಬಸವಲಿಂಗಯ್ಯ ಹಿರೇಮಠ, ಶಂಭುಲಿಂಗ ವಾಲ್ದೂಡ್ಡಿ, ವೇಮಗಲ್ ನಾರಾಯಣಸ್ವಾಮಿ, ಕನ್ನಿಕ, ಗೌರಮ್ಮ ಮತ್ತು ನನ್ನನ್ನು ಆಹ್ವಾನಿಸಲಾಗಿತ್ತು. ನಮ್ಮ ಕಾರ್ಯಕ್ರಮದ ತರುವಾಯ ಹಂಸಲೇಖ ಅವರ ಕಾರ್ಯಕ್ರಮವಿತ್ತು. ಆದರೆ ಅದಕ್ಕೂ ಮೊದಲೇ ಅವರು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾರ್ಯಕ್ರಮ ರದ್ದು ಪಡಿಸಲು ಪ್ರಯತ್ನಿಸಿದರು’ ಎಂದು ವಿವರಿಸಿದರು.

‘ಸಮಯದ ಅಭಾವದಿಂದಾಗಿ ಒಂದು ಗಂಟೆಯಲ್ಲಿ ಕಾರ್ಯಕ್ರಮ ಮುಗಿಸಲು ವೇದಿಕೆಯ ವ್ಯವಸ್ಥಾಪಕರು ಸಮಯ ನಿಗದಿಪಡಿಸಿದರು. ಅದರಂತೆ ನಮ್ಮ ತಂಡವು ತಮಟೆ ವಾದ್ಯಗಳೊಂದಿಗೆ ವೇದಿಕೆ ಏರುತ್ತಿದ್ದಂತೆ ಹಂಸಲೇಖ ಅವರು ನಿರೂಪಕರ ಬಳಿ ಜಗಳ ಮಾಡಿ ತೊಂದರೆ ನೀಡಿದರು. ವಿಧಿಯಿಲ್ಲದೇ ಹತ್ತು ಜನ ಗಾಯಕರಿದ್ದ ನಾವು ಕೇವಲ ಐದು ಗಾಯಕರಿಂದ ಹಾಡುಗಳನ್ನು ಹಾಡಿಸಿ ಕಾರ್ಯಕ್ರಮ ಮುಗಿಸಬೇಕಾಯಿತು’ ಎಂದು ಹೇಳಿದರು.

‘ಕಾರ್ಯಕ್ರಮ ಮುಗಿಸಿ ಹೊರ ನಡೆಯುತ್ತಿದ್ದ ಸಂದರ್ಭದಲ್ಲಿ ವೇದಿಕೆಯ ಪಕ್ಕದಲ್ಲಿ ನಿಂತಿದ್ದ ಹಂಸಲೇಖ ಅವರು ನನ್ನನ್ನು ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನೀವೇನು ಮಹಾನ್ ಕಲಾವಿದರೇ? ವೇದಿಕೆ ಬಿಟ್ಟುಕೊಡಬಹುದಿತ್ತಲ್ಲಾ’ ಎಂದು ಕೂಗಾಡಿದರು. ಆಗ ನಾನು ‘ಕಲಾವಿದರಾದ ನೀವು ‘ದೇಸಿ’ ಸಂಸ್ಥೆ ಕಟ್ಟಿ ಜಾನಪದ ಕಲೆಗಳ ಬೆಳವಣಿಗೆಗಾಗಿ ದುಡಿಯುತ್ತಿದ್ದೀರಿ. ಜಾನಪದ ಗಾಯಕರಿಗಾಗಿ ನೀವೇ ವೇದಿಕೆ ಬಿಟ್ಟುಕೊಡಬಹುದಿತ್ತು’ ಎಂದು ಕೇಳಿದೆ.

ಇದರಿಂದ ಆಕ್ರೋಶಗೊಂಡ ಅವರು ‘ನಾವೇನು ನಿಮ್ಮ ತರಹ ಬೀದಿಯಲ್ಲಿ ಹಾಡುವವರು ಎಂದುಕೊಂಡಿದ್ದೀಯಾ’ ಎಂದು ಕೂಗಾಡಿ ಸವಿತಾ ಸಮಾಜದವರ ಮನಸ್ಸಿಗೆ ನೋವುಂಟಾಗುವ ಪದ ಬಳಸಿ ನಿಂದಿಸಿದರು’ ಎಂದು ದೂರಿದರು.‘ಹಂಸಲೇಖ ಅವರು ಸವಿತಾ ಸಮಾಜದವರ ಕ್ಷಮೆ ಯಾಚಿಸಬೇಕು. ಹಾಗೆಯೇ ಸಾರ್ವಜನಿಕವಾಗಿ ಜಾನಪದ ಕಲಾವಿದರ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು. ಜಾನಪದ ಗಾಯಕ ಜೋಗಿಲ ಸಿದ್ದರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.