ಬುಧವಾರ, ಜನವರಿ 29, 2020
29 °C

ಜಾಹೀರಾತು ಫಲಕ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದಲ್ಲಿ ಅನಧಿಕೃತವಾಗಿ ರಸ್ತೆ ಬದಿ ಮತ್ತು ಜಂಕ್ಷನ್‌ಗಳಲ್ಲಿ ಹಾಕಿದ್ದ ಫ್ಲೆಕ್ಸ್ ಬೋರ್ಡ್, ಬಂಟಿಂಗ್ಸ್ ಮತ್ತು ಇತರ ಪ್ರಚಾರ ಫಲಕಗಳನ್ನು ತೆರವುಗೊಳಿಸಿದೆ.ಜ. 10 ರಂದು ಪೂರ್ವ ವಲಯ ವ್ಯಾಪ್ತಿಯಲ್ಲಿ  2 ಕಟೌಟ್‌ಗಳು, 90 ಬಟ್ಟೆ ಬ್ಯಾನರ್‌ಗಳು, 80 ಪ್ಲಾಸ್ಟಿಕ್ ಕಾರ್ಡ್‌ಗಳು ಮತ್ತು 150 ಪೇಪರ್ ಸ್ಟಿಕ್ಕರ್‌ಗಳನ್ನು ತೆರವುಗೊಳಿಸಲಾಗಿದೆ. 11ರಂದು ಇದೇ ವ್ಯಾಪ್ತಿಯಲ್ಲಿ 5 ಕಟೌಟ್‌ಗಳು, 50 ಬಟ್ಟೆ ಬ್ಯಾನರ್‌ಗಳು, 80 ಪ್ಲಾಸ್ಟಿಕ್ ಕಾರ್ಡ್‌ಗಳು ಮತ್ತು 120 ಪೇಪರ್ ಸ್ಟಿಕ್ಕರ್‌ಗಳನ್ನು ತೆರವುಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)